ತ್ರಿವರ್ಣ ಆರ್ಟ್ ಗ್ಯಾಲರಿ: ವಿಶ್ವ ಕಲಾ ದಿನ ಸಂಭ್ರಮಾಚರಣೆ

KannadaprabhaNewsNetwork |  
Published : Apr 17, 2025, 12:02 AM IST
16ತ್ರಿವರ್ಣ | Kannada Prabha

ಸಾರಾಂಶ

ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಆ್ಯಂಡ್ ಗ್ಯಾಲರಿಯಲ್ಲಿ ಮಂಗಳವಾರ ವಿಶ್ವಕಲಾ ದಿನಾಚರಣೆಯ ಪ್ರಯುಕ್ತ ಬೃಹತ್ ’ಮೊನಾಲಿಸಾ’ ರಂಗೋಲಿ ರಚಿಸುವ ಮೂಲಕ ಕಲಾ ವಿದ್ಯಾರ್ಥಿ ಹಾಗೂ ಪೋಷಕ ಸಮೂಹ ಸಂಭ್ರಮಿಸಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಆ್ಯಂಡ್ ಗ್ಯಾಲರಿಯಲ್ಲಿ ಮಂಗಳವಾರ ವಿಶ್ವಕಲಾ ದಿನಾಚರಣೆಯ ಪ್ರಯುಕ್ತ ಬೃಹತ್ ’ಮೊನಾಲಿಸಾ’ ರಂಗೋಲಿ ರಚಿಸುವ ಮೂಲಕ ಕಲಾ ವಿದ್ಯಾರ್ಥಿ ಹಾಗೂ ಪೋಷಕ ಸಮೂಹ ಸಂಭ್ರಮಿಸಿತು.

ಮುಖ್ಯ ಅತಿಥಿ, ಸೌತ್ ಕೆನರಾ ಫೊಟೋಗ್ರಾಫರ್ಸ್‌ ಅಸೋಶಿಯೇಷನ್ ಉಡುಪಿ ವಲಯದ ಮಾಜಿ ಆಧ್ಯಕ್ಷರಾದ ಜನಾರ್ದನ ಕೊಡವೂರು ಅವರು ದೀಪ ಬೆಳಗಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶ್ವಾದ್ಯಂತ ಸೃಜನಶೀಲ ಚಟುವಟಿಕೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಕಲಾ ದಿನಾಚರಣೆಯ ಮೂಲಕ ಸಮಾಜದ ನಡುವಿನ ಸಂಪಕವನ್ನು ಇನ್ನಷ್ಟು ಬಲಪಡಿಸಲು ಸಾಧ್ಯ ಎಂದರು.

ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ, ಸಮಾಜ ಸೇವಕಿ ಶ್ಯಾಮಲ ಎಸ್. ಕುಂದರ್, ಭಾವನಾತ್ಮಕವಾಗಿ ಕಲೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಇಂತಹ ಕಲಾಕೃತಿಗಳು ಮೂಡಿ ಬರಲು ಸಾಧ್ಯ ಎಂದರು.ಮಣಿಪಾಲ ಮತ್ತು ಕುಂದಾಪುರದ ತ್ರಿವರ್ಣ ಆರ್ಟ್ ಕ್ಲಾಸ್ಸಸ್‌ನ ೧೯ ರಿಂದ ೭೫ ವಯೋಮಿತಿಯ ೨೩ ವಿದ್ಯಾರ್ಥಿಯರ ’ಪರಂಪರಾ’ ಚಿತ್ರಕಲಾ ಪ್ರದಶನದ ಅಭಿನಂದನಾ ಪತ್ರ ಮತ್ತು ವಿವಿಧ ಪ್ರಶಸ್ತಿಗಳನ್ನು ವಿತರಿಸಿದರು.ದಿ ಬೆಸ್ಟ್ ಆರ್ಟ್ ವರ್ಕ್ ಪ್ರಶಸ್ತಿಯನ್ನು ಶರಣ್ ಎಸ್. ಕುಮಾರ್, ದಿ ಮೋಸ್ಟ್ ಪಬ್ಲಿಕ್ ವೀವ್ಹ್ ಆರ್ಟ್ ಪ್ರಶಸ್ತಿಯನ್ನು ಉಜ್ವಲ್ ನಿಟ್ಟೆ ಹಾಗೂ ಲಕ್ಕಿ ವಿನ್ನರ್ ಪ್ರಶಸ್ತಿಯನ್ನು ಲತಾ ಭಾಸ್ಕರ್, ರೇವತಿ ಡಿ., ಯಶಾ ಜಿ, ಸುಷ್ಮಾ ಪೂಜಾರಿ, ಸಂಜನಾ ಶ್ರೀನಿವಾಸ್ ಅವರಿಗೆ ಒಟ್ಟು ೧೮,೫೦೦ ಸಾವಿರ ರು. ಗಳ ನಗದು ಬಹುಮಾನಗಳೊಂದಿಗೆ ವಿತರಿಸಲಾಯಿತು.

ವಿದ್ಯಾರ್ಥಿ ಪೋಷಕಿ ವಾಣಿ ರಾವ್ ಅತಿಥಿ ಅಭ್ಯಾಗತರಾಗಿದ್ದರು. ಸಂಸ್ಥೆಯ ಮಾಗದರ್ಶಕ ಹರೀಶ್ ಸಾಗಾ ಸ್ವಾಗತಿಸಿ, ಕಲಾ ದಿನಾಚರಣೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಲಾವಿದ್ಯಾರ್ಥಿಯರಾದ ವಿಧು ಶಂಕರ್ ಬಾಬು ಪ್ರಾರ್ಥಿಸಿ, ಅರುಣಾ ನಾಯರ್ ನಿರೂಪಿಸಿದರು. ಉಜ್ವಲ್ ನಿಟ್ಟೆ ವಂದಿಸಿದರು.

.............ಬೃಹತ್ ಮೊನಾಲಿಸಾ ರಂಗೋಲಿ ಇಲ್ಲಿನ ಕಲಾ ಸಂಸ್ಥೆಯ ವಿದ್ಯಾರ್ಥಿಯರಾದ ಅನೂಷ ಆಚಾರ್ಯ, ಉಜ್ವಲ್ ನಿಟ್ಟೆ, ಅಶ್ವಿನಿ ಶೆಟ್ಟಿ, ಮೀತಾ ಪೈ ಅವರ ಕೈಯಲ್ಲಿ ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ಮೂಡಿ ಬಂದ ೧೫೦ ಚದರ ಅಡಿ ವಿಸ್ತೀರ್ಣದ ಮೊನಾಲಿಸ ಕಲಾಕೃತಿ ಎಲ್ಲರನ್ನು ಆಕರ್ಷಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ