ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬಿ.ಸರೋಜಾದೇವಿ ನಿಧನಕ್ಕೆ ಶ್ರದ್ಧಾಂಜಲಿ

KannadaprabhaNewsNetwork |  
Published : Jul 17, 2025, 12:37 AM IST
16ಕೆಎಂಎನ್ ಡಿ15 | Kannada Prabha

ಸಾರಾಂಶ

ದಕ್ಷಿಣ ಭಾರತದಲ್ಲಿ ಡಾ.ರಾಜ್ ಕುಮಾರ್, ಎಂ.ಜಿ.ರಾಮಚಂದ್ರನ್, ಶಿವಾಜಿ ಗಣೇಶನ್ ಸೇರಿದಂತೆ ಅನೇಕ ಜನಪ್ರಿಯ ನಟರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದ ಬಿ.ಸರೋಜಾದೇವಿ ಅವರ ನಟನೆ ಪ್ರಸ್ತುತ ಯುವ ನಟಿಯರಿಗೆ ಮಾದರಿಯಾಗಿತ್ತು. ಕನ್ನಡದ ಕಿತ್ತೂರು ಚನ್ನಮ್ಮ ಚಿತ್ರದ ನಟನೆಯನ್ನು ಯಾರೂ ಮರೆಯಲಾರರು.

ಮಳವಳ್ಳಿ:

ಇತ್ತೀಚೆಗೆ ನಿಧನರಾದ ಹಿರಿಯ ನಟಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬಿ.ಸರೋಜಾದೇವಿ ಅವರಿಗೆ ಪಟ್ಟಣದ ಡಾ.ರಾಜ್ ಕುಮಾರ್ ಕಲಾ ಸಂಘದ ಕಚೇರಿಯಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ದಕ್ಷಿಣ ಭಾರತದಲ್ಲಿ ಡಾ.ರಾಜ್ ಕುಮಾರ್, ಎಂ.ಜಿ.ರಾಮಚಂದ್ರನ್, ಶಿವಾಜಿ ಗಣೇಶನ್ ಸೇರಿದಂತೆ ಅನೇಕ ಜನಪ್ರಿಯ ನಟರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದ ಬಿ.ಸರೋಜಾದೇವಿ ಅವರ ನಟನೆ ಪ್ರಸ್ತುತ ಯುವ ನಟಿಯರಿಗೆ ಮಾದರಿಯಾಗಿತ್ತು. ಕನ್ನಡದ ಕಿತ್ತೂರು ಚನ್ನಮ್ಮ ಚಿತ್ರದ ನಟನೆಯನ್ನು ಯಾರೂ ಮರೆಯಲಾರರು ಎಂದು ಬಣ್ಣಿಸಿದರು.

ಡಾ.ರಾಜ್ ಕುಮಾರ್ ಅವರ ಬಗ್ಗೆ ಟಿವಿ ಸಂದರ್ಶನವೊಂದರಲ್ಲಿ ಅವರ ಸಳರತೆಯನ್ನು ಹಾಡಿ ಹೊಗಳಿದ್ದರು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಎಂ.ಎನ್.ಶಿವಸ್ವಾಮಿ, ಪರೀಷ್, ಜಗ್ಗು, ಪ್ರೆಸ್ ಸುನಿ, ಸುಬ್ಬಣ್ಣ, ನಾಗರಾಜು, ಶಿವಣ್ಣ, ನಂಜುಂಡಸ್ವಾಮಿ ಭಾಗವಹಿಸಿದ್ದರು.

ಪ್ರೌಢಶಾಲೆಗೆ ದಾನಿಗಳಿಂದ ಡೆಸ್ಕ್ ಮತ್ತು ಚೇರ್‌ಗಳ ಕೊಡುಗೆ

ಕೆ.ಎಂ.ದೊಡ್ಡಿ:

ಸಮೀಪದ ಮಾದರಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ದಾನಿಗಳು ಡೆಸ್ಕ್ ಮತ್ತು ಚೇರ್‌ಗಳನ್ನು ಕೊಡುಗೆ ನೀಡಿದರು.

ಸಮಾಜ ಸೇವಕರಾದ ಶ್ರೀಧರ್ ಮತ್ತು ಶಶಿಧರ್ ಅವರು ಪ್ರೌಢಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 12 ಡೆಸ್ಕ್ ಗಳನ್ನು ಶಿಕ್ಷಕರಿಗಾಗಿ 6 ಚೇರ್ ಗಳನ್ನು ವಿತರಣೆ ಮಾಡಿ ಶಾಲಾ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯಸ್ತ ನೀಡಿದರು.

ಮಾದರಹಳ್ಳಿ ಯಶೋದಮ್ಮ, ರಾಮಿನಿಂಗಿ, ನಾಗರಾಜುರವರ ಮಕ್ಕಳಾದ ಸಮಾಜ ಸೇವಕರಾದ ಶ್ರೀಧರ್ ಮತ್ತು ಶಶಿಧರ್ ರವರು ಸರಕಾರಿ ಶಾಲೆ ಮಕ್ಕಳ ಅಭಿವೃದ್ಧಿಗಾಗಿ ಕಲಿಕಾ ಪರಿಕರಗಳನ್ನು ಕೊಡುಗೆಯಾಗಿ ನೀಡಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂದರು.

ಈ ವೇಳೆ ಗ್ರಾಮಸ್ಥರು ಹಾಗೂ ಶಾಲೆ ಸಿಬ್ಬಂದಿ ಸಮಾಜ ಸೇವಕರಾದ ಶ್ರೀಧರ್ ಮತ್ತು ಶಶಿಧರ್ ರವರ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಕಾರ್ಯಕ್ಕೆ ಪ್ರೋತ್ಸಾಹ ವ್ಯಕ್ತಪಡಿಸಿ ಇಬ್ಬರನ್ನೂ ಗ್ರಾಮಸ್ಥರ ಮತ್ತು ಶಾಲೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಎಂಪಿಸಿಎಸ್ ಮಾಜಿ ಅಧ್ಯಕ್ಷ ಚನ್ನಶೇಖರ್, ಗ್ರಾ.ಪಂ ಮಾಜಿ ಸದಸ್ಯ ಚೌಡೇಶ್, ಎಂಪಿಸಿಎಸ್ ಮಾಜಿ ಕಾರ್ಯದರ್ಶಿ ಕೆ. ಕೆಂಪೇಗೌಡ, ಯೋಗೇಶ್, ಮುಖ್ಯ ಶಿಕ್ಷಕಿ ಸುಮತಿ ಮತ್ತು ಸಹ ಶಿಕ್ಷಕರು ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!