ಕನ್ನಡಪ್ರಭ ವಾರ್ತೆ ಬೀದರ್
ಈ ಸಂದರ್ಭದಲ್ಲಿ ಕಲಾವಿದ ರಮೇಶ ಕೋಳಾರ್ ತಮ್ಮ ಗುರು ಪದ್ಮಭೂಷಣ ಉಸ್ತಾದ್ ರಶೀದ್ ಖಾನ್ ಅವರನ್ನು ನೆನೆದು ಭಾವುಕರಾಗಿ ನಮ್ಮ ಗುರುಗಳು ನಮ್ಮ ದೇಶದ ಆಸ್ತಿ, ಅವರ ಅಗಲಿಕೆಯಿಂದ ಆಘಾತ ಉಂಟಾಗಿದೆ. ಅವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ದಿಗ್ಗಜರಲ್ಲಿ ಒಬ್ಬರಾಗಿದ್ದರು ಎಂದರು.
ಇವರ ಧ್ವನಿ, ತಾನ, ಸರಗಂ, ರಾಗಗಳ ತುಲನೆ ಮಾಡುವ ಕ್ರಿಯೆ, ಅವರು ಹಾಡಿರುವ ಪ್ರತಿಯೊಂದು ರಾಗಗಳು ಕೇಳಬೇಕೆನಿಸುತ್ತಿದೆ. ಅಂತಹ ಗಾಯನ ಇಡಿ ವಿಶ್ವದಲ್ಲಿ ಯಾರದ್ದು ಇರಲಿಕ್ಕಿಲ್ಲ ಎಂದು ನನಗೆ ಅನಿಸುತ್ತಿದೆ. ಅವರ ಅಗಲಿಕೆ ಇಂದು ನನಗೆ ಎಲ್ಲವು ಶೂನ್ಯ ಎನಿಸುತ್ತಿದೆ ಎಂದು ದುಖಃ ತೋಡಿಕೊಂಡರು.ಕಲಾವಿದ ಶಿವರಾಜ ಕಾಳಶೆಟ್ಟಿ ಅವರು ಪದ್ಮಭೂಷಣ ಉಸ್ತಾದ್ ರಶೀದ್ ಖಾನ್ ಅವರ ಜೀವನ ಚರಿತ್ರೆ, ಅವರ ಸಂಗೀತ ಸಾಧನೆ ಕುರಿತು ತಿಳಿಸಿದರು.
ಪ್ರಗತಿ ಸಂಗೀತ ಕಲಾ ಸಂಸ್ಥೆಯ ಎಲ್ಲಾ ಶಿಷ್ಯ ಬಳಗ, ತಬಲಾವಾದಕ ಅನೂಪ ಚಿದ್ರಿ ಹಾರ್ಮೋನಿಯಮ್ ವಾದಕ ಪ್ರವಿಣ, ಪುಟಾಣಿ ಕಲಾವಿದರ ಪೋಷಕರಾದ ಕಾರ್ತಿಕ ಮಠಪತಿ, ಶಿವಕುಮಾರ, ಸಿಮೋನ ಡಿಸೋಜಾ, ಜೈ ಪ್ರಕಾಶ ಮಿಶ್ರಾ, ಸಂಗೀತ ಶಿಕ್ಷಕಿ ತ್ರೀವೇಣಿ ಕೋಳಾರ, ಕಾವ್ಯಶ್ರೀ ಸುತಾರ ಮತ್ತೀತರರು ಭಾಗವಹಿಸಿ ದಿಗ್ಗಜರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.