ಮಹದಾಯಿಯನ್ನು ಸ್ವಾರ್ಥಕ್ಕೆ ಜೀವಂತ ಇಡಲು ಯತ್ನ: ಸೊಬರದಮಠ

KannadaprabhaNewsNetwork |  
Published : Sep 09, 2024, 01:37 AM IST
(8ಎನ್.ಆರ್.ಡಿ1 ಮಹದಾಯಿ ಹೋರಾಟ ವೇದಿಕೆಯಲ್ಲಿ ರೈತ ಮುಖಂಡ ವಿರೇಶ ಸೊಬರದಮಠ ಮಾತನಾಡುತ್ತಿದ್ದಾರೆ.)  | Kannada Prabha

ಸಾರಾಂಶ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹುಬ್ಬಳ್ಳಿ ಧಾರವಾಡದ ಕುಡಿಯುವ ನೀರಿನ ಪರಿಸ್ಥಿತಿಯನ್ನಾದರೂ ಅರಿತು ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಮಾಡಬೇಕು

ನರಗುಂದ: ಮಹದಾಯಿ ಬಗ್ಗೆ ರಾಜಕೀಯ ನಾಯಕರಿಗೆ ಕಾಳಜಿ ಇಲ್ಲ, ಅದರ ಹೆಸರಿನಲ್ಲಿ ರಾಜಕೀಯ ಕೆಸರಚಾಟ ನಡೆಸಿ ಹೋರಾಟ ಜೀವಂತವಾಗಿಡಲು ನೋಡುತ್ತಿವೆ. ರೈತರು ಜಾಗೃತಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮಹದಾಯಿಗಾಗಿ ಮತ್ತೊಂದು ಸಂಘಟನಾತ್ಮಕ ಹೋರಾಟ ನಡೆಸಲು ಸಿದ್ಧತೆ ನಡೆಸಿದೆ ಎಂದು ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.ಅವರು ಪಟ್ಟಣದಲ್ಲಿ ನಡೆಯುತ್ತಿರುವ ನಿರಂತರ ಮಹದಾಯಿ ಧರಣಿ ವೇದಿಕೆಯಲ್ಲಿ ಭಾನುವಾರ ಮಾತನಾಡಿ, ಅ. 4ರಂದು ನರಗುಂದದಲ್ಲಿ ಬೃಹತ್ ರೈತರ ಸಮಾವೇಶ ನಡೆಯಲಿದೆ. ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದೆ. ಸರ್ವ ಪಕ್ಷದ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದ್ದಾರೆ. ಕೇಂದ್ರ ಸಂಸದರನ್ನು ಹಾಗೂ ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಾಗಿದೆ. ಸಂಸದ ಜಗದೀಶ್ ಶೆಟ್ಟರ್ ಹಾಗೂ ಗೋವಿಂದ ಕಾರಜೋಳ ಅರಣ್ಯ ಸಚಿವ ಭೂಪೇಂದ್ರ ಯಾದವರಿಗೆ ಪತ್ರ ಬರೆದಿದ್ದಾರೆ. ಎಲ್ಲ ಸಂಸದರು ಮಹದಾಯಿಗೆ ಪಕ್ಷ ಭೇದ ಮರೆತು ಒತ್ತಡ ಹಾಕಬೇಕು. ಅದರಲ್ಲೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹುಬ್ಬಳ್ಳಿ ಧಾರವಾಡದ ಕುಡಿಯುವ ನೀರಿನ ಪರಿಸ್ಥಿತಿಯನ್ನಾದರೂ ಅರಿತು ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಮಾಡಬೇಕು ಎಂದರು.

ಗೋವಾ ಪದೇ ಪದೇ ಮಹದಾಯಿ ಕಳಸಾ ಬಂಡೂರಿ ವಿಷಯದಲ್ಲಿ ತಕರಾರು ತೆಗೆಯುತ್ತಲೇ ಯೋಜನೆ ಅನುಷ್ಠಾನಕ್ಕೆ ಹಿನ್ನೆಡೆ ಒಡ್ಡುತ್ತಲಿದೆ. ಮಹದಾಯಿ ಯೋಜನೆ ಪ್ರದೇಶದಲ್ಲಿ ಹುಲಿ ಸಂರಕ್ಷಿತ ವಲಯ ಇಲ್ಲವೆಂದು ವರದಿ ಸಲ್ಲಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರದ ವನ್ಯಜೀವಿ ಪ್ರಾಧಿಕಾರದ ಮಂಡಳಿಯು ಮತ್ತೇ ಗೋವಾದ ಅರಣ್ಯ ಇಲಾಖೆಯ ಮನವಿ ಪುರಸ್ಕರಿಸಿದೆ. ಇದನ್ನು ವಿರೋಧಿಸಿ ನ್ಯಾಯವಾದಿಗಳ ಮೂಲಕ ರೈತ ಸೇನೆ ರಾಜ್ಯ ಘಟಕ ಶೀಘ್ರವೇ ಕಾರಣ ಕೇಳಿ ವನ್ಯಜೀವಿ ಪ್ರಾಧಿಕಾರದ ಮಂಡಳಿಗೆ ನೊಟೀಸ್ ಕಳಿಸಲಾಗುವುದು. ವನ್ಯಜೀವಿ ಪ್ರಾಧಿಕಾರದ ಅಧ್ಯಕ್ಷರು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಿವಪ್ಪ ಹೊರಕೇರಿ, ವೀರಭಸಪ್ಪ ಹೂಗಾರ, ಫಕೀರಪ್ಪ ಜೋಗಣ್ಣವರ, ಪರಶುರಾಮ ಜಂಬಗಿ, ಹನಮಂತ ಮಡಿವಾಳರ, ಮಲ್ಲಣ್ಣ ಅಲೇಕಾರ, ಚಂದ್ರಗೌಡ ಪಾಟೀಲ, ಹನಮಂತ ಸರನಾಯ್ಕರ, ಸುಭಾಸ ಗಿರಿಯಣ್ಣರ, ಪರಮೇಶ್ವರ, ವಾಸು ಚವ್ಹಾಣ ಹಾಗೂ ರೈತ ಸೇನೆ ಸರ್ವ ಸದಸ್ಯರು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು