ಕನ್ನಡಪ್ರಭ ವಾರ್ತೆ ವಿಜಯಪುರ
ಶಿರಸಂಗಿ ಲಿಂಗರಾಜ ವಿವಿಧೋದ್ದೇಶ ಸಂಸ್ಥೆ, ಶ್ರೀಮತಿ ಕಮಲಾಬಾಯಿ ಬಸನಗೌಡ ಪಾಟೀಲ ಚಾರಿಟೇಬಲ್ ಟ್ರಸ್ಟ್, ಶಿರಸಲಿಂಗ ಲಿಂಗರಾಜ ಪತ್ತಿನ ಸಹಕಾರ ಸಂಘ, ಲಿಂಗಾಯತ ಕುಡು ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ವೇದಿಕೆ, ವಿಜಯಪುರ, ಬಾಗಲಕೋಟೆ ಹಾಗೂ ಅಥಣಿ ಕುಡು ಒಕ್ಕಲಿಗ ಸಮುದಾಯದ ಸಹಯೋಗದಲ್ಲಿ ನಗರದ ಅಥಣಿ ರಸ್ತೆಯಲ್ಲಿರುವ ಶ್ರೀ ಜಿ.ಕೆ.ಪಾಟೀಲ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತ್ಯಾಗವೀರ ಶಿರಸಂಗಿ ಮಹಾರಾಜರ ಹೆಸರಿನಲ್ಲಿ ಪ್ರಸಕ್ತ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತ್ಯಾಗವೀರ ಶಿರಸಿಂಗ ಲಿಂಗರಾಜ ಮಹಾರಾಜರು ಶಿಕ್ಷಣ ಪ್ರಸಾರಕ್ಕೆ ನೀಡಿದ ಕೊಡುಗೆ ಅಮೋಘ, ತಮ್ಮ ಮಹೋನ್ನತ ವಿಚಾರಧಾರೆ, ದೂರದೃಷ್ಟಿಯ ಫಲವಾಗಿ ತಮ್ಮ ಇಡೀ ಸಂಪತ್ತನ್ನೇ ದಾನ ಮಾಡಿ ಶಿಕ್ಷಣ ಸಂಸ್ಥೆಗಳಿಗೆ ಧಾರೆ ಎರೆದರು. ಹೀಗಾಗಿ ವಿದ್ಯಾರ್ಥಿಗಳು ಈ ಮಹಾನ್ ಚಿಂತಕ ಶಿರಸಂಗಿ ಲಿಂಗರಾಜ ಮಹಾರಾಜರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಪ್ರತಿಭೆಗೆ ಪ್ರೋತ್ಸಾಹ ಅಗತ್ಯ, ಕುಡುಒಕ್ಕಲಿಗ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಆಶೀರ್ವದಿಸುತ್ತಿರುವುದು ಹೆಮ್ಮೆಯ ವಿಚಾರ. ಈ ಬಾರಿ ನೆರೆಯ ಬಾಗಲಕೋಟೆ, ಅಥಣಿ ಭಾಗದ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸಂತೋಷದ ಸಂಗತಿ. ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರ ಮಾರ್ಗದರ್ಶನ ಅಗತ್ಯವಾಗಿ ಬೇಕು. ಸಮಾಜದ ಪ್ರಮುಖರು ಸಮಾಜ ಕಟ್ಟುವ ಕಾರ್ಯ, ಪ್ರತಿಭಾ ಪುರಸ್ಕಾರಗಳಿಗೆ ಹೆಚ್ಚಿನ ರೂಪದಲ್ಲಿ ನೆರವಾಗಿ, ಬೆನ್ನೆಲುಬಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಇಂಡಿ-ಕವಲಗಿಯ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನಮಠದ ಡಾ.ಅಭಿನವ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅಣ್ಣಾಸಾಹೇಬಗೌಡ ಪಾಟೀಲ, ಕಲ್ಲನಗೌಡ ಪಾಟೀಲ, ಆರ್.ಎಸ್.ಜನಗೊಂಡ, ಭಾಗಪ್ಪಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಆನಂದ ಖೇಡ, ಶೇಖರ ಜಲಪುರೆ, ಮಮತಾ ಬನ್ನೂರ, ಎಸ್.ಎ.ಬಿರಾದಾರ ಪಾಲ್ಗೊಂಡಿದ್ದರು.