‘ಕೆಮ್ತೂರು ದೊಡ್ಡಣ್ಣ ಶೆಟ್ರೆನ ತುಳು ನಾಟಕ ಪರ್ಬ’ ಉದ್ಘಾಟನೆ
ಉಡುಪಿ: ಮಾಧ್ಯಮಗಳೇ ಇಲ್ಲದಿದ್ದ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಈ ಭಾಗದಲ್ಲಿ ತುಳು ನಾಟಕಗಳು ಸಾಮಾಜಿಕ ಜಾಗೃತಿ ಮೂಡಿಸುವ ಮಾಧ್ಯಮಗಳಾಗಿದ್ದವು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.ಸೋಮವಾರ ಇಲ್ಲಿನ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ 24ನೇ ವರ್ಷದ ‘ಕೆಮ್ತೂರು ದೊಡ್ಡಣ್ಣ ಶೆಟ್ರೆನ ನೆಂಪುದ ತುಳು ನಾಟಕ ಪರ್ಬ’ವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೆ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ ವನಿತಾ ಮಯ್ಯ ಆಗಮಿಸಿದ್ದರು.
ತುಳುಕೂಟದ ಸ್ಥಾಪಕಾಧ್ಯಕ್ಷ ಡಾ. ಭಾಸ್ಕರಾನಂದ ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ತುಳು ಸಾಹಿತ್ಯ ಅಕಾಡೆಮಿ ರೆಜಿಸ್ಟ್ರಾರ್ ಪೂರ್ಣಿಮಾ, ಕೆಮ್ತೂರು ಕುಟುಂಬದ ವಿಜಯಕುಮಾರ್ ಶೆಟ್ಟಿ, ತುಳುಕೂಟದ ಉಪಾಧ್ಯಕ್ಷ ಶೋಭಾ ಶೆಟ್ಟಿ, ದಿವಾಕರ ಸನಿಲ್, ಕೋಶಾಧಿಕಾರಿ ಚೈತನ್ಯ ಎಂ.ಜಿ. ಹಾಜರಿದ್ದರು.ತುಳುಕೂಟದ ಉಪಾಧ್ಯಕ್ಷ ಭುವನಪ್ರಸಾದ್ ಹೆಗ್ಡೆ ಸ್ವಾಗತಿಸಿದರು, ವಿ. ಕೆ. ಯಾದವ್ ನಿರೂಪಿಸಿದರು. ನಾಟಕ ಸ್ಪರ್ಧೆ ಸಂಚಾಲಕ ಬಿ. ಪ್ರಭಾಕರ್ ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜ್ಯೋತಿ ಪ್ರಾರ್ಥಿಸಿದರು, ಪ್ರ. ಕಾರ್ಯದರ್ಶಿ ಗಂಗಾಧರ್ ಕಿದಿಯೂರು ವಂದಿಸಿದರು.ಕಲಾಮಂದಿರ ಉಡುಪಿ ಇವರಿಂದ ಪ್ರಥಮ ದಿನದ ನಾಟಕ ‘ಪಿಲಿ’ ಪ್ರದರ್ಶನಗೊಂಡಿತು.