ಅನುಭವ ಮಂಟಪ ಕಟ್ಟಿದವರಲ್ಲಿ ದೇವರ ದಾಸಿಮಯ್ಯ ಪ್ರಮುಖರು: ಕೆ.ಎಸ್.ಸಿದ್ದಲಿಂಗಪ್ಪ

KannadaprabhaNewsNetwork | Published : Apr 14, 2024 1:45 AM

ಸಾರಾಂಶ

ದುಡಿಮೆಯೇ ದೇವರು ಎಂದು ತಿಳಿದು, ಹಗಲಿರುಳು ತಮ್ಮ ನೇಯ್ಗೆ ಕೆಲಸದಲ್ಲಿ ನಿರತರಾಗಿದ್ದ ದೇವರ ದಾಸಿಮಯ್ಯ ಹಾಗೂ ಅವರ ಪತ್ನಿ ದುಗ್ಗಲೆ ಅವರು, ಅನುಭವ ಮಂಟಪ ಕಟ್ಟಿದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುದುಡಿಮೆಯೇ ದೇವರು ಎಂದು ತಿಳಿದು, ಹಗಲಿರುಳು ತಮ್ಮ ನೇಯ್ಗೆ ಕೆಲಸದಲ್ಲಿ ನಿರತರಾಗಿದ್ದ ದೇವರ ದಾಸಿಮಯ್ಯ ಹಾಗೂ ಅವರ ಪತ್ನಿ ದುಗ್ಗಲೆ ಅವರು, ಅನುಭವ ಮಂಟಪ ಕಟ್ಟಿದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಸಾಹಿತ್ಯ ಪರಿಷತ್ ಹಾಗೂ ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಶರಣ ದೇವರದಾಸಿಮಯ್ಯ ಅವರ 1045ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದರೆ, ದುಡಿಮೆ ದೇವರು ಎಂದು ಪ್ರತಿಪಾದಿಸಿ, ಅದರಂತೆ ನಡೆದುಕೊಂಡವರು ದೇವರದಾಸಿಮಯ್ಯ ಎಂದರು.

ದೇವರ ಸೃಷ್ಟಿಯ ಬಗ್ಗೆ ತನ್ನದೇ ಆದ ವ್ಯಾಖ್ಯಾನವನ್ನು ನೀಡಿರುವ ದೇವರ ದಾಸಿಮಯ್ಯ ಅವರು, ಮರ ಮತ್ತು ಬೆಂಕಿ, ದೇಹ ಮತ್ತು ಆತ್ಮ, ಇವುಗಳ ಸಂಬಂಧವನ್ನು ಸೂಳ್ನುಡಿಗಳ ಮೂಲಕ ವರ್ಣಿಸಿದ್ದಾರೆ. ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆಯುವ ಮೂಲಕ ಅವರ ಜನ್ಮ ದಿನವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸೋಣ ಎಂದು ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ನೇಕಾರರ ಸಮುದಾಯದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ವೃತ್ತಿಯಲ್ಲಿ ನೇಕಾರರಾಗಿ, ಪ್ರಕರ ಶಿವಭಕ್ತರಾಗಿದ್ದ ದೇವರದಾಸಿಮಯ್ಯ, ಸಂಸ್ಕೃತ ಭಾಷೆ ಉತ್ತುಂಗದಲ್ಲಿದ್ದ ಕಾಲದಲ್ಲಿ ಜನಸಾಮಾನ್ಯರ ಆಡುಭಾಷೆಯಾಗಿದ್ದ ಕನ್ನಡದಲ್ಲಿ ತಮ್ಮ ಸೂಳ್ನುಡಿ ಗಳನ್ನು ರಚಿಸುವ ಮೂಲಕ ಜೀವನದ ಅರ್ಥ ಮತ್ತು ಅದನ್ನು ಸಾರ್ಥಕಗೊಳಿ ಸುವುದು ಹೇಗೆ ಎಂಬುದನ್ನು ತಿಳಿಸಿ ಕೊಟ್ಟಿದ್ದಾರೆ. ನಮ್ಮ ಕಾಯಕದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಮಹಿಳಾ ಸ್ವಾತಂತ್ರಕ್ಕೆ ಅದ್ಯತೆ ನೀಡಿದ ದೇವರ ದಾಸಿಮ್ಯ ಅವರು ತಮ್ಮ ಪತ್ನಿಯ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ ನೀಡಿ, ಅವರು ಸಹ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಶ್ರಮಿಸಿದ ಮಹಾನ್ ಸಂತರು ಎಂದರು.ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ದೇವರದಾಸಿಮಯ್ಯ ನೇಕಾರರ ಸಮುದಾಯದಲ್ಲಿ ಹುಟ್ಟಿದ್ದರೂ, ಒಂದು ಸಮುದಾಯಕ್ಕೆ ಸೀಮಿತವಾಗದೆ, ಇಡೀ ಮನುಕುಲದ ಒಳತಿಗಾಗಿ ದುಡಿದವರು. ಕಾಯಕವೇ ಕೈಲಾಸ, ದುಡಿಮೆ ದೇವರು ಎಂಬ ಅವರ ಪರಿಕಲ್ಪನೆ ನಿಜಕ್ಕೂ ಆದರ್ಶ ಪ್ರಾಯವಾಗಿವೆ. ನೇಕಾರರ ಸಮುದಾಯದ ಶೈಕ್ಷಣಿಕವಾಗಿ,ರಾಜಕೀಯವಾಗಿ,ಅರ್ಥಿಕವಾಗಿ ಬಹಳ ಹಿಂದೆ ಉಳಿದಿದೆ.ನೇಕಾರಿಕೆ ವೃತ್ತಿಯೇ ಸಂಕಷ್ಟದಲ್ಲಿದೆ. ಸರಕಾರ ನಮ್ಮೆ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ್‌ಕುಮಾರ್, ಜಿಲ್ಲಾ ದೇವಾಂಗ ಸಂಘದ ರೇವಣಕುಮಾರ್, ಬಿ.ಎಲ್. ರವೀಂದ್ರಕುಮಾರ್, ಆಡಿಟರ್ ಚಂದ್ರಪ್ಪ, ಹರಿಶ್ಚಂದ್ರ, ಯೋಗಾನಂದಕುಮಾರ್, ಕಮಲಮ್ಮ, ನಿರ್ಮಲ ದಿವಾಕರ್, ಕೇಶವಮೂರ್ತಿ,ರಾಮುಸ್ವಾಮಿ, ಎನ್.ರಮೇಶ್, ದರ್ಶನ್,ನೇಕಾರರ ಸಮುದಾಯಗಳಾದ ದೇವಾಂಗ, ಕುರುಹಿನ ಶೆಟ್ಟಿ, ಪದ್ಮಶಾಲಿ ಹಾಗೂ ತೋಗಟವೀರ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದದರು.

Share this article