ಕನ್ನಡಪ್ರಭ ವಾರ್ತೆ ಮಂಗಳೂರುಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳವಾರ ಸಮ್ಮೇಳನ ಸಭಾಂಗಣದಲ್ಲಿ ಟೈಪ್ 1 ಡಯಾಬಿಟಿಸ್ ಮೆಲಿಟಸ್ ಬೆಂಬಲ ಗುಂಪನ್ನು ಪ್ರಾರಂಭಿಸಿದೆ.
ಹೆಜ್ಜೆಹಾಕಿದೆ. ಈ ಉದ್ದೇಶಿತ ಉಪಕ್ರಮ ಈ ಪ್ರದೇಶದಲ್ಲಿ ಮೊದಲಬಾರಿಗೆ ನಡೆಯುತ್ತಿದ್ದು, ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳಿಗೆ, ಅವರ ಪೋಷಕರಿಗೆ ಮತ್ತು ಆರೈಕೆದಾರರಿಗೆ ಮಾಹಿತಿ ಹೊಂದಿದಸಮುದಾಯವೊಂದನ್ನು ರೂಪಿಸುವುದನ್ನು ಗುರಿಯಾಗಿಟ್ಟುಕೊಂಡಿದೆ. ಡಾ. ಹಿಮಾಂಶು ಆಚಾರ್ಯ ಪ್ರಾಸ್ತಾವಿಕದಲ್ಲಿ, ಟೈಪ್ 1 ಡಯಾಬಿಟಿಸ್ ಹೊಂದಿರುವ ಮಕ್ಕಳಿಗೆ ವೈದ್ಯಕೀಯ ಆರೈಕೆ ಜೊತೆಗೆ ಭಾವನಾತ್ಮಕ ಹಾಗೂ ಮಾನಸಿಕ ಬೆಂಬಲವೂ ಅಗತ್ಯವಿದೆ ಎಂದರು.ಡಾ. ಅಮಿತಾ ಪಿ. ಮಾರ್ಲಾ ಕಾರ್ಯಕ್ರಮ ಉದ್ಘಾಟಿಸಿದರು. ಡಯಾಬಿಟಿಸ್ ನಿರ್ವಹಣೆಯಲ್ಲಿ ಭಾವನಾತ್ಮಕ ಹಾಗೂಸಾಮಾಜಿಕ ಆಯಾಮಗಳನ್ನು ಎತ್ತಿ ಹಿಡಿಯುವಲ್ಲಿ ಆಸ್ಪತ್ರೆಯ ಸಕ್ರಿಯ ಪಾತ್ರವನ್ನು ಅವರು ಪ್ರಶಂಸಿಸಿದರು.