ತುಳು ಶಿವಳ್ಳಿ ಸಭಾ ಬೆಳ್ತಂಗಡಿ ತಾಲೂಕು ಸರ್ವ ಘಟಕ ಪದಾಧಿಕಾರಿಗಳ ಸಾಮಾನ್ಯ ಸಭೆ

KannadaprabhaNewsNetwork |  
Published : Jul 10, 2025, 01:45 AM IST
ಶಿವಳ್ಳಿ | Kannada Prabha

ಸಾರಾಂಶ

ತುಳು ಶಿವಳ್ಳಿ ಸಭಾ ಬೆಳ್ತಂಗಡಿ ತಾಲೂಕು ಸರ್ವ ಘಟಕಗಳ ಪದಾಧಿಕಾರಿಗಳ ಸಾಮಾನ್ಯ ಸಭೆ ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿತುಳು ಶಿವಳ್ಳಿ ಸಭಾ ಬೆಳ್ತಂಗಡಿ ತಾಲೂಕು ಸರ್ವ ಘಟಕಗಳ ಪದಾಧಿಕಾರಿಗಳ ಸಾಮಾನ್ಯ ಸಭೆ ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಇತ್ತೀಚೆಗೆ ನಡೆಯಿತು. ಅಧ್ಯಕ್ಷ ರಾಜಪ್ರಸಾದ್ ಪೊಲ್ನಾಯ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಶಿವಳ್ಳಿ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಡಾ.ಎಂ.ಎಂ.ದಯಾಕರ್, ಉಪಾಧ್ಯಕ್ಷರಾದ ಗಿರೀಶ್ ಕುದ್ರೆನ್ತಾಯ, ಅಶೋಕ್ರ ಕುಮಾರ್ ಭಾಂಗಿಣ್ಣಾಯ, ಕೋಶಾಧಿಕಾರಿ ಭಾಸ್ಕರ ರಾವ್, ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಜಯಾ ಅನಂತಕೃಷ್ಣ ಆರ್ಮುಡತ್ತಾಯ, ಕಾರ್ಯದರ್ಶಿ ಅಕ್ಷತಾ ಹೆಬ್ಬಾರ್ ಉಪಸ್ಥಿತರಿದ್ದರು.

ತಾಲೂಕಿನ 9 ವಲಯಗಳ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಭಾಗವಹಿಸಿದ ಸಭೆಯಲ್ಲಿ ನಿರ್ಣಯಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ.ತಾಲೂಕು ಮಟ್ಟದಲ್ಲಿ ವರ್ಷಕ್ಕೆ ಮೂರು ಕಾರ್ಯಕ್ರಮಗಳಾದ ಪ್ರತಿಭಾ ಪುರಸ್ಕಾರ, ಮಹಾಸಭೆ- ವಾರ್ಷಿಕೋತ್ಸವ, ವಸಂತ ವೇದ ಪಾಠ ಶಿಬಿರ ನಡೆಸುವುದು, ಈ ವರ್ಷದ ಪ್ರತಿಭಾ ಪುರಸ್ಕಾರವನ್ನು 2025 ಆ.24 ರಂದು ಹರಿಹರಾನುಗ್ರಹ ಸಭಾಭವನದಲ್ಲಿ ನಡೆಸಲು ತೀರ್ಮಾನಿಸಲಾಯಿತು.ಪ್ರತಿಭಾ ಪುರಸ್ಕಾರಕ್ಕೆ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು, ಪದವಿ ತರಗತಿಗಳಲ್ಲಿ ಶೇ.75, ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣತೆ, ಕಲಾ ಪ್ರಕಾರಗಳಲ್ಲಿ ಉತ್ತೀರ್ಣತೆ, ಸುಧಾ ಮಂಗಳ ಇತ್ಯಾದಿ ವೇದಾಧ್ಯಯನ ಸಂಪೂರ್ಣಗೊಳಿಸಿದವರು. ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲು ನಿರ್ಣಯಿಸಲಾಯಿತು.

ತಾಲೂಕಿನ 9 ವಲಯದ ಪ್ರತಿಭಾವಂತ ಸಾಧಕರು ತಮ್ಮ ಅಂಕಪಟ್ಟಿಯ ಯಥಾ ಪ್ರತಿಯೊಂದಿಗೆ ತಂದೆ ತಾಯಿ ಹೆಸರು,ಮನೆಯ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಕಲಿತ ವಿದ್ಯಾಸಂಸ್ಥೆಯ ಹೆಸರನ್ನು ಆ.10 ರೊಳಗೆ ಕಳಿಸಬೇಕು ಎಂದು ಸೂಚಿಸಲು ತೀರ್ಮಾನಿಸಲಾಯಿತು.

ಹರಿಹರಾನುಗ್ರಹ ಸಭಾಭವನದ ಸಾಲ ಮರುಪಾವತಿಗಾಗಿ ಸಂಚಯನ ವಿಶೇಷ ಯೋಜನೆ ಪ್ರಾರಂಭಗೊಳಿಸಲಿದ್ದು ಎಲ್ಲ ಸದಸ್ಯರ ಪೂರ್ಣ ಸಹಕಾರ ನಿರೀಕ್ಷಿಸಲು ನಿರ್ಧರಿಸಲಾಯಿತು. ಕಾರ್ಯದರ್ಶಿ ಮುರಳಿಕೃಷ್ಣ ಆಚಾರ್ ನಿರ್ವಹಿಸಿದರು. ರಾಘವೇಂದ್ರ ಬಾಂಗಿಣ್ಣಾಯರಿಂದ ದೇವತಾ ಪ್ರಾರ್ಥನೆ, ಅಶೋಕ್ ಕುಮಾರ್ ಬಾಂಗಿಣ್ಣಾಯರಿಂದ ಸ್ವಾಗತ, ಗಿರೀಶ್ ಕುದ್ರೆಂತ್ತಾಯರಿಂದ ಧನ್ಯವಾದ ಸಮರ್ಪಣೆಯೊಂದಿಗೆ ಸಮಾಲೋಚನಾ ಸಭೆ ಸಮಾಪನಗೊಂಡಿತು.

PREV

Latest Stories

ಭೂಮಿ ಉಳುವಿಗಾಗಿ ರಸಗೊಬ್ಬರ ಬಳಸಬೇಡಿ
ಬಿ-ಖಾತಾಗಳಿಗೆ ಎ-ಖಾತಾ ಕಾನೂನು ಮಾನ್ಯತೆ ಭಾಗ್ಯ : ಬಿಬಿಎಂಪಿ ನೀಡಿರುವ ಎಲ್ಲ ಬಿ ಖಾತೆಗಳಿಗೆ ಅನ್ವಯ
ವಿವಿಧ ಬೇಡಿಕೆ ಈಡೇರಿಕೆಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ