ತುಮಕೂರು ಕಲಾವಿದರ ಚೈತನ್ಯ ಭೂಮಿ

KannadaprabhaNewsNetwork |  
Published : Apr 28, 2026, 01:15 AM IST
0 | Kannada Prabha

ಸಾರಾಂಶ

ತುಮಕೂರು ಜಿಲ್ಲೆ ತನ್ನ ಒಡಲಲ್ಲಿ ಸಾಹಿತ್ಯ, ಹೋರಾಟ, ಸಾಂಸ್ಕೃತಿಕ, ಸಂಗೀತ, ಕಲೆ, ಹೋರಾಟ, ರಂಗಭೂಮಿ ಎಲ್ಲವನ್ನು ಅರಗಿಸಿಕೊಂಡಿರುವ ಚೈತನ್ಯ ಭೂಮಿ ಎಂದು ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಬಿ.ರಮೇಶ್ ಅಭಿಪ್ರಾಯಪಟ್ಟಿದ್ದಾರೆ

ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ಜಿಲ್ಲೆ ತನ್ನ ಒಡಲಲ್ಲಿ ಸಾಹಿತ್ಯ, ಹೋರಾಟ, ಸಾಂಸ್ಕೃತಿಕ, ಸಂಗೀತ, ಕಲೆ, ಹೋರಾಟ, ರಂಗಭೂಮಿ ಎಲ್ಲವನ್ನು ಅರಗಿಸಿಕೊಂಡಿರುವ ಚೈತನ್ಯ ಭೂಮಿ ಎಂದು ಬೆಂಗಳೂರು ನಗರ ವಿವಿ ಕುಲಪತಿ ಪ್ರೊ.ಬಿ.ರಮೇಶ್ ಅಭಿಪ್ರಾಯಪಟ್ಟಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಅಮರಜ್ಯೋತಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಡಾ.ರಾಜರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಾಟಕ ರತ್ನ ಗುಬ್ಬಿ ವೀರಣ್ಣ ಅವರಿಂದ ಇಂದಿನವರೆಗೂ ವರ್ಷದ 365 ದಿನಗಳಲ್ಲಿ ಕನಿಷ್ಠ 250 ದಿನಗಳಾದರೂ ನಾಟಕ, ಸಂಗೀತ,ಸಾಹಿತ್ಯ, ವಿಚಾರಗೋಷ್ಠಿ, ಹೋರಾಟ ಹೀಗೆ ಒಂದಿಲೊಂದು ಜೀವತತ್ಪರ ಕೆಲಸಗಳು ಆಗುವುದನ್ನು ಕಳೆದ 12 ವರ್ಷಗಳಿಂದ ತುಮಕೂರು ವಿವಿಯ ಪ್ರಾಧ್ಯಾಪಕನಾಗಿ ಕಂಡಿದ್ದೇನೆ. ಇದಕ್ಕೆ ಮುಖ್ಯ ಕಾರಣ ಮೊದಲ ತಲೆಮಾರಿನ ಶಿಕ್ಷಣವಂತರೂ ಹಾಕಿಕೊಟ್ಟ ಭದ್ರ ಬುನಾದಿಯಾಗಿದೆ. ಇದನ್ನು ಯುವ ಪೀಳಿಗೆಗೆ ತಲುಪಿಸಿ, ಮತ್ತಷ್ಟು ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾವಂತ ಯುವಜನರು ಪಾಲ್ಗೊಳ್ಳುವಂತೆ ಮಾಡಬೇಕಾಗಿದೆ ಎಂದು ಪ್ರೊ.ಬಿ.ರಮೇಶ್ ತಿಳಿಸಿದರು.ಇಂದಿಗೂ ಕಲಾವಿದರಿಗೆ ಮಾದರಿಯಂತಿರುವ ಡಾ.ರಾಜಕುಮಾರ್ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುವುದು ಕಲಾವಿದನಿಗೆ ಹೆಮ್ಮೆಯ ವಿಷಯ. ಡಾ.ರಾಜ್ ಸರಳತೆ ಮತ್ತು ಬದ್ದತೆಯ ಸಂಕೇತ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಮಾನ್ಯನಾಗಿ ಬೆಳೆದವರು. ಇವರ ಜೀವನ ಚರಿತ್ರೆಯನ್ನು ಯುವಜನರಿಗೆ ಕಥೆಯ ರೂಪದಲ್ಲಿ ಹೇಳುವ ಅಗತ್ಯವಿದೆ. ಅದು ಯುವಜನರ ಸ್ಪೂರ್ತಿಯನ್ನು ಮತ್ತಷ್ಟು ಹಸಿರಾಗಿಸುತ್ತದೆ ಎಂದರು.ಕಲಾಶ್ರೀ ಡಾ.ಲಕ್ಷ್ಮಣದಾಸ್ ಮಾತನಾಡಿ, ಡಾ.ರಾಜ್ ಮಾನವೀಯತೆಯ ಸಕಾರಮೂರ್ತಿ. ಕಳೆದ ೪೫ ವರ್ಷಗಳಿಂದ ಡಾ.ರಾಜ್ ಹಾಡುಗಳನ್ನೇ ಅವರದೇ ಶೈಲಿಯಲ್ಲಿ ಹಾಡುವ ಮೂಲಕ ದಿಬ್ಬೂರು ಮಂಜು ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಡಾ.ರಾಜರತ್ನ ಹೆಸರಿನ ಪ್ರಶಸ್ತಿ ಕಲಾವಿದರಿಗೆ ಸಲ್ಲುತ್ತಿರುವ ಗೌರವದ ಸಂಕೇತವಾಗಿದೆ ಎಂದರು.ಕಾಡು ಮಲ್ಲೇಶ್ವರ ಗೆಳೆಯರು ಬಳಗದ ಅಧ್ಯಕ್ಷ , ಬಿ.ಕೆ.ಶಿವರಾಂ ಮಾತನಾಡಿ, ಕಷ್ಟಗಳನ್ನೇ, ಎರಡು ತೊಡರುಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡು ಯಾರು ಊಹಿಸಲಾಗದ ಎತ್ತರಕ್ಕೆ ಬೆಳೆದವರು ಡಾ.ರಾಜ್, ಸಾಹಿತ್ಯದಲ್ಲಿ ಕುವೆಂಪು ಮೇರು ಪರ್ವತವಾದರೆ, ಕಲೆಯಲ್ಲಿ ಡಾ.ರಾಜ್ ಹಿಮಾಲಯ ಪರ್ವತ. ಡಾ.ಪುನಿತ್ ಸೇವೆಯ ಸಾಗರ. ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದವರು ರಾಜಕುಮಾರ್ ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಡಾ.ರಾಜ್ ಭೋಜನ ಪ್ರಿಯರು, ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಪ್ರಯುಕ್ತ ನಡೆದ ರಸಮಂಜರಿ ಕಾರ್ಯಕ್ರಮಕ್ಕೆ ತುಮಕೂರಿಗೆ ಬಂದಾಗ ತುಮಕೂರಿನ ತಟ್ಟೆ ಇಡ್ಲಿಗೆ ಮಾರು ಹೋಗಿದ್ದರು. ಗೋಕಾಕ್ ಚಳವಳಿಯ ಮೂಲಕ ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು ಎಂದರು. ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ, ಶಾಸಕ ಜಿ.ಬಿ.ಜೋತಿಗಣೇಶ್, ಡಾ.ಬಾಬು ಜಗಜೀವನ್ ರಾಂ ಪ್ರಶಸ್ತಿ ಪುರಸ್ಕೃತ ನರಸೀಯಪ್ಪ ಮಾತನಾಡಿದರು ಮಾತನಾಡಿದರು.

ಇದೇ ವೇಳೆ ಚಲನಚಿತ್ರ ಹಿನ್ನೆಲೆ ಗಾಯಕ ವಿಷ್ಣು ರಾಮನ್ ಮತ್ತು ರಂಗಭೂಮಿ ಕಲಾವಿದ ವಸಂತಕುಮಾರ್ ಭೀಮಸಂದ್ರ ಅವರುಗಳಿಗೆ ಡಾ.ರಾಜ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನುಶಾಂತರಾಜು, ನರಸೀಯಪ್ಪ,ಪ್ರೊ.ಓ.ನಾಗರಾಜು, ಡಾ.ನಾಗಭೂಷಣ್.ಎಚ್, ಟಿ.ವೈ.ಯೋಗಾನಂದಕುಮಾರ್, ವಿದ್ವಾನ್ ಹರಳೂರು ಶಿವಕುಮಾರ್, ಪಾಪಣ್ಣ ಜವೆಗೊಂಡನಹಳ್ಳಿ, ಮನು ಶಿವಕುಮಾರ್ ಹರಳೂರು, ಚಿತ್ರ ಕಲಾವಿದ ಡೇವಿಡ್, ಸಂಗೀತ ಶಿಕ್ಷಕಿ ಶ್ರೀಮತಿ ಸುಧಾರತ್ನ, ಮೃದಂಗ ವಿದ್ವಾನ್ ದೇವರಾಜ್, ತಬಲ ಲೋಕೇಶ್ ಬಾಬು, ರಿದಂ ಪ್ಯಾಡ್ ನಿರಂಜನ್, ಬಿ.ರಾಮಾಂಜನೇಯ ಮರಳೂರು, ಕೆ.ಸಿ.ನರಸಿಂಹಮೂರ್ತಿ ಕೊಪ್ಪ ಅವರುಗಳನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಅಮರ ಜೋತಿ ಸಾಂಸ್ಕೃತಿಕ ಟ್ರಸ್ಟನ ದಿಬ್ಬೂರು ಮಂಜು, ಎಂ.ವಿ.ನಾಗಣ್ಣ, ಸಿದ್ದರಾಜು, ಡಾ.ಕಂಟಲಗೆರೆ ಸಣ್ಣಹೊನ್ನಯ್ಯ,ಶ್ರೀರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ಕೋಟ್್‌......

ಗೋಕಾಕ್ ಚಳವಳಿ ಹಿನ್ನೆಲೆಯಲ್ಲಿ ತುಮಕೂರಿಗೆ ಬಂದಾಗ, ಅವರ ವಾಸ್ತವ್ಯಕ್ಕೆ ಎಲ್ಲಿ ವ್ಯವಸ್ಥೆ ಮಾಡುವುದು ಎಂಬ ವಿಚಾರದಲ್ಲಿ ಬಹಳ ಸರಳತೆ ಮೆರೆದು ಎಸ್.ಆರ್.ಎಸ್ ಟ್ರಾವಲ್ಸ್ ಅವರ ಮನೆಯಲ್ಲಿ ತಂಗಿದ್ದು, ಹೋರಾಟ ಮುಂದುವರೆಸಿದವರು. ಇಂದು ಕಾರ್ಯಕ್ರಮ ನಡೆಯುತ್ತಿರುವ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದ ನಿರ್ಮಾಣಕ್ಕೆ ರಸಮಂಜರಿ ಕಾರ್ಯಕ್ರಮ ನಡೆಸಿ 25 ಲಕ್ಷ ರುಗಳ ದೇಣಿಗೆ ನೀಡಿದ್ದರ ಪರಿಣಾಮ ಇಷ್ಟು ದೊಡ್ಡ ಕಟ್ಟಡ ನಿರ್ಮಾಣವಾಗಲು ಕಾರಣವಾಯಿತು. - ಡಾ.ಎಸ್.ನಾಗಣ್ಣ ಪತ್ರಕರ್ತ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಗಾರಿಕೆಗೆ ಭೂಮಿ: ಅಧಿಕಾರಿಗಳಿಂದ ಸುಳ್ಳು ವರದಿ
ಮಹಿಳಾ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕಶಾಸ್ತಿ