ಸುಕ್ಷೇತ್ರ ಸೊಲ್ಲಾಪುರದಲ್ಲಿ ಕಾಯಕಯೋಗಿ ಸಿದ್ದರಾಮೇಶ್ವರರ ಜಯಂತಿ ಆಚರಣೆ
ಸೊಲ್ಲಾಪುರದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ 853ನೇ ಸಿದ್ದರಾಮಯ್ಯ ಜಯಂತಿಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ 12ನೇ ಶತಮಾನದಲ್ಲಿ ನೂರಾರು ಕೆರೆ ಕಟ್ಟೆಗಳನ್ನು ಕಟ್ಟಿಸುವ ಮೂಲಕ ನೀರಾವರಿ ಕ್ರಾಂತಿಗೆ ನಾಂದಿ ಹಾಡಿದವರು ಇವರು. ತಳ ಸಮುದಾಯದ ಧ್ವನಿಯಾಗಿದ್ದರು. ಇಂತಹ ದಾರ್ಶನಿಕರ ಜೀವನ ಮೌಲ್ಯಗಳು ನಾವು ಅಳವಡಿಸಿ ಕೊಂಡಲ್ಲಿ ಈ ಸಮಾಜಕ್ಕೆ ನ್ಯಾಯ ಒದಗಿಸಬಹುದು ಎಂದರು.
ತರೀಕೆರೆ ಶಾಸಕ ಜಿ.ಎಚ್ ಶ್ರೀನಿವಾಸ್ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿ ರೈತರಿಗೆ ನೆರವಾಗುವ ಏತ ನೀರಾವರಿ ಯೋಜನೆ ಮಾಡಲಾಗಿದೆ. ಸಮುದಾಯ ಭವನ ಮಹಿಳಾ ಹಾಸ್ಟೆಲ್ ಗೆ ಅನುದಾನ ನೀಡಲಾಗುವುದು ಎಂದು ಹೇಳಿದರು. 2027ನೇ ಇಸವಿಯಲ್ಲಿ ಬರುವ 12 ವರ್ಷದ ಸಿದ್ದರಾಮಯ್ಯ ಜಾತ್ರೆಗೆ ಎಲ್ಲಾ ರೀತಿ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು. ಪ್ರತಿಫಲ ಇಲ್ಲದೆ ಸೇವೆ ಮಾಡುತ್ತಿರುವ ದೇವಸ್ಥಾನದ ಸಮಿತಿ ಅಧ್ಯಕ್ಷ ರಾಜಪ್ಪ ಅವರ ಕಾರ್ಯವನ್ನು ಶ್ಲಾಘಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ರಾಜಪ್ಪ ಮಾತನಾಡಿ ಈ ಹಿಂದೆ ದೇವಸ್ಥಾನದ ಸ್ಥಿತಿಗತಿಗಳು ಹೇಗೆ ಇದ್ದವು. ತಾವು ಅಧ್ಯಕ್ಷರಾದ ಮೇಲೆ ನಡೆದ ಕಾಮಗಾರಿಗಳ ಬಗ್ಗೆ ತಿಳಿಸಿದರು.ಗ್ಯಾರಂಟಿ ಜಿಲ್ಲಾ ಅಧ್ಯಕ್ಷ ಎಂ.ಸಿ ಶಿವಾನಂದ ಸ್ವಾಮಿ ಮಾತನಾಡಿ ಪ್ರತಿ ವರ್ಷ ರಾಜ್ಯದಲ್ಲಿ ಅದ್ಧೂರಿಯಾಗಿ ಸಿದ್ದರಾಮಯ್ಯ ಜಯಂತಿ ಮಾಡುತ್ತೇವೆ. ಈ ಬಾರಿ ರಾಜಕೀಯ ಗೊಂದಲದಿಂದ ಸುಕ್ಷೇತ್ರ ಸೊಲ್ಲಾಪುರದಲ್ಲಿ ಸಿದ್ದರಾಮಯ್ಯ ಜಯಂತಿ ಮಾಡುತ್ತಿದ್ದು ಇವರ ಕಾಯಕ ಪ್ರಜ್ಞೆಯನ್ನು ಎಲ್ಲರೂ ಪಾಲಿಸಬೇಕೆಂದರು.
ಕೆ.ಸಿ. ವಿಜಯ್ ಕುಮಾರಿ ಅವರ ಭಕ್ತಿಗೀತೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮುಖಂಡ ಕೆ. ಎಸ್. ಶಿವಣ್ಣ ಧ್ವಜಾರೋಹಣ ನೆರವೇರಿಸಿದರು.ಕಾರ್ಯಕ್ರಮದಲ್ಲಿ 7 ಹಳ್ಳಿಗಳ 18 ಮಾಗಡಿ ಸೀಮೆಯ ಭಕ್ತರು ಭಾಗವಹಿಸಿದ್ದರು.ಕರಡಿ ಗವಿಮಠದ ಶ್ರೀಗಳು ಧಾರ್ಮಿಕ ನಾಯಕರ ರಾಜಕೀಯ ನಾಯಕ ಸಮಾಜದಲ್ಲಿ ಒಟ್ಟಾಗಿ ಸೇರಿ ಸೇವೆ ಮಾಡಿದಾಗ ಸಿದ್ದರಾಮಯ್ಯ ಜಯಂತಿ ಆಚರಣೆಗೆ ಯಾವುದೇ ತೊಂದರೆ ಬರುವುದಿಲ್ಲ. ಸಮಿತಿ ಉಪಾಧ್ಯಕ್ಷ ಸಿ. ಕೆ. ಸ್ವಾಮಿ. ಸಂಪಾದಕ ಸಿದ್ದರಾಮಯ್ಯ ಗೌಡ. ಸಾಹಿತಿ ಸತ್ಯನಾರಾಯಣ ದಾಸ್. ಪ್ರಧಾನ ಅರ್ಚಕ ಸಿದ್ದನಾಥ ಸ್ವಾಮಿ. ಕೃಷಿ ಪತ್ತಿನ ನಿರ್ದೇಶಕ ನಿಜಗುಣ ಸ್ವಾಮಿ. ಗಡಿಹಳ್ಳಿ ಮಂಜುನಾಥ್. ನಿವೃತ್ತ ಶಿಕ್ಷಕ ಶಿವಕುಮಾರ್ ಉಪಸ್ಥಿತರಿದ್ದರು.