ತ್ರಿವಿಧ ದಾಸೋಹ ಬಹುಶ್ರೇಷ್ಠ

KannadaprabhaNewsNetwork |  
Published : Apr 14, 2024, 01:45 AM IST
ತ್ರಿವಿಧ ದಾಸೋಹ ಬಹುಶ್ರೇಷ್ಠವಾದುದು : ಅಶೋಕ ಮಹಾಬಳಶೆಟ್ಟಿ. | Kannada Prabha

ಸಾರಾಂಶ

ರಬಕವಿ-ಬನಹಟ್ಟಿ: ಎಲ್ಲ ದಾನಗಳಲ್ಲಿ ಅನ್ನದಾನಕ್ಕೆ ಹೆಚ್ಚಿನ ಪುಣ್ಯವಿದೆ. ಕಾಯಕ, ದಾಸೋಹ ಶರಣ ಸಂಸ್ಕೃತಿಯ ಮೂಲ ತಿರುಳಾಗಿದೆ ಎಂದು ಐಸಿಐಸಿಐ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಅಶೋಕ ಮಹಾಬಳಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಎಲ್ಲ ದಾನಗಳಲ್ಲಿ ಅನ್ನದಾನಕ್ಕೆ ಹೆಚ್ಚಿನ ಪುಣ್ಯವಿದೆ. ಕಾಯಕ, ದಾಸೋಹ ಶರಣ ಸಂಸ್ಕೃತಿಯ ಮೂಲ ತಿರುಳಾಗಿದೆ ಎಂದು ಐಸಿಐಸಿಐ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಅಶೋಕ ಮಹಾಬಳಶೆಟ್ಟಿ ಹೇಳಿದರು.

ರಬಕವಿಯ ಶ್ರೀದಾನಮ್ಮ ದೇವಸ್ಥಾನದಲ್ಲಿ ಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಅನ್ನ ಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಬಕವಿಯ ಭಾರತ್ ಗ್ಯಾಸ್ ಸಂಸ್ಥೆಯ ಮಾಲೀಕ ಮತ್ತು ಬಸವಾ ಎಜ್ಯುಕೇಶನ್ ಫೌಂಡೇಶನ್ ಧುರೀಣ ಸೋಮಶೇಖರ ಕೊಟ್ರಶೆಟ್ಟಿ ಡಿ.ಕೆ.ಕೊಟ್ಟರಶೆಟ್ಟಿ ಫೌಂಡೇಶನ್ ಮೂಲಕ ಕಳೆದ ವರ್ಷಗಳಿಂದ ಅನ್ನ ಹಾಗೂ ಶಿಕ್ಷಣ ದಾಸೋಹ ನಡೆಸುತ್ತಿರುವುದು ಬಹುಶ್ರೇಷ್ಠ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತ ಬಸಯ್ಯ ವಸ್ತ್ರದ ಮಾತನಾಡಿ ಅನ್ನ, ಬಟ್ಟೆ, ವಸತಿ ಮೂಲ ಅವಶ್ಯಕತೆಗಳಾಗಿವೆ. ಮೊದಲಿಗೆ ಅನ್ನದ ಅಗತ್ಯತೆ ಸಕಲ ಜೀವಿಗಳಿಗೂ ಅತ್ಯಗತ್ಯವಾಗಿರುವುದರಿಂದ ಶ್ರೀಕ್ಷೇತ್ರದ ದರ್ಶನಾರ್ಥ ಬರುವ ಭಕ್ತರಿಗೆ ನಿರಂತರ ದಾಸೋಹ ನಡೆಸುತ್ತ ಕೊಟ್ರಶೆಟ್ಟಿಯವರು ಆದರ್ಶರಾಗಿದ್ದಾರೆ ಎಂದರು.

ಮಲ್ಲಿಕಾರ್ಜುನ ಗಡೆಣ್ಣವರ ನಿರೂಪಿಸಿದರು. ಟ್ರಸ್ಟ್‌ ಅಧ್ಯಕ್ಷ ಶಿವಜಾತ ಉಮದಿ, ಈರಪ್ಪ ಪಟ್ಟಣಶೆಟ್ಟಿ, ರೇವಣಸಿದ್ದಪ್ಪ ಉಮದಿ, ಉದಯ ಜಿಗಜಿನ್ನಿ, ಡಾ.ಜಿ.ಎಚ್.ಚಿತ್ತರಗಿ, ನಾರಾಯಣರಾವ ಬೋರಗಿನಾಯಕ, ಬಸವರಾಜ ತೊರ್ಲಿ, ಪ್ರಭು ಉಮದಿ, ಅರ್ಚಕರು ಮತ್ತು ಭಾರತ ಗ್ಯಾಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ