ಕನಕಪುರ: ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ 2022-23ನೇ ಸಾಲಿನಲ್ಲಿ ಆಗಿದ್ದ ಹಣ ದುರುಪಯೋಗಕ್ಕೆ ಸಂಬಂಧಪಟ್ಟಂತೆ ಸಿಬ್ಬಂದಿಗಳಾದ ಸಿ.ರವೀಂದ್ರ, ಕುಮಾರಸ್ವಾಮಿ ಅವರನ್ನು ಸೇವೆಯಿಂದ ವಜಾಗೂಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಕಬ್ಬಾಳೇಗೌಡ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊಸೈಟಿಯಲ್ಲಿ 2022-2023 ಸಾಲಿನಲ್ಲಿ ಆಗಿದ್ದಂತಹ ಹಣ ದುರುಪಯೋಗ ಹಿನ್ನೆಲೆಯಲ್ಲಿ ಸಿಬ್ಬಂದಿಗಳಾದ ಸಿ.ರವೀಂದ್ರ, ಯಶೋದಾಬಾಯಿ, ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಒಳಪಡಿಸಿ 2023 ಆಗಸ್ಟ್ 19ರಂದು ಅಮಾನತು ಮಾಡಲಾಗಿತ್ತು. ಸಂಘದ ಆಂತರಿಕ ಲೆಕ್ಕಪರಿಶೋಧನೆಯಲ್ಲಿ ಹಣ ದುರುಪಯೋಗ ವಾಗಿರುವುದು ಮೇಲ್ನೋಟಕ್ಕೆ ಎಲ್ಲಾ ಆರೋಪಗಳು ವಿಚಾರಣಾ ವರದಿಯಲ್ಲಿ ಸಾಬೀತಾಗಿದ್ದರಿಂದ 2025 ಸೆ.24ರಂದು ಆಡಳಿತ ಮಂಡಳಿ ಸಭೆಯಲ್ಲಿ ಸೇವೆಯಿಂದ ವಜಾಗೊಳಿಸಲು ತೀರ್ಮಾನಿಸಿ ಸೆ.30ರಂದು ಅಮಾನತಿನಲ್ಲಿ ಇದ್ದಂತಹ ಸಿ.ರವೀಂದ್ರ ಮತ್ತು ಕುಮಾರಸ್ವಾಮಿ ಅವರನ್ನು ವಜಾಗೊಳಿಸಿದ್ದು ಯಶೋಧಾಬಾಯಿ ಅವರು ಈಗಾಗಲೇ ನಿವೃತ್ತಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ಸೊಸೈಟಿ ಉಪಾಧ್ಯಕ್ಷೆ ಚೂಡಾಮಣಿ, ನಿರ್ದೇಶಕರಾದ ರಾಮಚಂದ್ರ, ಪಿ.ರಾಮಚಂದ್ರ ಉಪಾಧ್ಯಾಯ, ನಾಗರಾಜು, ರಜಿನಿ ಎಸ್.ಎನ್, ಡಿ.ಶ್ರೀನಿವಾಸ್, ಜೆ.ನಟರಾಜು ಚಂದ್ರು, ಹೇಮಶೇಖರ್, ಚಿಕ್ಕ ಬೋರಯ್ಯ ಮತ್ತು ಮಂಜುಳಾ ಉಪಸ್ಥಿತರಿದ್ದರು.