ರಾಯನಗೌಡ ತಾತರೆಡ್ಡಿ, ಸಿದ್ದಣ್ಣ ಆಲಕೊಪ್ಪರಗೆ ಸನ್ಮಾನ

KannadaprabhaNewsNetwork | Published : Jan 31, 2024 2:16 AM

ಸಾರಾಂಶ

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ ಕೊಡಮಾಡಿದ ಇಂಡಿಯಾ ಬಹರೇನ್ ಇಂಟರ್‌ನ್ಯಾಷನಲ್ ಅವಾರ್ಡ್‌ ಪುರಸ್ಕೃತ ರಾಯನಗೌಡ ತಾತರೆಡ್ಡಿ ಹಾಗೂ ಮುದ್ದೇಬಿಹಾಳ ಭೂ ನ್ಯಾಯಮಂಡಳಿ ನಾಮನಿರ್ದೇಶಿಕ ಸದಸ್ಯರಾಗಿ ಆಯ್ಕೆಯಾದ ಸಿದ್ದಣ್ಣ ಆಲಕೊಪ್ಪರ ಅವರಿಗೆ ದೇಶಮುಖ ವಾಡೆಯಲ್ಲಿ ಜೆ.ಎಸ್.ದೇಶಮುಖ ಪುತ್ರಿಯರಾದ ಶೀಲಪ್ರಭ ಪ್ರತಾಪ ದೇಶಮುಖ(ಸಕಲೇಶಪುರ), ಮಾಜಿ ಶಾಸಕಿಯರು ನಂದಿನಿ ನಿಲೇಶದೇಶಮುಖ ಪಾರ್ವೇಕರ( ಯಾವತಮಲ್ ಮಹಾರಾಷ್ಟ್ರ) ಅವರು ಸನ್ಮಾನಿಸಿ, ಗೌರವಿಸಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಈ ಸಂದರ್ಭದಲ್ಲಿ ಶೀಲಪ್ರಭ ದೇಶಮುಖ ಮಾತನಾಡಿ, ರಾಯನಗೌಡ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದು ತುಂಬ ಖುಷಿಯ ವಿಚಾರವಾಗಿದೆ. ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಬೇಕು. ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅವರ ಸಮಯ ಪ್ರಜ್ಞೆಯಿಂದ ಎಲ್ಲ ಪ್ರಯಾಣಿಕರಿಗೆ ಜೀವ ಉಳಿಸಿದ್ದು ಸಾಹಸದ ಕೆಲಸವಾಗಿದೆ. ಇವರ ಸಾಹಸದ ಫಲವಾಗಿ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಭೀಮಣ್ಣ ಗುರಿಕಾರ ಮಾತನಾಡಿ, ಶೌರ್ಯ ಪ್ರಶಸ್ತಿ ಪಡೆದ ರಾಯನಗೌಡ ಹಾಗೂ ಭೂ ನ್ಯಾಯಮಂಡಳಿ ನಾಮನಿರ್ದೆಶಕ ಸದಸ್ಯರಿಗೆ ನಮ್ಮ ದೇಶಮುಖ ಮನೆತನದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ದೇಶಮುಖ ಮನೆತನಕ್ಕೆ ಈ ಮತಕ್ಷೇತ್ರದಲ್ಲಿ ಅಪಾರ ಅಭಿಮಾನಿಗಳ ಸಂಖ್ಯೆ ಇದೆ. ಅವರು ಮಾರ್ಗದರ್ಶನದಲ್ಲೇ ನಾವೆಲ್ಲರು ನಡೆದುಕೊಂಡು ಬರುತ್ತಿದ್ದೇವೆ. ನಾಲತವಾಡದವರು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ನಮ್ಮೂರಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು.

ಈ ವೇಳೆ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಸದಸ್ಯ ಪೃಥ್ವಿರಾಜ ನಾಡಗೌಡ, ನವದಹಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಂಕರರಾವ ದೇಶಮುಖ, ಮುಖಂಡರಾದ ಚಂದ್ರಶೇಖರ ಮೇಟಿ, ಮಹಾಂತೇಶ ಗಂಗನಗೌಡರ, ಪಟ್ಟಣ ಪಂಚಾಯತಿ ಸದಸ್ಯರಾದ ಬಸವರಾಜ ಗಡ್ಡಿ, ರಮೇಶ ಆಲಕೊಪ್ಪರ, ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಭೀಮಣ್ಣ ಗುರಿಕಾರ, ಸಂಗಪ್ಪ ಕಾನಿಕೇರಿ, ದಾವಲಸಾಬ್‌ ಸುಲ್ತಾನಪುರ, ಸಂಗಮೇಶ ಗಂಗನಗೌಡರ, ಹಂಜೇಸಾಬ್‌ ಮುಲ್ಲಾ, ಬೈಲಪ್ಪ ವಡ್ಡರ ಹಾಗೂ ಇನ್ನಿತರರು ಇದ್ದರು.

Share this article