28, 29 ರಂದು ಸತ್ಯವನ್ನೇ ಹೇಳುತ್ತೇನೆ ನಾಟಕ

KannadaprabhaNewsNetwork |  
Published : Nov 27, 2024, 01:03 AM IST
ಸುದ್ದಿಗೋಷ್ಠಿಯಲ್ಲಿ ಅಡ್ಡಂಡ ಕಾರ್ಯಪ್ಪ | Kannada Prabha

ಸಾರಾಂಶ

ರಂಗಭೂಮಿ ಟ್ರಸ್ಟ್ ಕೊಡಗು ವತಿಯಿಂದ ನವೆಂಬರ್ 28 ಮತ್ತು 29 ರಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕದ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ನಾಟಕದ ಪ್ರವೇಶಕ್ಕೆ 200 ರೂ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುರಂಗಭೂಮಿ ಟ್ರಸ್ಟ್ ಕೊಡಗು ವತಿಯಿಂದ ನವೆಂಬರ್ 28 ಮತ್ತು 29 ರಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕದ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ನಾಟಕದ ಪ್ರವೇಶಕ್ಕೆ 200 ರೂ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ರಂಗಾಯಣದ ನಿಕಟಪೂರ್ವ ನಿರ್ದೇಶಕರಾಗಿರುವ ಅಡ್ಡಂಡ ಕಾರ್ಯಪ್ಪ ಅವರ ನಿರ್ದೇಶನದಲ್ಲಿ ಚರಿತ್ರೆಯ ಕುರಿತ ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕ ಎರಡು ದಿನಗಳ ಕಾಲ ಪ್ರದರ್ಶನಗೊಳ್ಳಲಿದ್ದು,ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸುವಂತೆ ಮನವಿ ಮಾಡಿದರು.ರಂಗಭೂಮಿ ಟ್ರಸ್ಟ್ ಕೊಡಗುನ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ ಈ ಬಾರಿಯ ರೆಪಟರಿಯಲ್ಲಿ ಸುಮಾರು 49 ವಿವಿಧ ಚಾರಿತ್ರಿಕ ಪುಸಕ್ತಗಳನ್ನು ಅಧ್ಯಯನ ಮಾಡಿ, ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕವನ್ನು ರಚಿಸಿ, ರಂಗವಿನ್ಯಾಸಕ್ಕೆ ಅಳವಡಿಸಿ, ನಿರ್ದೇಶನ ಮಾಡಿದ್ದು, ನಾನು ಕೂಡ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಚರಿತ್ರೆಯಲ್ಲಿ ಆಗಿರುವ ತಪ್ಪುಗಳನ್ನು, ಚಾರಿತ್ರಿಕ ವ್ಯಕ್ತಿಗಳಿಂದಲೇ ಹೊರಗೆ ತರುವ ನಾಟಕ ಇದಾಗಿದೆ ಎಂದರು.ಸತ್ಯವನ್ನೇ ಹೇಳುತ್ತೇನೆ ನಾಟಕದಲ್ಲಿ ಸುಮಾರು 6 ಪಾತ್ರಗಳು ಬರುತ್ತೇವೆ. ಮಹಾತ್ಮಗಾಂಧಿ, ನೆಹರು, ಸರದಾರ ವಲ್ಲಭಾಯಿ ಪಟೇಲ್, ಸುಭಾಷ್ ಚಂದ್ರಬೋಸ್, ವೀರಸಾರ್ವಕರ್ ಹಾಗೂ ಅಂಬೇಡ್ಕರ್ ಅವರನ್ನು ಒಳಗೊಂಡ ಒಂದು ನ್ಯಾಯಾಲಯದ ಸನ್ನಿವೇಶಗಳನ್ನು ಸೃಷ್ಟಿಸಿ, ಸಾಕ್ಷಿದಾರರಾದ ಮೇಲಿನ ಎಲ್ಲರಿಗೂ ಸಮನ್ಸ್ ಜಾರಿ ಮಾಡಿ, ಮುಚ್ಚಿಟ್ಟ, ಬಚ್ಚಿಟ್ಟ ಸತ್ಯವನ್ನು ಅವರ ಬಾಯಿಂದಲೇ ಹೇಳಿಸುವ ಪ್ರಕ್ರಿಯೆ ಇದಾಗಿದೆ. ನಾನೊಬ್ಬ ದೇಶಪ್ರೇಮಿ ನಾಟಕ ನಿರ್ದೇಶಕನಾಗಿದ್ದು, ಮನರಂಜನೆಗಾಗಿ ನಾನು ನಾಟಕಗಳನ್ನು ರಚಿಸುವುದಿಲ್ಲ ಎಂದು ಅಡ್ಡಂಡ ಕಾರ್ಯಪ್ಪ ನುಡಿದರು.ಸುಮಾರು 3 ಗಂಟೆಗಳ ಸತ್ಯವನ್ನೇ ಹೇಳುತ್ತೇನೆ ನಾಟಕದಲ್ಲಿ 10 ನಿಮಿಷಗಳ ಮಧ್ಯಂತರ ಬಿಡುವು ಇದೆ.ಸತತ ಮೂರು ತಿಂಗಳ ಕಾಲ ಕಲಾವಿದರು ಅಭ್ಯಾಸ ಮಾಡಿ ಈ ನಾಟಕವನ್ನು ಪ್ರದರ್ಶಿಸುತಿದ್ದು,ಪ್ರದರ್ಶನ ಪ್ರವೇಶಕ್ಕೆ 200 ರೂ ಪ್ರವೇಶ ಶುಲ್ಕ ನಿಗಧಿ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಂದೀಪಗೌಡ, ಭೈರಣ್ಣ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ