ಮುಳಬಾಗಿಲು:ತಾಲೂಕಿನ ನಂಗಲಿ- ಕೋಲಾರ ತಾಲೂಕಿನ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೀಗಂಧ ಕಳವು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ 10 ಲಕ್ಷ ಮೌಲ್ಯದ 105 ಕೆಜಿ ಶ್ರೀಗಂಧ ಮರದ ತುಂಡುಗಳು ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದೆ ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದ್ದಾರೆ.ಮುಳಬಾಗಿಲು ಗ್ರಾಮಾಂತರ ಠಾಣಾ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಂಧ್ರಪ್ರದೇಶದ ವಿಕೋಟೆ ಸಮೀಪದ ತೋಟಕನಂ ಅರುಣ್(25), ಸುಬ್ರಮಣಿ (28) ಇಬ್ಬರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರುಶ್ರೀನಿವಾಸಪುರ ತಾಲೂಕಿನ ರಾಯಲ್ ಪಾಡು ಸರಹತ್ತಿನಲ್ಲಿ ಸುಮಾರು 70 ಲಕ್ಷದ 10 ಟ್ರ್ಯಾಕ್ಟರ್‌ಗಳನ್ನು ಮುಳಬಾಗಿಲು ತಾಲೂಕಿನ ಮಂಡಿಕಲ್ಲು ಪುರುಷೋತ್ತಮ್ ರೆಡ್ಡಿ ಆರೋಪಿ ರೈತರ ಬಳಿ ಬಾಡಿಗೆ ಕೊಡುತ್ತೇನೆ ಎಂದು ನಂಬಿಸಿ ಟ್ರ್ಯಾಕ್ಟರ್‌ಗಳನ್ನು ಆಂಧ್ರಪ್ರದೇಶದ ಕಡೆ ಮಾರಾಟ ಮಾಡಿ ವಂಚನೆ ಮಾಡಿದ್ದು ಆರೋಪಿ ಸಮೇತ ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದೆ ಎಂದು ಹೇಳಿದರು.ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 35 ಗ್ರಾಂ ಬಂಗಾರ ಒಡವೆಗಳು ಕಳುವಾಗಿತ್ತು ಮತ್ತೊಂದು ಪ್ರಕರಣದಲ್ಲಿ 98 ಗ್ರಾಂ ಬಂಗಾರದ ಒಡವೆಗಳು ಕಳವು ಮಾಡಲಾಗಿತ್ತು ಎರಡು ಪ್ರಕರಣಗಳಲ್ಲಿ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.