ಟ್ರಯಂಪ್ ಟ್ರ್ಯಾಕರ್‌ 400 ಬೈಕ್‌ ಬಿಡುಗಡೆ

KannadaprabhaNewsNetwork |  
Published : Apr 26, 2026, 04:00 AM IST
ಟ್ರಯಂಪ್ ಟ್ರ್ಯಾಕರ್‌ 400 ಬೈಕ್‌ ಬಿಡುಗಡೆಗೊಳಿಸಿದ ರವೀಂದ್ರ ಬಿಜ್ಜರಗಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಹುನಿರೀಕ್ಷಿತ ಟ್ರಯಂಪ್ ಟ್ರ್ಯಾಕರ್‌ 400 ಮೋಟಾರ್‌ ಸೈಕಲ್‌ನ್ನು ನಗರದ ಬಸವೇಶ್ವರ ವೃತ್ತದ ಬಳಿಯ ಟ್ರಯಂಪ್ ಶೋರೂಮ್‌ನಲ್ಲಿ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಹುನಿರೀಕ್ಷಿತ ಟ್ರಯಂಪ್ ಟ್ರ್ಯಾಕರ್‌ 400 ಮೋಟಾರ್‌ ಸೈಕಲ್‌ನ್ನು ನಗರದ ಬಸವೇಶ್ವರ ವೃತ್ತದ ಬಳಿಯ ಟ್ರಯಂಪ್ ಶೋರೂಮ್‌ನಲ್ಲಿ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಉದ್ಘಾಟಿಸಿದರು.

ಉದ್ಯಮಿ ಸಂದೀಪ ಬಿಜ್ಜರಗಿ ಮಾತನಾಡಿ, ಟ್ರಯಂಪ್ ಟ್ರ್ಯಾಕರ್‌ 400 ಬೈಕ್ 350 ಸಿಸಿ ಎಂಜಿನ್ ಹೊಂದಿದ್ದು, 8750 ಆರ್‌ಪಿಎಂ ನಲ್ಲಿ 40 ಪಿಎಸ್‌ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಬೈಕ್‌ನಲ್ಲಿ ಸ್ವಿಚೇಬಲ್ ಟ್ರಾಕ್ಷನ್ ಕಂಟ್ರೋಲ್, ರೈಡ್-ಬೈ-ವೈರ್‌ ತಂತ್ರಜ್ಞಾನ, ಸ್ಲಿಪ್ ಆ್ಯಂಡ್ ಅಸಿಸ್ಟ್ ಕ್ಲಚ್, ಡ್ಯುಯಲ್ ಬ್ಯಾರೆಲ್ ಎಕ್ಸಾಸ್ಟ್ ಹಾಗೂ ಎಂಜಿನ್‌ನ ಮಷೀನ್ಡ್ ಫಿನ್ಸ್ ಮೊದಲಾದ ಆಧುನಿಕ ವೈಶಿಷ್ಟ್ಯಗಳಿವೆ. ಭಾರತೀಯ ರಸ್ತೆಗಳಿಗಾಗಿ ವಿನ್ಯಾಸಗೊಳಿಸಲಾದ ಫ್ಲಾಟ್-ಟ್ರಾಕ್ ಶೈಲಿಯ ಈ ಬೈಕ್ ವಿಶಾಲ ಹ್ಯಾಂಡಲ್‌ಬಾರ್‌ನೊಂದಿಗೆ ಸುಲಭ ಮತ್ತು ಆರಾಮದಾಯಕ ರೈಡಿಂಗ್ ಅನುಭವವನ್ನು ನೀಡುತ್ತದೆ. ಈ ಬೈಕ್ ಯೆಲ್ಲೋ, ಬ್ಲಾಕ್ ಮತ್ತು ಅಲ್ಯೂಮಿನಿಯಂ ಸಿಲ್ವರ್‌ ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ತನ್ನ ದರದಲ್ಲಿ ಅತ್ಯುತ್ತಮ ಮೌಲ್ಯವನ್ನು ಒದಗಿಸುತ್ತದೆ ಎಂದರು.

40ಕ್ಕೂ ಅಧಿಕ ಟ್ರಯಂಪ್ ಗ್ರಾಹಕರು, ಅಭಿಮಾನಿಗಳು ಭಾಗವಹಿಸಿದ್ದರು. ಈ ವೇಳೆ ಸಂತೋಷ ದೇಸಾಯಿ, ಆನಂದ ರಾಠೋಡ, ಡಾ.ಜಮೀರ್‌ ಬಾಂಟಿ ಉಪಸ್ಥಿತರಿದ್ದರು. ಕಿಫಾಯತ್ ಹುಸೇನ್ ನಿರೂಪಿಸಿದರು. ಮಲ್ಲೇಶಪ್ಪಗೌಡ ಪೊಲೀಸಪಾಟೀಲ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದು ಮರ ಸಾವಿರ ಜೀವಗಳನ್ನು ಉಳಿಸುತ್ತದೆ
ಇಂದು ಪರಿಷತ್ ಪ್ರದಗ್ರಹಣ