ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಇಲ್ಲಿ ಶುಕ್ರವಾರ ಗರಗ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪ್ರಾಕೃತಿಕ ಸಂಪತ್ತಾಗಿರುವ ನಮ್ಮ ಕಾಡುಗಳನ್ನು ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಎಲ್ಲಡೆ ದಟ್ಟವಾಗಿ ಬೆಳೆದಿದ್ದ ಕಾಡುಗಳು ನಶಿಸಿ ಹೋಗುತ್ತಿರುವುದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗಿದೆ ಎಂದು ವಿಷಾದಿಸಿದರು.ಗರಗ ಅರಣ್ಯ ಪ್ರದೇಶಕ್ಕೆ ತಂತಿ ಬೇಲಿ ಅಳವಡಿಸುವುದರಿಂದ ಕಾಡುಪ್ರಾಣಿಗಳು ಅರಣ್ಯ ಬಿಟ್ಟು ಹೊರಗೆ ಹೋಗದಂತೆ ತಡೆಯುವ ಉದ್ದೇಶವೂ ಇದೆ. ಗರಗ ಮೀಸಲು ಅರಣ್ಯದಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿದ್ದು, ದನ, ಕರುಗಳು ಸಸಿಗಳನ್ನು ತಿನ್ನದಂತೆ ತಡೆಯುವ ಉದ್ದೇಶವೂ ಇದೆ. ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ತಂತಿಬೇಲಿ ಅಳವಡಿಸುವುದರಿಂದ ಒತ್ತುವರಿಯಾಗದಂತೆ ತಡೆದು ಕಾಡು ಸಂರಕ್ಷಿಸಬಹುದು ಎಂದರು.
ವಲಯ ಅರಣ್ಯಾಧಿಕಾರಿ ಎಂ.ಟಿ.ರಾಮಚಂದ್ರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಡಿ.ಬಿ.ಕುಮಾರ್, ಗಿರೀಶ್, ಪ್ರವೀಣ್, ಮಂಜುನಾಥ್ ಇದ್ದರು.