ಪ್ರಥಮ ಸ್ಥಾನವನ್ನು ‘ಎಕ್ಷ್ಮೀಮ್ ಡ್ಯಾನ್ಸ್ ಅಕಾಡೆಮಿ ಉಡುಪಿ’, ಎರಡನೇ ಸ್ಥಾನವನ್ನು ‘ನಾಟ್ಯ ಸ್ಕೂಲ್ ಆಫ್ ಡ್ಯಾನ್ಸ್ ಕೋಟೇಶ್ವರ, ಮೂರನೇ ಸ್ಥಾನವನ್ನು ‘ಲಾನ್ ಮಂಗಳೂರು’, ನಾಲ್ಕನೇ ಸ್ಥಾನವನ್ನು ‘ಟೀಮ್ ಜ್ಯುನಿಯರ್ ಎಕ್ಸ್ ಉಡುಪಿ’ ಪಡೆದುಕೊಂಡಿತು. ಭಾಗವಹಿಸಿದ 14 ತಂಡಗಳಿಗೂ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ತಲಾ 10.000 ರು. ಪ್ರೋತ್ಸಾಹಕರ ಬಹುಮಾನ ನೀಡಿದರು.
ಕನ್ನಡಪ್ರಭ ವಾರ್ತೆ ಉಚ್ಚಿಲ
ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ರಲ್ಲಿ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ನೃತ್ಯ ಸ್ಪರ್ಧೆ ‘ನೃತ್ಯ ವೈಭವ’ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದವು. ಒಂದಕ್ಕಿಂತಲೂ ಒಂದು ತಂಡ ತಮ್ಮ ನೃತ್ಯದ ಮೂಲಕ ನೆರೆದವರನ್ನು ಮನರಂಜಿಸಿದವು. ರಾಜ್ಯಾದ್ಯಂತದಿಂದ ಒಟ್ಟು 17 ನೃತ್ಯ ತಂಡಗಳು ಈ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದೆ.ಪ್ರಥಮ ಸ್ಥಾನವನ್ನು ‘ಎಕ್ಷ್ಮೀಮ್ ಡ್ಯಾನ್ಸ್ ಅಕಾಡೆಮಿ ಉಡುಪಿ’, ಎರಡನೇ ಸ್ಥಾನವನ್ನು ‘ನಾಟ್ಯ ಸ್ಕೂಲ್ ಆಫ್ ಡ್ಯಾನ್ಸ್ ಕೋಟೇಶ್ವರ, ಮೂರನೇ ಸ್ಥಾನವನ್ನು ‘ಲಾನ್ ಮಂಗಳೂರು’, ನಾಲ್ಕನೇ ಸ್ಥಾನವನ್ನು ‘ಟೀಮ್ ಜ್ಯುನಿಯರ್ ಎಕ್ಸ್ ಉಡುಪಿ’ ಪಡೆದುಕೊಂಡಿತು.ಭಾಗವಹಿಸಿದ 14 ತಂಡಗಳಿಗೂ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ತಲಾ 10.000 ರು. ಪ್ರೋತ್ಸಾಹಕರ ಬಹುಮಾನ ನೀಡಿದರು.ಸಮಾರೋಪ ಸಮಾರಂಭದಲ್ಲಿ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಮಹಾಜನ ಸಂಘ ಅಧ್ಯಕ್ಷ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.
ಬಲ್ಲಾಳ್, ಆಳ್ವಾರಿಗೆ ಸನ್ಮಾನ:
ಸೋಮವಾರ ಶ್ರೀ ಕ್ಷೇತ್ರಕ್ಕೆ ದಸರಾ ಪ್ರಯುಕ್ತ ಭೇಟಿ ಕೊಟ್ಟ ಮಾಹೆಯ ಸಹಕುಲಪತಿ ಡಾ. ಎಚ್.ಎಸ್.ಬಲ್ಲಾಳ್ ದಂಪತಿ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ. ಮೋಹನ್ ಆಳ್ವ ಅವರನ್ನು ಕ್ಷೇತ್ರದ ಪರವಾಗಿ ಸನ್ಮಾನಿಸಲಾಯಿತು.
ಅಲ್ಲದೇ ರಾಜಕಾರಣಿಗಳಾದ ಪ್ರಮೋದ್ ಮಧ್ವರಾಜ್, ಗೋಪಾಲ ಪೂಜಾರಿ ಬೈಂದೂರು, ಐವನ್ ಡಿಸೋಜ ಅವರನ್ನು ಗೌರವಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.