ಇಬ್ಬರು ಸರಗಳ್ಳರ ಬಂಧನ: ಕದ್ದ ಚಿನ್ನಾಭರಣ ವಶ

KannadaprabhaNewsNetwork |  
Published : Feb 11, 2026, 02:00 AM IST
ಅಂತರರಾಜ್ಯ ಸರ ಕಳ್ಳರನ್ನು ಬಂದಿಸಿರುವ ಗೌರಿಬಿದನೂರು ಪೊಲೀಸರು | Kannada Prabha

ಸಾರಾಂಶ

ಜ. 27ರಂದು ಮಾದನಹಳ್ಳಿ ಲಕ್ಷ್ಮಮ್ಮ (70) ಎಂಬುವವರು 22 ಗ್ರಾಂ ಮಾಂಗಲ್ಯಸರ, ಲಕ್ಷ್ಮೀ ಬೊಟ್ಟು, ಚೈನ್ ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಿಸಿದರು.

ಗೌರಿಬಿದನೂರು: ನಗರದ ಮಾದನಹಳ್ಳಿಯಲ್ಲಿ ಜ. 27ರಂದು ನಡೆದಿದ್ದ ಸರಗಳ್ಳತನ ಪ್ರಕರಣ ಸಂಬಂಧ ಇಬ್ಬರು ಸರಗಳ್ಳರನ್ನು ಬಂಧಿಸಿ ಅವರಿಂದ ಚಿನ್ನಾಭರಣ, ಬೈಕ್ ವಶಪಡಿಸಿಕೊಳ್ಳಲಾಗಿದೆ.

ಆಂಧ್ರ ಮೂಲದ ಎಸ್.ಕೆ. ಕೃಪಾರಾವ್, ಮಲ್ಲೇಲ ಕೊಂಡಾರೆಡ್ಡಿ ಬಂಧಿತರು. 65 ಗ್ರಾಂ ಬಂಗಾರದ ಮಾಂಗಲ್ಯ ಸರಗಳು, 2 ಬೈಕ್‌ಗಳನ್ನು ಸೋಮವಾರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜ. 27ರಂದು ಮಾದನಹಳ್ಳಿ ಲಕ್ಷ್ಮಮ್ಮ (70) ಎಂಬುವವರು 22 ಗ್ರಾಂ ಮಾಂಗಲ್ಯಸರ, ಲಕ್ಷ್ಮೀ ಬೊಟ್ಟು, ಚೈನ್ ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಿಸಿದರು. ದೂರಿನ ಮೇರೆಗೆ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸರಗಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಕೃಪಾರಾವ್‌ ವಿರುದ್ಧ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಸರಕಳ್ಳತನ, ಮಲ್ಲೇಲ ಕೊಂಡಾರೆಡ್ಡಿ ವಿರುದ್ಧ 30ಕ್ಕೂ ಹೆಚ್ಚು ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಎಸ್‌.ಪಿ. ಕುಶಾಲ ಚೌಕ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀಜಗನ್ನಾಥ್ ರೈ, ಡಿವೈಎಸ್‌ಪಿ ಆರ್.ಪ್ರಕಾಶ್ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಆರೋಪಿಗಳನ್ನು ಬಂಧಿಸಿದ್ದಾರೆ. ಗೌರಿಬಿದನೂರು ನಗರದ ಮಾದನಹಳ್ಳಿಯಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸರಗಳ್ಳರನ್ನು ಬಂಧಿಸಿರುವುದು. ವೃತ್ತದ ಸಿಪಿಐ ವಿ.ಅಂಜನ್ ಕುಮಾ‌ರ್, ನಗರ ಠಾಣೆಯ ಪಿಎಸ್‌ಐ ಗೋಪಾಲ, ಲಲಿತಮ್ಮ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗರ್ಭಕಂಠ ಕ್ಯಾನ್ಸರ್ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸಿ: ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ
ಮಹನೀಯರ ಜಯಂತಿಗೆ ದೇಣಿಗೆ ನೀಡುವೆ ಎಂದು ಶಿವಲಿಂಗೇಗೌಡ