ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಲಿ: ಪರಶುರಾಮ ಲಮಾಣಿ

KannadaprabhaNewsNetwork |  
Published : Oct 01, 2025, 01:00 AM IST
ಕಾರ್ಯಕ್ರಮದಲ್ಲಿ ಪರಶುರಾಮ ಲಮಾಣಿ ಮಾತನಾಡಿದರು. | Kannada Prabha

ಸಾರಾಂಶ

ಇವತ್ತಿನ ದಿನಮಾನಗಳಲ್ಲಿ ಬಹಳಷ್ಟು ಅಪಘಾತಗಳಲ್ಲಿ ಸಾರ್ವಜನಿಕರು ತಮ್ಮ ಅಮೂಲ್ಯವಾದ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ವಾಹನವನ್ನು ಚಲಾಯಿಸದೇ ಇರುವುದು ಹಾಗೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ವಾಹನ ಓಡಿಸುವುದೇ ಇದಕ್ಕೆಲ್ಲ ಕಾರಣ.

ಗದಗ: ಪೊಲೀಸರು ಇರುವುದೇ ಸಾರ್ವಜನಿಕರ ಸೇವೆ ರಕ್ಷಣೆಗಾಗಿ ಎಂದು ಎಎಸ್‌ಐ ಪರಶುರಾಮ ಲಮಾಣಿ ತಿಳಿಸಿದರು.

ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಪೊಲೀಸ್, ಸಂಚಾರಿ ಪೊಲೀಸ್ ಠಾಣೆ ಹಾಗೂ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದಲ್ಲಿ ಸಂಚಾರಿ ನಿಯಮಗಳು ಮತ್ತು ರಸ್ತೆ ಸುರಕ್ಷತೆ ಬಗ್ಗೆ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇವತ್ತಿನ ದಿನಮಾನಗಳಲ್ಲಿ ಬಹಳಷ್ಟು ಅಪಘಾತಗಳಲ್ಲಿ ಸಾರ್ವಜನಿಕರು ತಮ್ಮ ಅಮೂಲ್ಯವಾದ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ವಾಹನವನ್ನು ಚಲಾಯಿಸದೇ ಇರುವುದು ಹಾಗೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ವಾಹನ ಓಡಿಸುವುದೇ ಇದಕ್ಕೆಲ್ಲ ಕಾರಣ ಎಂದರು.

ವಾಹನ ಚಲಾಯಿಸುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದು ಕಾನೂನುಬದ್ಧವಾಗಿ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸಲಾಗುತ್ತದೆ. ನಿಮ್ಮ ಜೀವನದ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ. ಇದರಿಂದ ತೀವ್ರವಾದ ತಲೆಗೆ ಪೆಟ್ಟು ಬಿಳುವುದನ್ನು ತಪ್ಪಿಸಬಹುದು ಮತ್ತು ಅಪಘಾತದಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು. ಅದರೊಂದಿಗೆ ಸಂಚಾರಿ ನಿಯಮಗಳನ್ನು ಪಾಲಿಸಿದಂತಾಗುತ್ತದೆ ಎಂದರು.

ಸಂಚಾರಿ ಪೊಲೀಸ್ ಇಲಾಖೆಯ ಎನ್.ಎಚ್. ಗುಡ್ಡದವರ ಮಾತನಾಡಿ, ಪ್ರತಿಯೊಬ್ಬರಿಗೂ ಜೀವ ಅಮೂಲ್ಯವಾದದ್ದು. ಹೀಗಾಗಿ ಸಂಚಾರ ಮಾಡುವಾಗ ನಿಷ್ಕಾಳಜಿ ಮಾಡದೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಅದರೊಂದಿಗೆ ಕಡ್ಡಾಯವಾಗಿ ವಾಹನವನ್ನು ಖರೀದಿ ಮಾಡಿದ ಮೇಲೆ ಲೈಸೆನ್ಸ್ ಪಡೆದುಕೊಳ್ಳಿ. ಅದರೊಂದಿಗೆ ಇನ್ಸೂರೆನ್ಸ್ ಮಾಡಿಸಿ ಅದು ಸಹಾಯಕ್ಕೆ ಬರುತ್ತದೆ. ಯಾವುದೇ ಸಂದರ್ಭದಲ್ಲಿದಾರೂ ಅಪಘಾತ ಅನಿರೀಕ್ಷಿತವಾಗಿರುತ್ತದೆ. ಹೀಗಾಗಿ ವಾಹನ ಓಡಿಸುವಾಗ ಜಾಗೃತರಾಗಿ ವಾಹನವನ್ನು ಚಲಾಯಿಸಿ ಎಂದು ಸಂಚಾರಿ ನಿಯಮಗಳ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರೊ. ಕೆ. ಗಿರಿರಾಜ ಕುಮಾರ ಮಾತನಾಡಿದರು. ಉಪ ಪ್ರಾ. ಡಾ. ವಿ.ಟಿ. ನಾಯ್ಕರ, ಎಸ್.ಎಸ್. ಲಮಾಣಿ, ಸಂತೋಷ ಕುಮಾರ, ಪ್ರೊ. ಬಿ.ಪಿ. ಜೈನರ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ