ರಂಗಭೂಮಿ ಸಾಧಕರು, ಸಮಾಜ ಸೇವಕರಿಗೆ ಸನ್ಮಾನ

KannadaprabhaNewsNetwork |  
Published : Apr 03, 2025, 12:32 AM IST
02ಕಲಾನಿಧಿ | Kannada Prabha

ಸಾರಾಂಶ

ಉಡುಪಿ ಸಾಂಸ್ಕೃತಿಕ ಕಲಾ ಪ್ರಕಾರಗಳ ಸಂಸ್ಥೆ ಕಲಾನಿಧಿ ಉಡುಪಿ ಇದರ ದಶಮಾನೋತ್ಸವ ಹಾಗೂ ವಿಶ್ವ ರಂಗಭೂಮಿ ದಿನಾಚರಣೆ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಂಗಭೂಮಿಯು ಕಲಾವಿದರಿಗೆ ಶಿಸ್ತು, ಸಮಯ ಪಾಲನೆ, ಬದ್ಧತೆಯನ್ನು ಕಲಿಸುತ್ತದೆ. ಕಲಾವಿದರಾದವರು ಅಹಂಕಾರ ಪಡಬಾರದು ಎಂದು ಸಮಾಜಸೇವಕ ಯೋಗೀಶ್ ಗಾಣಿಗ ಕೊಳಲಗಿರಿ ಹೇಳಿದ್ದಾರೆ.ಇಲ್ಲಿನ ಸಾಂಸ್ಕೃತಿಕ ಕಲಾ ಪ್ರಕಾರಗಳ ಸಂಸ್ಥೆ ಕಲಾನಿಧಿ ಉಡುಪಿ ಇದರ ದಶಮಾನೋತ್ಸವ ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯನ್ನು ಅಕ್ಷರಳಿಗೆ ಮೇಕಪ್ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಕಲೆಗಳಲ್ಲಿ ತೊಡಗಿಸಿಕೊಂಡವರು ದುಶ್ಚಟಗಳಿಗೆ ಬಲಿಯಾಗುವುದಿಲ್ಲ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಉಡುಪಿ ಜಿಲ್ಲೆಯ ಕೊಡುಗೆ ಗಣನೀಯ ಎಂದರು.

ಯಕ್ಷಗಾನ ಹಿಮ್ಮೇಳ ಕಲಾವಿದ ಕೆ‌.ಜೆ.ಗಣೇಶ್, ಉಪನ್ಯಾಸಕರಾದ ದಯಾನಂದ ಡಿ., ಸೀತಾಲಕ್ಷ್ಮಿ ಅಡಿಗ ಪಾಲ್ಗೊಂಡಿದ್ದರು.

ರಂಗಭೂಮಿ ಮತ್ತು ಇತರ ಕ್ಷೇತ್ರಗಳ ಸಾಧಕರಾದ ಬೈಲೂರು ಪ್ರಭಾಕರ ಭಂಡಾರಿ, ಮಂಜುನಾಥ ರಾವ್ ಹಾವಂಜೆ, ರಾಜ್ ಗೋಪಾಲ ಶೇಟ್ ಉಡುಪಿ, ಉಷಾ ರಮಾನಂದ ದೊಡ್ಡಣಗುಡ್ಡೆ, ಪ್ರಕಾಶ್ ರಾವ್ ಉಡುಪಿ, ವೀಕ್ಷಿತ್ ಕೊಡಂಚ ಮಾರ್ಪಳ್ಳಿ, ಸಂದೀಪ್ ರೈ ಉಡುಪಿ, ರಘು ಪಾಂಡೇಶ್ವರ ಸಾಸ್ತಾನ, ಸದಾನಂದ ಕುಂದರ್ ಕೋಡಿಬೆಂಗ್ರೆ, ಸ್ವರಾಜ್ಯಲಕ್ಷ್ಮಿ ಅಲೆವೂರು, ಗೌತಮ್ ಕುಂದರ್ ಪಿತ್ರೋಡಿ, ಮಧುಕರ ಸನಿಲ್ ಉದ್ಯಾವರ, ಪ್ರವೀಣ್ ಆಚಾರ್ಯ ದೊಡ್ಡಣ್ಣಗುಡ್ಡೆ ಇವರನ್ನು ಗೌರವಿಸಲಾಯಿತು.ಸನ್ಮಾನ ಪತ್ರವನ್ನು ಪ್ರಣಮ್ಯ ರಾವ್ ಹಾಗೂ ಶ್ರೀನಿಧಿ ವಾಚಿಸಿದರು. ರೋಹಿತ್ ಪ್ರಾರ್ಥಿಸಿದರು. ಕಲಾನಿಧಿ ಸಂಸ್ಥೆಯ ಅಧ್ಯಕ್ಷೆ ಉಪ್ಪೂರು ಭಾಗ್ಯಲಕ್ಷ್ಮಿ ಸ್ವಾಗತಿಸಿ ನಿರೂಪಿಸಿದರು. ನಟರಾಜ್ ಮೇಲಂಟ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ರಂಗಗೀತೆಗಳನ್ನು ಹಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾನೂನಿನ ಜ್ಞಾನ ಪಡೆಯುವುದು ಅರಣ್ಯವಾಸಿಯ ಮೂಲಭೂತ ಕರ್ತವ್ಯ: ರಂಜಿತಾ
ನೋಂದಾಯಿಸಿದ ಎಲ್ಲ ರೈತರ ಮೆಕ್ಕೆಜೋಳ ಖರೀದಿ: ಸೋಮಣ್ಣ ಉಪನಾಳ