ರಾಮಸಮುದ್ರ ಚಿಕ್ಕ ಬೀದಿಯಲ್ಲಿ ಪ್ರಸಾದ್‌ಗೆ ಶ್ರದ್ಧಾಂಜಲಿ

KannadaprabhaNewsNetwork |  
Published : Apr 30, 2024, 02:04 AM IST
ರಾಮಸಮುದ್ರ ಚಿಕ್ಕ ಬೀದಿಯಲ್ಲಿ ವಿ. ಶ್ರೀನಿವಾಸಪ್ರಸಾದ್‌ಗೆ  ಶ್ರದ್ದಾಂಜಲಿ  | Kannada Prabha

ಸಾರಾಂಶ

ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸಪ್ರಸಾದ್ ನಿಧನದ ಗೌರವಾರ್ಥ ನಗರದ ರಾಮಸಮುದ್ರ ಚಿಕ್ಕ ಬೀದಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಘ ಹಾಗೂ ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು.

ಚಾಮರಾಜನಗರ: ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸಪ್ರಸಾದ್ ನಿಧನದ ಗೌರವಾರ್ಥ ನಗರದ ರಾಮಸಮುದ್ರ ಚಿಕ್ಕ ಬೀದಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಘ ಹಾಗೂ ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು. ಅಂಬೇಡ್ಕರ್ ಭವನದ ಮುಂಭಾಗ ಶಾಮಿಯಾನ ಹಾಕಿ ಶ್ರೀನಿವಾಸಪ್ರಸಾದ್ ಅವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದರು. ಸಂಘದ ಅಧ್ಯಕ್ಷರು, ಯಜಮಾನರು ಹಾಗೂ ಮುಖಂಡರು ಅಗಲಿದ ನಾಯಕನಿಗೆ ಪುಷ್ಪ ನಮನ ಸಲ್ಲಿಸಿ, ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಿದರು. ನಗರಸಭಾ ಮಾಜಿ ಸದಸ್ಯ ಬಸವರಾಜು, ವಕೀಲ ನಾಗಣ್ಣ ,ಯಜಮಾನರಾದ ಬಂಗಾರಸ್ವಾಮಿ, ಮಾಜಿ ಯಜಮಾನ ಮಹದೇವಸ್ವಾಮಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ನಾಗಣ್ಣ, ಉಪಾಧ್ಯಕ್ಷ ಜಯಕುಮಾರ್, ಲೋಕೇಶ್, ಆಶೋಕ್, ಗೋವಿಂದರಾಜು, ಜನಶಕ್ತಿ ಸುರೇಶ್ ಹಾಗೂ ಮುಖಂಡರು, ಯುವಕರು ಸಂಘದ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!