ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
10ನೇ ತರಗತಿ ಸಿಂಚನ 800 ಮೀಟರ್ ಓಟದಲ್ಲಿ ಮತ್ತು 3 ಸಾವಿರ ಮೀ. ಓಟದಲ್ಲೂ ಪ್ರಥಮ ಸ್ಥಾನಗಳಿಸುವ ಮೂಲಕ ಕ್ರೀಡಾಕೂಟದಲ್ಲಿ ವೈಯುಕ್ತಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ತನುಶ್ರೀ ನೂರು ಮೀ.ನಲ್ಲಿ, ಇನ್ನೂರು ಮೀ.ನಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ. ಅದೇ ರೀತಿಯಲ್ಲಿ, ಕೀರ್ತನ 800 ಮೀ. ತೃತೀಯ ಬಹುಮಾನ, ಹಂಸಿನಿಶ್ರೀ 1500ಮೀ. ಓಟದಲ್ಲಿ ಪ್ರಥಮ, 400 ಮೀ. ತೃತೀಯ ಸ್ಥಾನ, ಸಂಜನಾ 1500 ಮೀ.ದ್ವಿತೀಯ, ಉದ್ದ ಜಿಗಿತದಲ್ಲಿ ಬೀಬೀ ಸೂಫಿಯಾ ತಂಡ ಪ್ರಥಮ ಸ್ಥಾನ, ಬಾಲಕಿಯರ 4x100 ಮೀಟರ್ ಓಟದಲ್ಲಿ ತನುಶ್ರೀ ಎಸ್, ಸಿಂಚನ ಎಸ್, ಸಂಜನಾ ಎಲ್, ನಿರಂಜನ್, ಪ್ರಣೀತ್, ಮಹೇಂದ್ರ ಅಹಮದ್ ಖಾನ್, ಮೊಹಮ್ಮದ್ ರೆಹಾನ್, ನಿರಂಜನ್ ಸೇರಿದಂತೆ ಸಂಸ್ಥೆಯ 20ಕ್ಕೂ ಅಧಿಕ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಖ್ಯ ಶಿಕ್ಷಕಿ ಗೀತಾ, ದೈಹಿಕ ಶಿಕ್ಷಕ ನಾಗೇಂದ್ರ, ಅಧ್ಯಕ್ಷ ಕುಮಾರ ಕೃಷ್ಣ ಇನ್ನಿತರರು ಅಭಿನಂದಿಸಿದ್ದಾರೆ.