ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು

KannadaprabhaNewsNetwork |  
Published : Jun 16, 2025, 12:53 AM IST

ಸಾರಾಂಶ

ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ತುಮಕೂರು ಕಡೆಯಿಂದ ಬಂದ ಅಪರಿಚಿತ ಕಾರು ಡಿಕ್ಕಿ ಹೊಡೆದಿದೆ.

ದಾಬಸ್‍ಪೇಟೆ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ 48ರ ಟಿ.ಬೇಗೂರು ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತ್ಯಾಮಗೊಂಡ್ಲು ನಿವಾಸಿ ಅಂಜನ್‍ಕುಮಾರ್ (20) ಮೃತ. ಈತ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ತುಮಕೂರು ಕಡೆಯಿಂದ ಬಂದ ಅಪರಿಚಿತ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಅಂಜನ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮತ್ತೊಂದು ಘಟನೆಯಲ್ಲಿ ಎರಡು ಬೈಕ್ ನಡುವೆ ಸಂಭವಿಸಿದ್ದ ಬೈಕ್ ಹಿಂಬದಿ ಸವಾರ ಮೃತಪಟ್ಟಿದ್ದು, ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾ.ಹೆದ್ದಾರಿ 48ರ ಬೂದಿಹಾಲ್ ಗೇಟ್ ಬಳಿ ನಡೆದಿದೆ. ನೆಲಮಂಗಲ ನಗರದ ಚನ್ನಪ್ಪ ಕಲ್ಯಾಣಿ ನಿವಾಸಿ ಪ್ರಸಾದ್‍ಕುಮಾರ್ (48) ಮೃತಪಟ್ಟಿದ್ದು, ಬೈಕ್ ಸವಾರ ಚಂದ್ರಶೇಖರ್ ಗಾಯಗೊಂಡಿದ್ದಾನೆ.

ಈತ ನೆಲಮಂಗಲ ನಗರಸಭೆಯಲ್ಲಿ ನೀರಗಂಟಿಯಾಗಿ ಕೆಲಸ ಮಾಡುತ್ತಿದ್ದ ಪ್ರಸಾದ್ ಕುಮಾರ್ ಕೆಲಸ ತೊರೆದು ಕೂಲಿ ಕೆಲಸ ಮಾಡುತ್ತಿದ್ದನು. ಈತ ಕೆಲಸ ನಿಮಿತ್ತ ಸ್ನೇಹಿತ ಚಂದ್ರಶೇಖರ್ ಜತೆ ದಾಬಸ್‍ಪೇಟೆಗೆ ತೆರಳಿ ನೆಲಮಂಗಲಕ್ಕೆ ವಾಪಾಸ್ ಹಾಗುತ್ತಿದ್ದಾಗ ಬೂದಿಹಾಲ್ ಗೇಟ್ ಬಳಿ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಹಿಂಬದಿ ಕುಳಿತಿದ್ದ ಪ್ರಸಾದ್‍ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಂದ್ರಶೇಖರ್ ಗೆ ತಲೆಭಾಗಕ್ಕೆ ಗಂಭೀರವಾಗಿ ಗಾಯಗಳಾಗಿದ್ದು, ನೆಲಮಂಗಲ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌