ಅಗಲಿದ ಕಾಂಗ್ರೆಸ್ ಮುಖಂಡ ಡಿ.ಎಸ್. ಚಂದ್ರೇಗೌಡರಿಗೆ ನುಡಿನಮನ

KannadaprabhaNewsNetwork |  
Published : Dec 15, 2025, 02:15 AM IST
ಚಿಕ್ಕಮಗಳೂರು ನಗರದ ಕನಕ ಸಮುದಾಯ ಭವನದಲ್ಲಿ ಅಪಘಾತದಲ್ಲಿ ನಿಧನರಾದ ಡಿ.ಎಸ್. ಚಂದ್ರೇಗೌಡ ಸೇರಿದಂತೆ ಅವರ ಪತ್ನಿ ಸರೋಜ ಹಾಗೂ ಸಂಬಂಧಿ ಜಯಲಕ್ಷ್ಮಿ ಅವರಿಗೆ ಜಿಲ್ಲಾ ಕುರುಬರ ಸಂಘ, ತಾಲ್ಲೂಕು ಕುರುಬರ ಸಂಘ, ನಾಗರಿಕ ವೇದಿಕೆ, ಜಿಲ್ಲಾ ಸಂಗೋಳಿ ರಾಯಣ್ಣ ವೇದಿಕೆ, ಕನಕಶ್ರೀ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನುಡಿನಮನ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಚಿಕ್ಕಮಗಳೂರುಕಾಂಗ್ರೆಸ್ ಮುಖಂಡ ಡಿ.ಎಸ್. ಚಂದ್ರೇಗೌಡ ಅವರ ಅಕಾಲಿಕ ಮರಣದಿಂದ ಪಕ್ಷ ಹಾಗೂ ಸಮಾಜಕ್ಕೆ ನಷ್ಟ ಉಂಟಾಗಿದೆ. ಅವರು ಅಪಾರ ಜನರನ್ನ ಸಂಪಾದನೆ ಮಾಡಿದ್ದರು ಎಂದು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಬಿ.ಎಲ್.ಶಂಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಂಗ್ರೆಸ್ ಮುಖಂಡ ಡಿ.ಎಸ್. ಚಂದ್ರೇಗೌಡ ಅವರ ಅಕಾಲಿಕ ಮರಣದಿಂದ ಪಕ್ಷ ಹಾಗೂ ಸಮಾಜಕ್ಕೆ ನಷ್ಟ ಉಂಟಾಗಿದೆ. ಅವರು ಅಪಾರ ಜನರನ್ನ ಸಂಪಾದನೆ ಮಾಡಿದ್ದರು ಎಂದು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಬಿ.ಎಲ್.ಶಂಕರ್ ಹೇಳಿದರು.ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ಡಿ.ಎಸ್. ಚಂದ್ರೇಗೌಡ ಸೇರಿದಂತೆ ಅವರ ಪತ್ನಿ ಸರೋಜ ಹಾಗೂ ಸಂಬಂಧಿ ಜಯಲಕ್ಷ್ಮಿ ಅವರಿಗೆ ನಗರದ ಕನಕ ಸಮುದಾಯ ಭವನದಲ್ಲಿ ಜಿಲ್ಲಾ ಕುರುಬರ ಸಂಘ, ತಾಲೂಕು ಕುರುಬರ ಸಂಘ, ನಾಗರಿಕ ವೇದಿಕೆ, ಜಿಲ್ಲಾ ಸಂಗೋಳಿ ರಾಯಣ್ಣ ವೇದಿಕೆ, ಕನಕಶ್ರೀ ಹಾಗೂ ವಿವಿಧ ಕನ್ನಡಪರ ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.ಚಂದ್ರೇಗೌಡರು ರಾಜಕಾರಣಿಯಾಗಿ ಅಜಾತ ಶತ್ರುವಿನ ಜೀವನ ರೂಪಿಸಿಕೊಂಡಿದ್ದರು. ಆದರೆ, ಅನಿರೀಕ್ಷಿತ ಘಟನೆಯಲ್ಲಿ ಅವರು ಪತ್ನಿ ಹಾಗೂ ಸಂಬಂಧಿ ಸಮೇತ ನಮ್ಮನ್ನಗಲಿದ್ದಾರೆ. ಅವರಿಗೆ ದೇವರು ಚಿರಶಾಂತಿ ಕರುಣಿಸಲಿ, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೋರಿದರು.ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಚಂದ್ರೇಗೌಡರ ಅಗಲಿಕೆಯಿಂದ ಅವರ ಕುಟುಂಬಕ್ಕಷ್ಟೇ ಅಲ್ಲದೆ ಇಡೀ ಕುರುಬ ಸಮಾಜ, ಜಿಲ್ಲೆಯ ಜನರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಉಂಟಾಗಿದೆ. ಚಂದ್ರೇಗೌಡವರ ಮಾತು ನಿಷ್ಠುರವಾಗಿರು ತ್ತಿತ್ತು. ಆದರೆ, ಅವರ ಹೃದಯ ಅಷ್ಟೇ ಮೃದುವಾಗಿತ್ತು. ನಗರಸಭೆ ಸದಸ್ಯರಾಗಿ ಅವಿರೋಧ ಆಯ್ಕೆಯಾದ ಮೊಟ್ಟ ಮೊದಲ ವ್ಯಕ್ತಿ ಚಂದ್ರೇಗೌಡರಾಗಿದ್ದರು ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ನೇರನುಡಿಯ ವ್ಯಕ್ತಿ. ಅವರ ಮನಸಿನಲ್ಲಿ ಕಲ್ಮಷ ಇರಲಿಲ್ಲ. ಯಾವುದೇ ಕೆಲಸ ವಹಿಸಿದರೂ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದರು. ಅವರ ಅಕಾಲಿಕ ಅಗಲಿಕೆ ತೀವ್ರ ದುಃಖ ತಂದಿದೆ ಎಂದರು. ಗಾಯತ್ರಿ ಶಾಂತೇಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್. ಶಾಂತೇಗೌಡ, ಪ್ರಧಾನ ಕಾರ್ಯದರ್ಶಿ ಹಂಪಾಪುರ ಪುಟ್ಟೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಣೇನಹಳ್ಳಿ ರಾಜು, ಮುಖಂಡರಾದ ಡಿ.ಎಲ್. ವಿಜಯಕುಮಾರ್, ಎಂ.ಎಲ್. ಮೂರ್ತಿ, ಎಚ್.ಎಚ್. ದೇವರಾಜ್, ಕೆ.ಟಿ. ರಾಧಾಕೃಷ್ಣ, ಎ.ಎನ್. ಮಹೇಶ್, ನಗರಸಭೆ ಅಧ್ಯಕ್ಷೆ ಶೀಲಾದಿನೇಶ್, ಲಾಯರ್ ಪುಟ್ಟೇಗೌಡ, ಹಂಪಾಪುರ ಮಂಜೇಗೌಡ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ