ಕಷ್ಟ-ಸುಖದಲ್ಲಿ ಭಾಗಿಯಾಗುವವರೇ ನಿಜವಾದ ಸ್ನೇಹಿತರು: ಎಲ್.ಟಿ. ನಾಯಕ

KannadaprabhaNewsNetwork |  
Published : Jan 07, 2025, 12:33 AM IST
ಉಮಾ ವಿದ್ಯಾಲಯ ಪ್ರೌಢಶಾಲೆ | Kannada Prabha

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ಸ್ಟೇಟ್ ಬ್ಯಾಂಕಿನ ಮೇಲ್ಭಾಗದ ಎಪಿಎಂಸಿ ವ್ಯಾಪಾರಸ್ಥರ ಸಂಘದಲ್ಲಿ ಭಾನುವಾರ ಪುರಸಭೆಯ ಉಮಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ೧೯೮೪-೮೫ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ ಗೆಳೆಯರ ಬಳಗದ ೫ನೇ ವಾರ್ಷಿಕೋತ್ಸವ ನಡೆಯಿತು.

ಲಕ್ಷ್ಮೇಶ್ವರ: ಜಗತ್ತಿನಲ್ಲಿ ಎಲ್ಲಕ್ಕಿಂತ ಸ್ನೇಹ ದೊಡ್ಡದು. ಸುಧಾಮ-ಕೃಷ್ಣರ ಅಪ್ಪಟ ಸ್ನೇಹ ವಿಶ್ವಕ್ಕೆ ಮಾದರಿಯಾಗಿದೆ. ಕಷ್ಟ-ಸುಖದಲ್ಲಿ ಭಾಗಿಯಾಗುವವರೇ ನಿಜವಾದ ಸ್ನೇಹಿತರು ಎಂದು ಬಳಗದ ಸದಸ್ಯ ಹಾಗೂ ಧಾರವಾಡ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಎಲ್.ಟಿ. ನಾಯಕ ಹೇಳಿದರು.

ಪಟ್ಟಣದ ಸ್ಟೇಟ್ ಬ್ಯಾಂಕಿನ ಮೇಲ್ಭಾಗದ ಎಪಿಎಂಸಿ ವ್ಯಾಪಾರಸ್ಥರ ಸಂಘದಲ್ಲಿ ಭಾನುವಾರ ಪುರಸಭೆಯ ಉಮಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ೧೯೮೪-೮೫ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ ಗೆಳೆಯರ ಬಳಗದ ೫ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಮಂಜುನಾಥ ಹೊಳ್ಳಿಯವರಮಠ ಮಾತನಾಡಿ, ಉತ್ತಮ ಸ್ನೇಹಿತರು ಸಿಕ್ಕರೆ ಬದುಕು ಸ್ವಾರಸ್ಯಕರವಾಗುತ್ತದೆ. ಪ್ರತಿದಿನ ಸ್ನೇಹಿತರೊಡನೆ ಒಡನಾಟ ಇಟ್ಟುಕೊಂಡು ಅವರೊಂದಿಗೆ ಕಷ್ಟ-ಸುಖ ಹಂಚಿಕೊಳ್ಳಬೇಕು. ಅಂದಾಗ ಮಾತ್ರ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳಿಂದ ಹೊರ ಬರಲು ಸಾಧ್ಯ. ಸ್ನೇಹದಲ್ಲಿ ಸ್ವಾರ್ಥ ಇರಬಾರದು. ಅಂಥ ಸ್ನೇಹ ಬಹಳ ದಿನ ಉಳಿಯಲಾರದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ಬಳಗದ ವತಿಯಿಂದ ಕಳೆದ ಐದು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಕೊರೋನಾ ಸಮಯದಲ್ಲಿ ಬಡವರಿಗೆ ಆಹಾರ ಕಿಟ್ ವಿತರಿಸಲಾಗಿದೆ. ಪ್ರತಿವರ್ಷ ಪರಿಸರ ದಿನಾಚರಣೆಯಂದು ಸಸಿಗಳನ್ನು ನೆಡುವ ಪರಂಪರೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ತಿಂಗಳ ಕೊನೆಯ ಭಾನುವಾರ ದೇವಸ್ಥಾನ, ರುದ್ರಭೂಮಿ ಸ್ವಚ್ಛಗೊಳಿಸುವ ಕೆಲಸಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮಹಾಬಳೇಶ್ವರ ಮೆಡೇರಿ, ರುದ್ರಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಬಳಗದ ಸದಸ್ಯರಾದ ಶಿವಶಂಕರ ಬಿಂದಕಟ್ಟಿ ಮತ್ತು ಚಂದ್ರಶೇಖರ ಸಂಕಣ್ಣವರ ಮಾತನಾಡಿದರು. ಮಹೇಶ ಕರೆಕಲ್ಲ, ಸುಮಾ ಚೋಟಗಲ್ಲ ಮಾತನಾಡಿದರು. ಬಿ.ಎಂ. ಕೆರೂರ, ಮಧುಸೂದನ ದೇಶಪಾ೦ಡೆ, ಪಿ.ಎಸ್. ಬಾಳಿಹಳ್ಳಿಮಠ, ಎಲ್.ಎನ್. ನಂದೆಣ್ಣವರ, ಸರಿತಾ ಕನವಳ್ಳಿ, ಮೀನಾ ಹಿರೇಮಠ, ಪಿ.ಎಸ್. ಬಾಳಿಹಳ್ಳಿಮಠ, ಸೋಮಣ್ಣ ಲಮಾಣಿ, ಡಿ.ಎಚ್. ಪಾಟೀಲ್‌ ಇದ್ದರು.

ಬಸವರಾಜ ಹೆಬ್ಬಾಳ ಮತ್ತು ಬಿ.ಎಂ. ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಚಟ್ಲಿ ಸ್ವಾಗತಿಸಿದರು. ಸುರೇಶ ಚೋಟಗಲ್ಲ ವರದಿ ವಾಚನ ಓದಿದರು. ಕೆ.ಎಸ್. ಬಾಳೇಶ್ವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ವಡಕಣ್ಣವರ ವಂದಿಸಿದರು. ಉಮಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸರಿತಾ ಕನವಳ್ಳಿ, ಕುಮಾರಿ ಅಂಗಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ವೆಂಕಟೇಶ ಪಾಟೀಲ ಮತ್ತು ಅಕ್ಷಯ ಭಜಂತ್ರಿ ತಬಲಾ ಸಾಥ್ ನೀಡಿದರು. ಬಳಗದ ನೂರಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ