ಗಂಗಾವತಿ: ಮಂಗಳವಾರ ರಾತ್ರಿ ಸಿಡಿಲು ಬಡಿದು ಎರಡು ಆಕಳು ಸಾವನ್ನಪ್ಪಿ, ಎರಡು ಆಕಳು ಗಾಯಗೊಂಡ ಘಟನೆ ತಾಲೂಕಿನ ದಾಸನಾಳ ಗ್ರಾಮದಲ್ಲಿ ನಡೆದಿದೆ.ದಾಸನಾಳ ಗ್ರಾಮದ ಶಿವಕುಮಾರ ರಾಚನಗೌಡರ್ ಅವರ ಹೊಲದಲ್ಲಿ ತಂಗಿದ್ದ ಕನಕಗಿರಿಯ ಕೊಮಾರೆಪ್ಪ ಎನ್ನುವರಿಗೆ ಸೇರಿದ ಎರಡು ಆಕಳು ಸಿಡಿಲು ಬಡಿದು ಸಾವನಪ್ಪಿವೆ. ಇನ್ನೂ ಎರಡು ಆಕಳು ತೀವ್ರವಾಗಿ ಗಾಯಗೊಂಡಿವೆ.ಗಂಗಾವತಿ ಪಶುಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿ, ಸಿಡಿಲು ಮಿಂಚು, ಗುಡುಗಿನ ಆರ್ಭಟಕ್ಕೆ ಜನರು ತತ್ತರಿಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿ ಮಹೇಶ ದಲಾಲ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.ಆಕಳು ಕಳೆದುಕೊಂಡ ಕೊಮಾರೆಪ್ಪ ಅವರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಗ್ರಾಮದ ದೇವಾನಂದ ಒತ್ತಾಯಿಸಿದ್ದಾರೆ.