ಬೀಳಗಿ ಪಟ್ಟಣದ ಮಂದಾರ ಪಬ್ಲಿಕ್ ಶಾಲೆಯಲ್ಲಿ ಸುಗ್ಗಿ ಹಬ್ಬ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಬೀಳಗಿ
ಪಟ್ಟಣದ ಮಂದಾರ ಪಬ್ಲಿಕ್ ಶಾಲೆಯಲ್ಲಿ ಸುಗ್ಗಿ ಹಬ್ಬ ಕಾರ್ಯಕ್ರಮ ನಡೆಯಿತು.ಮಕರ ಸಂಕ್ರಾಂತಿ ಹಬ್ಬದ ಪ್ರಾಮುಖ್ಯತೆ ಹಾಗೂ ಹಬ್ಬದ ವಿಶೇಷತೆಯಾಗಿರುವ ಧಾನ್ಯಗಳ ಪೂಜೆ, ಎಳ್ಳು ಬೆಲ್ಲ ಹಂಚುವುದು ಇತರೆ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಜಾನಪದ ದೃಶ್ಯಗಳನ್ನು ಹಾಗೂ ಹಳ್ಳಿ ಸೊಗಡಿನ ವೇಷ ಧರಿಸಿ ಗಮನ ಸೆಳೆದರು.
ಬಾಲ್ಯದಿಂದಲೇ ಹಬ್ಬಗಳ ಮಾಹಿತಿ ವಿದ್ಯಾರ್ಥಿಗಳಿಗೆ ಇರಬೇಕು ಎಂಬ ಕಾರಣಕ್ಕೆ ದೇಶದ ವಿವಿಧ ಹಬ್ಬಗಳು ಹಾಗೂ ವೇಷಭೂಷಣಗಳ ಬಗ್ಗೆ ಅರಿವು ಮೂಡಿಸಲು ಸುಗ್ಗಿ ಹಬ್ಬ ಕಾರ್ಯಕ್ರಮ ನಡೆಸಲಾಗಿದೆ ಎಂದು ಶಾಲೆಯ ಮುಖ್ಯಶಿಕ್ಷಕಿ ಸುಮಾ ಸೋಮನಕಟ್ಟಿ ತಿಳಿಸಿದರು.ಮುಖ್ಯಶಿಕ್ಷಕಿ ಸುಮಾ ಸೋಮನಕಟ್ಟಿ, ಶಿಕ್ಷಕರಾದ ವಿಜಯಲಕ್ಷ್ಮಿ ಗಾಣಿಗೇರ, ರೇಣುಕಾ ಬೊರ್ಜಿ, ಅಂಕಿತಾ ಪೂಜಾ ಗಂಜ್ಯಾಳ,ಪ್ರೇಮಾ ಕುಂದರಗಿ, ಮಂಜುನಾಥ ತಳವಾರ,ರಾಧಿಕಾ ಸೋಮನಕಟ್ಟಿ, ಪ್ರೀತಿ ಸೋಮನಕಟ್ಟಿ, ಸಂಪತಕುಮಾರ ಸೋಮನಕಟ್ಟಿ ಇದ್ದರು.