ವಿಜಯಪುರ: ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುವುದರೊಂದಿಗೆ ಜವಾಬ್ದಾರಿ ಮುಗಿಯುವುದಿಲ್ಲ. ತರಬೇತಿ ನಂತರ ಅವರು ಸ್ವಂತ ಉದ್ಯೋಗ ಆರಂಭಿಸಿ ಆದಾಯಗಳಿಸಲು ಅಗತ್ಯ ಹೊಲಿಗೆಯಂತ್ರವನ್ನು ಒದಗಿಸುವುದು ಮುಖ್ಯ. ಕೌಶಲವನ್ನು ಆದಾಯದ ಮೂಲವನ್ನಾಗಿ ಮಾಡಿಕೊಂಡು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಜೀಯಾ ಅಬೇದಿನ ಪುಣೇಕರ ಹೇಳಿದರು.
ತರಬೇತಿ ಪಡೆದ ಫಲಾನುಭವಿಗಳಾದ ಸುಮಂಗಲ ಹಾಗೂ ಗೌಸಬಿ ಇನಾಮದಾರ ಮಾತನಾಡಿ, ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿ ಆರು ತಿಂಗಳು ಉಚಿತ ಹೊಲಿಗೆ ತರಬೇತಿ ಪಡೆದು, ಇದೀಗ ಉಚಿತ ಹೊಲಿಗೆ ಯಂತ್ರವೂ ದೊರೆತಿದೆ. ಮನೆಯಲ್ಲಿಯೇ ಹೊಲಿಗೆ ಕೆಲಸ ಆರಂಭಿಸಿ ಕುಟುಂಬದ ಆದಾಯಕ್ಕೆ ನೆರವಾಗಲು ಸಾಧ್ಯವಾಗಿದೆ. ಮಹಿಳೆಯರಿಗೆ ಈ ಅವಕಾಶ ಆರಂಭಿಸಿದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿ.ಡಾ.ಎಸ್.ಎ.ಪುಣೇಕರ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಿಕ್ಯಾಬ್ ಎಆರ್‌ಎಸ್ಐ ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಮೇತ್ರಿ, ಹೊಲಿಗೆ ತರಬೇತಿ ಸಂಯೋಜಕಿ ಡಾ.ಹಾಜೀರಾ ಫರ್ವೀನ್, ತರಬೇತಿ ವಿಭಾಗದ ಮುಖ್ಯಸ್ಥೆ ಪ್ರೊ.ಆಜಮಾ ಇನಾಮದಾರ, ಶಾಮಿನ್ ಗೌರಿ, ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರೊ.ವಿದ್ಯಾವತಿ ಬೆನ್ನೂರಮಠ ನಿರೂಪಿಸಿದರು. ಪ್ರೊ.ಶಬೀನಾ ಪಟೇಲ ವಂದಿಸಿದರು.