ಕರ್ನಾಟಕ ಸಂಸ್ಕೖತ ವಿವಿಯಿಂದ ಸಾಲೂರು ಬೃಹನ್ಮಠದ ಅಧ್ಯಕ್ಷರಿಗೆ ಡಾಕ್ಟರೇಟ್ । ಮಠದ ಭಕ್ತರಿಂದ ಆಯೋಜನೆ
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೖಹನ್ಮಠದ ಈಗಿನ ಪೀಠಾಧ್ಯಕ್ಷ ಡಾ. ಶಾಂತಮಲ್ಲಿಕಾರ್ಜುನ ಸ್ವಾಮಿಯವರಿಗೆ ಕರ್ನಾಟಕ ಸಂಸ್ಕೖತ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತ ಹಿನ್ನೆಲೆ ಭಕ್ತ ಸಮೂಹ ಅವರಿಗೆ ಕೊಳ್ಳೇಗಾಲ ಪಟ್ಟಣ ಮತ್ತು ತಾಲೂಕಿನ ಗುಂಡೇಗಾಲದಲ್ಲಿ ಗೌರವ ಸಮರ್ಪಣಾ ಸಮಾರಂಭವನ್ನು ನ.12ರಂದು ಅಯೋಜಿಸಲಾಗಿದೆ.
ಸಾಲೂರು ಶ್ರೀಗಳಾದ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಂಸ್ಕೖತದಲ್ಲಿ ‘ಅಂಶುಮದಾಗಮಮ್ ಸಂಪಾದನಾತ್ಮಕ ಮದ್ಯಯನಮ್’ ಎಂಬ ಮಹಾ ಪ್ರಬಂಧ ಮಂಡಿಸಿದ್ದಕ್ಕಾಗಿ ಶ್ರೀಗಳಿಗೆ ಡಾಕ್ಟರೇಟ್ ಸಂದಿದೆ. ಈ ಹಿನ್ನೆಲೆ ಭಕ್ತ ಸಮೂಹ ಕೊಳ್ಳೇಗಾಲದ ವೆಂಕಟೇಶ್ವರ ಮಹಲ್‌ನಲ್ಲಿ 12ರ ಬೆಳಿಗ್ಗೆ 10 ಕ್ಕೆ ತಾಲೂಕಿನ ಗುಂಡೇಗಾಲದ ಸದ್ಭಕ್ತರಿಂದ 4 ಗಂಟೆಕ್ಕೆ ಗೌರವ ಸಮರ್ಪಣಾ ಸಮಾರಂಭ ಜರುಗಲಿದೆ ಎಂದು ಗುಂಡೇಗಾಲದ ಮಠಾಧ್ಯಕ್ಷರು ತಿಳಿಸಿದ್ದಾರೆಅಪಾರ ವಿದ್ವತ್ ಸಂಪಾದಿಸಿರುವ ಶ್ರೀಗಳು:
ನಾಡಿನ ಖ್ಯಾತ ವಿದ್ವಾಂಸ, ಮಠಾಧಿಪತಿಗಳಾದ ಇಮ್ಮಡಿ ಶಿವಬಸವಸ್ವಾಮಿಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ನೇಪಾಳ, ಮಲೇಷಿಯಾದ ಪ್ರಸಿದ್ಧ ವಿಶ್ವವಿದ್ಯಾಯಲಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಪ್ರಸ್ತುತ ಶ್ರೀಗಳು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಗುಜರಾತ್, ಹಿಮಾಚಲ ಪ್ರದೇಶ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾಷೆ, ಧರ್ಮ, ಸಾಹಿತ್ಯ-ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ಹಲವಾರು ಪ್ರಬಂಧಗಳನ್ನು ಮಂಡಿಸಿ ಪ್ರಶಂಸೆಗೆ ಭಾಜನರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ತಮಗೆ ಡಾಕ್ಟರೇಟ್ ಪದವಿ ದೊರೆತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಾಲೂರು ಮಠದ ಜವಾಬ್ದಾರಿ ವಹಿಸಿಕೊಂಡು ಬಳಿಕ ಪಿಎಚ್‌ಡಿ ಪದವಿ ಪಡೆದುಕೊಂಡಿರುವುದು ವೈಯಕ್ತಿಕವಾಗಿ ಸಂತಸ ತಂದಿದೆ. ನಮ್ಮ ಗುರುಗಳ ಆಸೆ ಹಾಗೂ ಆಶೀರ್ವಾದದಿಂದ ಇದು ಸಾಧ್ಯವಾಗಿದೆ. ಈ ಪದವಿಯನ್ನು ಮಠದ ಸದ್ಭಕ್ತ ಸಮೂಹಕ್ಕೆ ಅರ್ಪಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.