‘ಮಿಡಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

KannadaprabhaNewsNetwork |  
Published : Feb 01, 2025, 12:04 AM IST
‘ಮಿಡಲ್‌ ಕ್ಲಾಸ್‌ ಫ್ಯಾಮಿಲಿ’ ಚಿತ್ರ ಪ್ರದರ್ಶನಕ್ಕೆ ಚಾಲನೆ | Kannada Prabha

ಸಾರಾಂಶ

ಉದ್ಯಮಿ ರೋಹನ್ ಮೊಂತೇರೋ ಮಾತಾಡಿ, ತುಳುನಾಡಿನ ಯುವಜನರು ಒಟ್ಟಾಗಿ ಒಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ತುಳು ನಮ್ಮ ತಾಯಿ ಭಾಷೆ ಬಹಳ ಚಂದದ ಭಾಷೆ. ಹಾಗೆಯೇ ಎರಡು ವಾರಗಳ ಒಳಗಾಗಿ ಸಿನಿಮಾ ನೋಡಿದ ಟಿಕೆಟ್ ಜೊತೆ ಬಂದರೆ ನಮ್ಮ ರೋಹನ್ ಕಾರ್ಪೋರೇಷನ್‌ನಲ್ಲಿ ಫ್ಲ್ಯಾಟ್ ಶಾಪ್ ಪಡೆಯಲು ಶೇ.೧೦ರ ರಿಯಾಯಿತಿ ನೀಡುತ್ತೇವೆ. ತುಳುವರು ಈ ಆಫರ್‌ನ್ನು ಬಳಸಿಕೊಳ್ಳಿ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರೋಹನ್ ಕಾರ್ಪೊರೇಷನ್ ಅರ್ಪಿಸುವ, ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನೆಂಟ್ ಪ್ರೊಡಕ್ಷನ್, ಎಚ್.ಪಿ.ಆರ್ ಫಿಲಂಸ್ ಹರಿಪ್ರಸಾದ್ ರೈಯವರ ಸಹಯೋಗದಲ್ಲಿ ಆನಂದ್ ಎನ್. ಕುಂಪಲರವರ ನಿರ್ಮಾಣದಲ್ಲಿ ತಯಾರಾದ ‘ಮಿಡ್ಸ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾ ಶುಕ್ರವಾರ ನಗರದ ಭಾರತ್ ಮಾಲ್‌ನಲ್ಲಿ ನಡೆದ ಅದ್ದೂರಿ ಸಮಾರಂಭದ ಮೂಲಕ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಂಡಿದೆ.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತಾಡಿ, ಮಿಡಲ್ ಕ್ಲಾಸ್ ಫ್ಯಾಮಿಲಿ ಸಿನಿಮಾದಲ್ಲಿ ಹಾಸ್ಯದ ಜೊತೆ ಒಳ್ಳೆಯ ಸಂದೇಶ ಇರುವ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ತುಳುಭಾಷೆ ಬೆಳವಣಿಗೆಗೆ ತುಳು ಸಿನಿಮಾಗಳು ಬಹಳಷ್ಟು ಸಹಕಾರ ನೀಡುತ್ತಿವೆ. ಸಿನಿಮಾದಲ್ಲಿ ನನಗೂ ಒಂದು ಸಣ್ಣ ಅವಕಾಶ ನೀಡಿದ್ದಾರೆ. ಇಂತಹ ಗುಣಮಟ್ಟದ ಸಿನಿಮಾ ತುಳುನಾಡಿಗೆ ಅರ್ಪಿಸುತ್ತಿರುವ ಸಿನಿಮಾ ತಂಡಕ್ಕೆ ಶುಭವಾಗಲಿ ಎಂದರು.

ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ ಮಾತಾಡಿ, ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎಂಬ ಆಶಯವನ್ನು ಬೆಂಬಲಿಸಲು ಮಿಡಲ್ ಕ್ಲಾಸ್ ಫ್ಯಾಮಿಲಿ ಸಿನಿಮಾ ಪೂರಕವಾಗಲಿದೆ ಎಂದರು.ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, ಈ ಸಿನಿಮಾ ರಾಹುಲ್ ಅಮೀನ್ ದಕ್ಷ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗಲಿದೆ. ಸಿನಿಮಾ ತುಳುನಾಡಿನ ಮಣ್ಣಿನ ಸೊಗಡು ಹೊಂದಿದ್ದು ತುಳುವರ ಮನ ಗೆಲ್ಲಲಿದೆ ಎಂದರು.ಗೇರುಬೀಜ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತಾಡಿ, ಎಲ್ಲರೂ ಸಿನಿಮಾ ನೋಡಿ ಖಂಡಿತ ಈ ಸಿನಿಮಾ ಗೆಲ್ಲಲಿದೆ. ಜನರಿಗೆ ಮನೆ ಕೊಳ್ಳಲು ಅವಕಾಶ ನೀಡಿರುವ ರೋಹನ್ ಮೊಂತೇರೋ ಅವರಿಗೆ ಅಭಿನಂದನೆಗಳು ಎಂದರು.

ಪ್ರಾಸ್ತಾವಿಕ ಮಾತನ್ನಾಡಿದ ನಟ ವಿನೀತ್ ಕುಮಾರ್, ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನಿಮಾವನ್ನು ನೀವು ಗೆಲ್ಲಿಸಿದಿರಿ. ಈಗ ಅದೇ ತಂಡ ಕುಟುಂಬ ಸಮೇತರಾಗಿ ಕೂತು ನೋಡುವಂತಹ ‘ಮಿಡಲ್ ಕ್ಲಾಸ್ ಫ್ಯಾಮಿಲಿ’ ಸಿನಿಮಾ ಮಾಡಿದ್ದೇವೆ. ನೀವು ಮತ್ತೆ ಅದೇ ಪ್ರೀತಿಯಿಂದ ನಮ್ಮನ್ನು ಆಶೀರ್ವದಿಸುತ್ತೀರಿ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದರು.

ಸಿನಿಮಾ ಟಿಕೆಟ್‌ ತೋರಿಸಿದರೆ ಫ್ಲ್ಯಾಟ್‌ ಖರೀದಿಗೆ ಆಫರ್‌: ಉದ್ಯಮಿ ರೋಹನ್ ಮೊಂತೇರೋ ಮಾತಾಡಿ, ತುಳುನಾಡಿನ ಯುವಜನರು ಒಟ್ಟಾಗಿ ಒಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ತುಳು ನಮ್ಮ ತಾಯಿ ಭಾಷೆ ಬಹಳ ಚಂದದ ಭಾಷೆ. ಹಾಗೆಯೇ ಎರಡು ವಾರಗಳ ಒಳಗಾಗಿ ಸಿನಿಮಾ ನೋಡಿದ ಟಿಕೆಟ್ ಜೊತೆ ಬಂದರೆ ನಮ್ಮ ರೋಹನ್ ಕಾರ್ಪೋರೇಷನ್‌ನಲ್ಲಿ ಫ್ಲ್ಯಾಟ್ ಶಾಪ್ ಪಡೆಯಲು ಶೇ.೧೦ರ ರಿಯಾಯಿತಿ ನೀಡುತ್ತೇವೆ. ತುಳುವರು ಈ ಆಫರ್‌ನ್ನು ಬಳಸಿಕೊಳ್ಳಿ ಎಂದರು.ವೇದಿಕೆಯಲ್ಲಿ ಮಂಗಳೂರು ಮೇಯರ್ ಮನೋಜ್ ಕುಮಾರ್, ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪದ್ಮರಾಜ್ ಆರ್, ಮುಖಂಡರಾದ ಡಾ.ಎಂಚ್‌.ಎಂ. ವಾಟ್ಸಾನ್, ಜಗದೀಶ್ ಕದ್ರಿ, ರೋಷನ್‌ ಮೊಂತೆರೊ, ಎಸ್. ಕೆ.ಪಿ.ಎ. ಜಿಲ್ಲಾ ಉಪಾಧ್ಯಕ್ಷ ರಮೇಶ್, ಕಲಾಶ್ರೀ ಮಂಗಳೂರು ವಲಯಾಧ್ಯಕ್ಷ ಹರೀಶ್ ಅಡ್ಯಾರ್, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ್ ಕತ್ತಲ್‌ಸಾರ್‌, ಲೀಲಾಕ್ಷ ಕರ್ಕೇರ, ತುಳು ಚಿತ್ರ ನಟರಾದ ಅರ್ಜುನ್ ಕಾಪಿಕಾಡು, ಶೋಭರಾಜ್ ಪಾವೂರು, ಸಂದೀಪ್ ಮಲಾನಿ, ವಿಠಲ್ ಕುಲಾಲ್, ಸೀತಾರಾಮ ಶೆಟ್ಟಿ, ಪ್ರಕಾಶ್ ಧರ್ಮನಗರ, ಚಿತ್ರ ನಿರ್ಮಾಪಕರಾದ ಆನಂದ್ ಎನ್. ಕುಂಪಲ, ಹರಿಪ್ರಸಾದ್ ರೈ, ಭರತ್ ಕುಮಾರ್, ಗಣೇಶ್ ಕೊಲ್ಯ, ಅಶ್ವಿನಿ ರಕ್ಷಿತ್, ತಮ್ಮ ಲಕ್ಷ್ಮಣ, ಜಗದೀಶ್ ಕದ್ರಿ, ಅಶ್ವಿತ್ ಕೊಟ್ಟಾರಿ, ಹರಿಪ್ರಸಾದ್ ರೈ, ನಿರ್ದೇಶಕ ರಾಹುಲ್ ಅಮೀನ್, ಅಶ್ವಿನಿ ರಕ್ಷಿತ್, ನಟಿ ಸಮತಾ ಅಮೀನ್, ನಿತಿನ್ ರಾಜ್ ಶೆಟ್ಟಿ ಮತ್ತಿತರರು ಇದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ