ಜಿಂಕೆ ಕೊಂದು ಮಾಂಸ ಪಾಲು ಮಾಡಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳ ಸೆರೆ

KannadaprabhaNewsNetwork |  
Published : Nov 20, 2025, 12:15 AM IST
19ಕೆಜಿಎಲ್ 81ಕೊಳ್ಳೇಗಾಲ ತಾಲೂಕಿನ ಚಾಲನ್ ಬಳಿ ಜಿಂಕೆ ಕೊಂದ ಆರೋಪಿಗಳ ಜೊತೆ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು. | Kannada Prabha

ಸಾರಾಂಶ

ತಾಲೂಕಿನ ದೊಡ್ಡಿಂದುವಾಡಿ ಅರಣ್ಯ ಪ್ರದೇಶದಲ್ಲಿ ಕಬಿನಿ ಚಾನೆಲ್ ಬಳಿ ಜಿಂಕೆ ಕೊಂದು ತುಂಡು ಮಾಡಿ ಪಾಲು ಮಾಡಿಕೊಳ್ಳುತ್ತಿದ್ದ ವಿಚಾರ ತಿಳಿಯುತ್ತಿದ್ದಂತೆ ಎಸ್ಪಿ ಸುದಶ೯ನ್ ಮಾಗ೯ದಶ೯ನದೊಂದಿಗೆ ಪಿಎಸೈ ವಿಜಯರಾಜ್, ಮುಖ್ಯ ಪೇದೆಗಳಾದ ರಾಮಚಂದ್ರ, ಸ್ವಾಮಿ, ಬಸವರಾಜು, ಜಮೀಲ್, ಪ್ರಭಾಕರ್, ಲತಾ ಇನ್ನಿತರರು ದಾಳಿ ನಡೆಸಿದರು.

ಕೊಳ್ಳೇಗಾಲ: ವನ್ಯಜೀವಿ ಜಿಂಕೆ ಕೊಂದು ಮಾಂಸ ಪಾಲು ಮಾಡಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹದೇವ ಬಿನ್ ಲೇಟ್ ಪುಟ್ಟ ನಾಯಕ (25), ಕಿರಣ್ ಬಿನ್ ಸಿದ್ದ ಶೆಟ್ಟಿ (30) ಬಂಧಿತ ಆರೋಪಿಗಳು. ತಾಲೂಕಿನ ದೊಡ್ಡಿಂದುವಾಡಿ ಅರಣ್ಯ ಪ್ರದೇಶದಲ್ಲಿ ಕಬಿನಿ ಚಾನೆಲ್ ಬಳಿ ಜಿಂಕೆ ಕೊಂದು ತುಂಡು ಮಾಡಿ ಪಾಲು ಮಾಡಿಕೊಳ್ಳುತ್ತಿದ್ದ ವಿಚಾರ ತಿಳಿಯುತ್ತಿದ್ದಂತೆ ಎಸ್ಪಿ ಸುದಶ೯ನ್ ಮಾಗ೯ದಶ೯ನದೊಂದಿಗೆ ಪಿಎಸೈ ವಿಜಯರಾಜ್, ಮುಖ್ಯ ಪೇದೆಗಳಾದ ರಾಮಚಂದ್ರ, ಸ್ವಾಮಿ, ಬಸವರಾಜು, ಜಮೀಲ್, ಪ್ರಭಾಕರ್, ಲತಾ ಇನ್ನಿತರರು ದಾಳಿ ನಡೆಸಿದರು. ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಸುತ್ತುವರಿದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 43 ಕೆಜಿ ಜಿಂಕೆ ಮಾಂಸ, ಜಿಂಕೆಯ 5 ಕಾಲು, ಒಂದ ತಲೆ, ಜಿಂಕೆ ಕತ್ತರಿಸಲು ಬಳಸಲಾಗಿದ್ದ 4 ಚಾಕು, ಒಂದು ಮಚ್ಚು, ಮೂರು ಮೋಟಾರ್ ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ