- ಜಗಳೂರಿನಲ್ಲಿ ಸಮ್ಮೇಳನ ಗೋಷ್ಠಿಯಲ್ಲಿ ಡಾ.ಮಲ್ಲಿಕಾರ್ಜುನ್ ಕಲಮರಹಳ್ಳಿ ಉಪನ್ಯಾಸ - - - ಕನ್ನಡಪ್ರಭ ವಾರ್ತೆ ಜಗಳೂರು
ಬುಡಕಟ್ಟು ಸಮಯದಾಯಗಳಲ್ಲಿ ವಿಶಿಷ್ಟ ಸಂಸ್ಕೃತಿ, ಹೋರಾಟದ ಬದುಕು ಅಡಗಿರುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಸಾಹಿತಿ ಮಲ್ಲಿಕಾರ್ಜುನ್ ಕಲಮರಹಳ್ಳಿ ಹೇಳಿದರು.ಪಟ್ಟಣದ ಬಯಲುರಂಗ ಮಂದಿರ ಆವರಣದಲ್ಲಿ ನಿರ್ಮಿಸಿರುವ ವಿದ್ಯಾರತ್ನ ಡಾ.ತಿಪ್ಪೇಸ್ವಾಮಿ ಸಭಾಂಗಣ, ಮಹಾಲಿಂಗ ರಂಗವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಬುಡಕಟ್ಟು ಸಮುದಾಯಗಳ ಸಂಸ್ಕೃತಿ ವಿಷಯ ಕುರಿತು ಗೋಷ್ಠಿಯಲ್ಲಿ ಅವರು ವಿಷಯ ಮಂಡಿಸಿ ಅವರು ಮಾತನಾಡಿದರು.
''''ರಾಜ್ಯದಲ್ಲಿ 60 ಬುಡಕಟ್ಟು ಸಮುದಾಯಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಅವರ ದೈವಗಳು ಅಮೂರ್ತ ಸ್ವರೂಪವಾಗಿರುತ್ತವೆ. ಮರ-ಗಿಡ, ಆಯುಧ, ಕೇಲುಗಳಾಗಿರುತ್ತವೆ. ಮನುಕುಲದಲ್ಲಿ ಜನಿಸಿ ವಿಶಿಷ್ಟ ದೈವಸಿದ್ದಿಗಳನ್ನು ಗಳಿಸಿರುತ್ತಾರೆ. ಜನಪರವಾಗಿ ಹೋರಾಟ ನಡೆಸುತ್ತಾ ಮಡಿದು ವೀರಗಾರರಾಗಿದ್ದಾರೆ. ಮೈಮೇಲೆ ದೇವರು ಬಂದ ಕುರುಹು ನೀಡುತ್ತಾರೆ. ಕಟ್ಟೆ, ಅಂಬೆ ಕೊಂಬೆಗಳಂತಹ ವಿಶಿಷ್ಟ ಸಂಸ್ಕೃತಿಗಳು ನೆಲೆಸಿರುತ್ತವೆ. ಬುಡಕಟ್ಟುಗಳಲ್ಲಿ ಮಾಂಗಲ್ಯಕ್ಕೆ ಮಹತ್ವವಿಲ್ಲ. ಏಕತ್ವದ ಸೂತ್ರದಡಿಯಲ್ಲಿರದೇ, ಬಹುತ್ವದ ಸಂಸ್ಕೃತಿ ಹೊಂದಿರುತ್ತವೆ. ಸಾಂಸ್ಕೃತಿಕ ಅನನ್ಯತೆಗಳನ್ನು ಮುಂದಿಟ್ಟುಕೊಂಡು ಏಕತ್ವದ ಒತ್ತಡ ಬಂದರೆ ಪ್ರತಿರೋಧಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು.ಜೇನುಕುರುಬ, ಸೋಲಿಗ, ಕಾಡುಗೊಲ್ಲ, ಲಂಬಾಣಿ, ಮ್ಯಾಸಬುಡಕಟ್ಟು ಜನಾಂಗಗಳ ಬದುಕಿನ ಶೈಲಿ, ಉಡುಗೆ ತೊಡುಗೆ, ಸಮಾಜೋ, ಸಂಸ್ಕೃತಿ ಆಚರಣೆಗಳು ಸಾಮೂಹಿಕ ಕ್ರಿಯೆಗಳಾಗಿ ಇರುವುದನ್ನು ಗರ್ಭಾವಸ್ಥೆಯಿಂದ ಜನನದಿಂದ ಮರಣದವರೆಗೆ ಅನುಸರಿಸುವ ಸಾಂಪ್ರಾದಾಯಿಕ ಕಲೆಗಳನ್ನು, ಆರಾಧ್ಯ ದೈವ, ಹಬ್ಬ ಹರಿದಿನಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ ಡಾ. ಜಿ.ಕೆ.ಪ್ರೇಮಾ ವಿಷಯ ಮಂಡಿಸಿ ಮಾತನಾಡಿ, ''''''''ಬುಡಕಟ್ಟು ಸಮುದಾಯಗಳ ಸಾಮಾಜಿಕ ಸ್ಥಿತಿಗತಿ, ಪರಂಪರೆಗಳನ್ನು ವರ್ತಮಾನಕ್ಕೆ ತುಲನೆಮಾಡಬೇಕಿದೆ. ಇತ್ತೀಚಿನ ಸಾಹಿತ್ಯ ಸಮ್ಮೇಳನಗಳಲ್ಲಿ ಬುಡಕಟ್ಟು ಸಮುದಾಯಗಳ ಧ್ವನಿಯಾಗುತ್ತಿರುವುದು ಶ್ಲಾಘನೀಯ. ಬುಡಕಟ್ಟು ಸಮುದಾಯಗಳ ಕುರಿತು ಅಧ್ಯಯನ ಮಾಡಿದ ವಿದ್ವಾಂಸರು ವಿರಳ ಮಾತ್ರ. ಬುಡಕಟ್ಟು ಸಮುದಾಯಗಳ ಅಸ್ಮಿತೆಯನ್ನು ತೋರುವ ಅನಿವಾರ್ಯತೆಗಳಿವೆ. ಸಾಮಾಜಿಕ ಭದ್ರತೆಯಿಲ್ಲ. ಕೃಷಿ, ಹೈನುಗಾರಿಕೆ, ಕುರಿಗಾಹಿಕೆ ಅವಲಂಬಿಸಿರುವ ಬುಡಕಟ್ಟು ಸಮುದಾಯಗಳ 9 ಸಾವಿರಕ್ಕೂ ಅಧಿಕ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಸರ್ಕಾರಗಳು ಅಭಿವೃದ್ಧಿ ನೆಪದಲ್ಲಿ ಬದುಕು ಅತಂತ್ರಗೊಳಿಸಿವೆ ಎಂದು ವಿಷಾದಿಸಿದರು.ಸಮ್ಮೇಳನ ಸರ್ವಾಧ್ಯಕ್ಷ ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಸಾಹಿತಿ ಹನಗವಾಡಿ ರುದ್ರಪ್ಪ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ಮೋತಿ ಆರ್. ಪರಮೇಶ್ವರ್ ರಾವ್, ಅನಮೋಲ್ ವಿದ್ಯಾಸಂಸ್ಥೆ ಸಿ.ಜಿ. ದಿನೇಶ್, ಸಾಹಿತಿ ಎನ್.ಎಂ. ರವಿಕುಮಾರ್, ವಕೀಲ ಡಿ.ಶ್ರೀನಿವಾಸ್, ಗೌರವ ಉಪಸ್ಥಿತಿ ವಹಿಸಿದ್ದರು. ಡಿಎಸ್‌ಎಸ್ ಸಂಚಾಲಕ ಸತೀಶ್ ಮಲೆಮಾಚಿಕೆರೆ ನಿರೂಪಿಸಿದರು.
- - - -12ಜೆ.ಜಿ.ಎಲ್2.ಜೆಪಿಜಿ:ಜಗಳೂರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಬುಡಕಟ್ಟು ಸಮುದಾಯಗಳ ಸಂಸ್ಕೃತಿ ವಿಷಯ ಕುರಿತು ನಿವೃತ್ತ ಪ್ರಾಂಶುಪಾಲ ಸಾಹಿತಿ ಮಲ್ಲಿಕಾರ್ಜುನ್ ಕಲಮರಹಳ್ಳಿ, ಎ.ಬಿ.ರಾಮಚಂದ್ರಪ್ಪ, ಸಾಹಿತಿ ಹನಗವಾಡಿ ರುದ್ರಪ್ಪಇತರರು ಮಾತನಾಡಿದರು.