ಪ್ರತ್ಯೇಕ ಕಳವು ಪ್ರಕರಣದಡಿ ಇಬ್ಬರ ಬಂಧನ: ನ್ಯಾಮತಿ ಪಿಐ ಸಿದ್ದೇಗೌಡ್ರು

KannadaprabhaNewsNetwork |  
Published : Oct 29, 2026, 01:15 AM IST
೨೭ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಸ್ನೇಹಾ ಶಾನುವಳ್ಳಿ ಅವರನ್ನು ಸನ್ಮಾನಿಸಲಾಯಿತು. ಎಂ.ಎಸ್.ಚನ್ನಕೇಶವ್, ಚಂದ್ರಮ್ಮ, ಎಂ.ಜೆ.ಮಹೇಶ್, ಶಬನಾ ಅಂಜುಮ್, ಮನುಕುಮಾರ್, ಮಹಮ್ಮದ್ ಹನೀಫ್ ಇದ್ದರು. | Kannada Prabha

ಸಾರಾಂಶ

ಎರಡು ಪ್ರತ್ಯೇಕ ಕಳವು ಪ್ರಕರಣಗಳ ತನಿಖೆ ನಡೆಸಿ, ರಾಹುಲ್‌ ಕೆ.ಎಸ್‌., ಡ್ರೈವರ್‌ ರಾಹುಲ್‌ ಎಂಬಿಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನ್ಯಾಮತಿ ಠಾಣೆಯ ಪಿಐ ಎಚ್‌.ಎಂ.ಸಿದ್ದೇಗೌಡ್ರು ತಿಳಿಸಿದ್ದಾರೆ.

- ಟಗರು, ವಸ್ತುಗಳ ಕದ್ದಿದ್ದ ರಾಹುಲ್‌ ಕೆ.ಎಸ್‌., ಡ್ರೈವರ್‌ ರಾಹುಲ್‌

- - -

ನ್ಯಾಮತಿ: ಎರಡು ಪ್ರತ್ಯೇಕ ಕಳವು ಪ್ರಕರಣಗಳ ತನಿಖೆ ನಡೆಸಿ, ರಾಹುಲ್‌ ಕೆ.ಎಸ್‌., ಡ್ರೈವರ್‌ ರಾಹುಲ್‌ ಎಂಬಿಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನ್ಯಾಮತಿ ಠಾಣೆಯ ಪಿಐ ಎಚ್‌.ಎಂ.ಸಿದ್ದೇಗೌಡ್ರು ತಿಳಿಸಿದ್ದಾರೆ.

ತಾಲೂಕಿನ ಸೋಗಿಲು ಗ್ರಾಮದ ವಾಸಿ ರವಿನಾಯ್ಕ ಅವರ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ 25 ಸಾವಿರ ಬೆಲೆ ಬಾಳುವ ಟಗರು (ಕುರಿ) ಸೆ.28ರ ರಾತ್ರಿ ಕಳವು ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು. ನ್ಯಾಮತಿ ಪಟ್ಟಣದ ನಿವಾಸಿ ಚಂದ್ರಪ್ಪ ಎಂಬುವರ ಗಂಜೀನಹಳ್ಳಿಯ ಅಡಕೆ ತೋಟದ ಮನೆಯಲ್ಲಿ ಅ.12ರ ರಾತ್ರಿ ಗ್ಯಾಸ್‌ ಸಿಲಿಂಡರ್‌, 2 ಗ್ಯಾಸ್‌ ಒಲೆ, 250 ಮೀ. ಕೇಬಲ್‌ ವೈರ್‌, 30 ಸ್ಟೀಲ್‌ ತಟ್ಟೆಗಳು, 1 ಬಂಡಲ್‌ ಬೇಲಿ ಹಾಕುವ ಮುಳ್ಳಿನ ತಂತಿಗಳು ಕಳವಾಗಿರುವ ಬಗ್ಗೆ ದೂರು ದಾಖಲಿಸಿದ್ದರು.

ಸದರಿ ದೂರುಗಳ ಮೇರೆಗೆ ಜಿಲ್ಲಾ ಪೊಲೀಸ್‌ ಅಧೀಕ್ಷಕರು, ಚನ್ನಗಿರಿಯ ಪೊಲೀಸ್‌ ಉಪಾಧೀಕ್ಷಕರ ಮಾರ್ಗದರ್ಶನದಂತೆ ನ್ಯಾಮತಿ ಠಾಣೆಯ ನಿರೀಕ್ಷಕ ಸಿದ್ದೇಗೌಡ್ರು ನೇತೃತ್ವದಲ್ಲಿ ತನಿಖಾಧಿಕಾರಿ ಹೊಳೆಬಸಪ್ಪ, ಸಿಬ್ಬಂದಿ ಶಿವರಾಜ್‌, ಮಂಜಪ್ಪ, ಚಂದ್ರಶೇಖರ್‌ ಅವರ ತಂಡ ತನಿಖೆ ಕೈಗೊಂಡ್ಡಿತ್ತು.

ತನಿಖೆ ವೇಳೆ ಕೂಗನಹಳ್ಳಿ ತಾಂಡದ ಕೂಲಿ ಕಾರ್ಮಿಕ ರಾಹುಲ್‌ ಕೆ.ಎಸ್‌. ಅಲಿಯಾಸ್‌ ಚಕ್ಲಿ ಎಂಬವನನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗಿತ್ತು. ಆಗ ಟಗುರು ಕದ್ದು ಮಾರಾಟ ಮಾಡಿದ್ದ ₹15 ಸಾವಿರ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಕೂಗನಹಳ್ಳಿ ತಾಂಡದ ದೇವರಾಜ್‌ ನಾಯ್ಕ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದರು.

ಇನ್ನೊಂದು ಪ್ರಕರಣದಲ್ಲಿ ಕೂಗನಹಳ್ಳಿ ತಾಂಡದ ಡ್ರೈವರ್‌ ರಾಹುಲ್‌ ಅಲಿಯಾಸ್‌ ತಿಪ್ಪೇಶ ಎಂಬುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆಗ ಆರೋಪಿ ರಾಹುಲ್‌ ಅಡಕೆ ತೋಟದ ಮನೆಯಿಂದ 1 ಗ್ಯಾಸ್‌ ಸಿಲಿಂಡರ್‌, 2 ಗ್ಯಾಸ್‌ ಒಲೆಗಳು, 250 ಮೀ. ಕೇಬಲ್‌ ವೈರ್‌, 30 ಸ್ಟೀಲ್‌ ಊಟದ ತಟ್ಟೆಗಳು, ಒಂದು ಬಂಡಲ್‌ ಮುಳ್ಳಿನ ತಂತಿ ಕದ್ದಿದ್ದಾಗಿ ತಿಳಿಸಿದ್ದು, ಒಟ್ಟು ₹17000 ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಕೂಗನಹಳ್ಳಿ ತಾಂಡದ ಸಂತೋಷ್‌ ನಾಯ್ಕ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದರು.

ಎರಡು ಕಳವು ಪ್ರಕರಣಗಳ ಆರೋಪಿಗಳ ಪತ್ತೆ ಹಚ್ಚಿದ ನ್ಯಾಮತಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಜಿಲ್ಲಾ ಪೊಲೀಸ್‌ ಅಧೀಕ್ಷಕರು, ಚನ್ನಗಿರಿ ಪೊಲೀಸ್‌ ಉಪಾಧೀಕ್ಷಕರು ಪ್ರಶಂಸಿಸಿದ್ದಾರೆ.

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್
ಕಸ ವಿಲೇ ವಿಚಾರಕ್ಕೆ ಹಲ್ಲೆ: ಕೇಸ್‌ ರದ್ದತಿಗೆ ಹೈಕೋರ್ಟ್ ನಿರಾಕರಣೆ