15ರಂದು ಪುಣ್ಯಕೋಟಿ ಮಠದಿಂದ ತುಂಗಾರತಿ ಸಮಾರಂಭ

KannadaprabhaNewsNetwork |  
Published : Feb 13, 2025, 12:47 AM IST
ಎಚ್11-ಆರ್‌ಎನ್‌ಆರ್2 | Kannada Prabha

ಸಾರಾಂಶ

ಪುಣ್ಯಕೋಟಿ ಮಠದ ವತಿಯಿಂದ ತುಂಗಭದ್ರಾ ನದಿ ತೀರದಲ್ಲಿ 6ನೇ ವರ್ಷದ ಐತಿಹಾಸಿಕ ತುಂಗಾರತಿ ಸಮಾರಂಭ ಫೆ. 15ರಂದು ಸಂಜೆ 05ಗಂಟೆಗೆ ಜರುಗಲಿದೆ ಎಂದು ಮಠದ ಪೀಠಾಧಿಪತಿ ಜಗದೀಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ರಾಣಿಬೆನ್ನೂರು: ತಾಲೂಕಿನ ಕೋಡಿಯಾಲ ಹೊಸಪೇಟೆ ಅವಿಮುಕ್ತ ತಪೋಕ್ಷೇತ್ರ ಪುಣ್ಯಕೋಟಿ ಮಠದ ವತಿಯಿಂದ ತುಂಗಭದ್ರಾ ನದಿ ತೀರದಲ್ಲಿ 6ನೇ ವರ್ಷದ ಐತಿಹಾಸಿಕ ತುಂಗಾರತಿ ಸಮಾರಂಭ ಫೆ. 15ರಂದು ಸಂಜೆ 05ಗಂಟೆಗೆ ಜರುಗಲಿದೆ ಎಂದು ಮಠದ ಪೀಠಾಧಿಪತಿ ಜಗದೀಶ್ವರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕೋಡಿಹಾಳ ಹೊಸಪೇಟೆಯ ಪುಣ್ಯಕೋಟಿ ಮಠದ ಸಭಾಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಭಾರತದ ಗಂಗಾನದಿ ತೀರದಲ್ಲಿ ಜರುಗುವ ಗಂಗಾರತಿ ಮಾದರಿಯಲ್ಲಿ ಶ್ರೀಮಠದ ಬಲಭಾಗದಲ್ಲಿ ಪೂರ್ವ ಉತ್ತರಾಭಿಮುಖವಾಗಿ ಹರಿಯುವ ತುಂಗಭದ್ರಾ ನದಿಗೆ ಕೂಡ ತುಂಗಾರತಿ ಪೂಜಾ ಕಾರ್ಯಕ್ರಮ ಮಾಡಲಾಗುವುದು. ಇದೊಂದು ದಕ್ಷಿಣ ಭಾರತದ ವಿಶಿಷ್ಟ ಕಾರ್ಯಕ್ರಮವಾಗಿದೆ ಎಂದರು.

ಶ್ರೀಶೈಲ ಮಹಾಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸವಣೂರು ದೊಡ್ಡಹುಣಸೇಕಲ್ಮಠ ಚನ್ನಬಸವ ಸ್ವಾಮೀಜಿ, ಅಕ್ಕಿಅಲೂರು ಮುತ್ತಿನಕಂತಿಮಠ ಚಂದ್ರಶೇಖರ ಸ್ವಾಮೀಜಿ, ಕಡೆನಂದಿಹಳ್ಳಿ ರೇವಣಸಿದ್ಧೆಶ್ವರ ಪುಣ್ಯಶ್ರಮದ ರೇವಣಸಿದ್ಧ ಸ್ವಾಮೀಜಿ, ನಾಗವಂದ ಧರ್ಮಕ್ಷೇತ್ರ ಶಿವಯೋಗಿ ಶಿವಾನಂದ ಸ್ವಾಮೀಜಿ, ವಿಜಯಪುರ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸುವರು,

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಪ್ರಕಾಶ ಕೋಳಿವಾಡ ವಹಿಸುವರು. ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಎಂ.ಪಿ. ರೇಣಕಾಚಾರ್ಯ, ಶಾಸಕರಾದ ಬಸವರಾಜ ಶಿವಣ್ಣನವರ, ಬಿ.ಪಿ. ಹರೀಶ, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ, ಅರುಣಕುಮಾರ ಪೂಜಾರ, ಸೈಯದ ಅಜ್ಜಂಪೀರ ಖಾದ್ರಿ, ಸೋಮಣ್ಣ ಬೇವಿನಮರದ, ವಿರೂಪಾಕ್ಷಪ್ಪ ಬಳ್ಳಾರಿ, ಆರ್.ಶಂಕರ್, ಎಸ್.ರಾಮಪ್ಪ, ಗುತ್ತಿಗೆದಾರ ಶಂಕರ ಗಡ್ಡದ, ನೀಲಮ್ಮ ಸಣ್ಣಹನುಮಂತಗೌಡ ಪಾಟೀಲ, ಪೂರ್ವವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ, ಕುಮಾರಪಟ್ಟಣಂ ಬೃಹತ್ ಗ್ರಾಸಿಂ ಬಿರ್ಲಾ ಕಂಪನಿ ಅಧ್ಯಕ್ಷ ಸೌಮ್ಯಕಾಂತ್ ಮೊಹಂತಿ, ಹೈಕೋರ್ಟ್ ಹಿರಿಯ ನ್ಯಾಯವಾದಿ ಶಂಕರ ಹೆಗಡೆ, ಡಾ. ಶಶಿಕುಮಾರ ಮೆಹರವಾಡೆ ಅತಿಥಿಗಳಾಗಿ ಆಗಮಿಸುವರು.

ಇದೇ ಸಂದರ್ಭದಲ್ಲಿ ವಿಶ್ವಮಾತೆ ಪುಣ್ಯಕೋಟಿ ಪ್ರಶಸ್ತಿಯನ್ನು ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಆಚಾರ್ಯ ಮಹಾಚಾರ್ಯ ಸೇವಾ ವಿಭೂಷಣ ಪ್ರಶಸ್ತಿಯನ್ನು ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಡಾ. ಶರಣಬಸಪ್ಪ ವಿ. ಹಲಸೆ ನೀಡಲಾಗುವುದು ಎಂದರು.

ಮೈಸೂರು ಪರೀಕ್ಷಾಂಗ ಕುಲಸಚಿವ ಡಾ. ಎಚ್. ವಿಶ್ವನಾಥ ವಿಶೇಷ ಉಪನ್ಯಾಸ ನೀಡುವರು.

ರವೀಂದ್ರಗೌಡ ಪಾಟೀಲ, ನಿತ್ಯಾನಂದ ಕುಂದಪುರ, ಕೋಟ್ರೇಶಪ್ಪ ಎಮ್ಮಿ, ಸಿದ್ಧಾರೂಢ ಗರಂ, ಮಲ್ಲಿಕಾರ್ಜುನ ಸಾವಕ್ಕಳ್ಳನವರ, ಹನುಮಂತಪ್ಪ ಹಳ್ಳಳ್ಳಪ್ಪನವರ, ಕರಿಯಪ್ಪ ಮಾಳಗೇರ, ರಾಮಪ್ಪ ಗೋಣೆಯಪ್ಪನವರ, ಬೀಮಪ್ಪ ಗೋಣೆಯಪ್ಪನವರ, ನಾಗರಾಜ ಹಳ್ಳಳ್ಳಪ್ಪನವರ ಮತ್ತಿತರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ