ಸಂಡೂರು: ತಾಲೂಕಿನ ತೋರಣಗಲ್ಲು ಬಳಿಯ ಜೆಎಸ್‌ಡಬ್ಲು 5 ಎಂಟಿ ಟ್ರಕ್ ಪಾರ್ಕಿಂಗ್ ಪ್ರದೇಶದಲ್ಲಿ ದೇಶದ ವಿವಿಧ ಭಾಗಗಳಿಗೆ ಜೆಎಸ್‌ಡಬ್ಲು ಉತ್ಪನ್ನಗಳನ್ನು ಸಾಗಾಟ ಮಾಡುವ ಟ್ರಕ್ ಚಾಲಕ ಮತ್ತು ನಿರ್ವಾಹಕರಿಗೆ ನಿರ್ಮಿಸಲಾಗಿರುವ ಸುಸಜ್ಜಿತವಾದ ವಿಶ್ರಾಂತಿ ಗೃಹವನ್ನು ಜೆಎಸ್‌ಡಬ್ಲು ಫೌಂಡೇಶನ್ ಅಧ್ಯಕ್ಷೆ ಸಂಗೀತ ಜಿಂದಾಲ್ ಮಂಗಳವಾರ ಉದ್ಘಾಟಿಸಿದರು.
ಈ ಕಾರ್ಯಕ್ರಮಗಳು ಸುರಕ್ಷಿತ ಸರಕು ಸಾಗಾಟ, ಉತ್ತಮ ಆರೋಗ್ಯ ಮತ್ತು ಆರ್ಥಿಕ ಕುಟುಂಬಗಳ ನಿರ್ಮಾಣಕ್ಕೆ ಸಹಾಯವಾಗಲಿದೆ ಎಂದರು.
ಲಾಜಿಸ್ಟಿಕ್ ವಿಭಾಗದ ಉಪಾಧ್ಯಕ್ಷರಾದ ಸುಶೀಲ್ ನೋವಾಲ್ ಮಾತನಾಡಿ, ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ, ಜೆಎಸ್‌ಡಬ್ಲು ವ್ಯಾಪ್ತಿಯ ಎಲ್ಲ ಟ್ರಕ್ ಪಾರ್ಕಿಂಗ್ ಸ್ಥಳಗಳಲ್ಲಿಈ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.ವಿಶ್ರಾಂತಿಗೃಹದ ವಿಶೇಷತೆಗಳು:
ಟ್ರಕ್ ಚಾಲಕರು ಹಾಗೂ ನಿರ್ವಾಹಕರಿಗಾಗಿ ನಿರ್ಮಿಸಿರುವ ವಿಶ್ರಾಂತಿಗೃಹದಲ್ಲಿ 104 ಹಾಸಿಗೆಗಳ 4 ಕೊಠಡಿಗಳು, 10 ಸ್ನಾನದ ಕೋಣೆಗಳು, 10 ಶೌಚಾಲಯ ಕೋಣೆಗಳು, 3 ವಾಷಿಂಗ್ ಮೆಷಿನ್, 2 ಬಟ್ಟೆ ತೊಳೆಯುವ ಮತ್ತು ಒಣಗಿಸುವ ಸ್ಥಳ ಹಾಗೂ ಮನರಂಜನೆಗಾಗಿ ಟಿವಿ ಸಭಾಂಗಣ, ಸಂಪೂರ್ಣ ಹವಾನಿಯಂತ್ರಿತ ಕೊಠಡಿಗಳೊಂದಿಗೆ ಸಿಬ್ಬಂದಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಕಾರ್ಯಕ್ರಮದಲ್ಲಿ 600ಕ್ಕೂ ಅಧಿಕ ಟ್ರಕ್ ಚಾಲಕರು, ಜೆಎಸ್‌ಡಬ್ಲೂö್ಯ ಹಿರಿಯ ನಾಯಕತ್ವದ ಅಧಿಕಾರಿಗಳಾದ ಪಿ.ಕೆ. ಘೋರೇ, ಭುವನೇಶ್ವರಿ ಮುರುಗನ್, ಸುನಿಲ್ ರಾಲ್ಫ್, ಪೆದ್ದಣ್ಣ ಬೀಡಲಾ, ಮನೀಷ್ ಕುಮಾರ್, ಅಮಿತ್ ಅಗರ್‌ವಾಲ್, ಸನ್ನಿ ಈಯಪ್ಪನ್, ಅಲೋಕ್‌ಕುಮಾರ್, ಮುತ್ತುಕೃಷ್ಣ, ಸಿಎಸ್‌ಆರ್ ಸಿಬ್ಬಂದಿಗಳು, ಹಮ್ರಾಹಿ ಯೋಜನೆ ಅನುಷ್ಠಾನಗೊಳಿಸುವ ಕೆಹೆಚ್‌ಪಿಟಿ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.