ಉಡಿಗಾಲ ಪಿಎಸಿಸಿ ಬ್ಯಾಂಕ್ ಬಿಜೆಪಿ ತೆಕ್ಕೆಗೆ

KannadaprabhaNewsNetwork |  
Published : Mar 19, 2025, 12:33 AM ISTUpdated : Mar 19, 2025, 12:34 AM IST
ಉಡಿಗಾಲ ಪಿಎಸಿಸಿ ಬ್ಯಾಂಕ್ ಬಿಜೆಪಿ ತೆಕ್ಕೆಗೆ | Kannada Prabha

ಸಾರಾಂಶ

ಚಾಮರಾಜನಗರ ತಾಲೂಕಿನ ಉಡಿಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ 8ನೇ ಬಾರಿಗೆ ಶಿವಕುಮಾರ್ ಹಾಗೂ ಉಪಾಧ್ಯಕ್ಷರಾಗಿ ರಾಜಪ್ಪ ಅವಿರೋಧ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಉಡಿಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ 8ನೇ ಬಾರಿಗೆ ಬಿಜೆಪಿ ಬೆಂಬಲಿಗರಾದ ತಮ್ಮಡಹಳ್ಳಿ ಶಿವಕುಮಾರ್ ಹಾಗೂ ಉಪಾಧ್ಯಕ್ಷರಾಗಿ ರಾಜಪ್ಪ ಮಂಗಳವಾರ ಅವಿರೋಧ ಆಯ್ಕೆಯಾದರು. ಗ್ರಾಮದ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ರಾಜಪ್ಪ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ಚುನಾವಣಾಧಿಕಾರಿ ಅಧಿಕೃತವಾಗಿ ಘೋಷಣೆ ಮಾಡಿದರು. ಸಿಇಒ ಮಹೇಶ್ ಸಹಾಯಕ ಬಿ.ಹೇಮಂತ್ ಇದ್ದರು. ಶಿವಕುಮಾರ್ ಸಹಕಾರ ಸಂಘದ ಅಧ್ಯಕ್ಷರಾಗಿ ಸತತ ೩೫ ವರ್ಷಗಳಿಂದ ಆಯ್ಕೆಯಾಗುತ್ತಾ ಬಂದಿದ್ದು, ಈ ಬಾರಿಯು ಶಿವಕುಮಾರ್ ಅವರೇ ಅವಿರೋಧ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಶಿವಕುಮಾರ್ ಮಾತನಾಡಿ, ಸಹಕಾರಕ್ಕೆ ಮತ್ತೊಮ್ಮೆ ಅವಿರೋಧವಾಗಿ ನನ್ನನ್ನು ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರು ಮತ್ತು ಸಂಘದ ವ್ಯಾಪ್ತಿಯಲ್ಲಿರುವ ಎಲ್ಲಾ ಗ್ರಾಮಗಳ ಸಹಕಾರ ಬಂಧುಗಳಿಗೆ ಆಭಾರಿಯಾಗಿದ್ದೇನೆ ಎಂದರು. ಕಳೆದ ೩೫ ವರ್ಷಗಳ ಹಿಂದೆ ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಬ್ಯಾಂಕ್ ೨ ಲಕ್ಷ ರು.ಗಳ ಸುಸ್ತಿಯಲ್ಲಿತ್ತು. ಹಂತ ಹಂತವಾಗಿ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವ ಜೊತೆಗೆ ಸದಸ್ಯರಿಗೆ ೫ ಕೋಟಿ ರು. ಸಾಲ ನೀಡಲಾಗಿದೆ. ಪ್ರಸ್ತುತ ಸಂಘವು ೬ ಕೋಟಿ ರು.ಗಳ ವಹಿವಾಟು ಹೊಂದಿದೆ. ಮುಂದಿನ ದಿನಗಳಲ್ಲಿ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಸಂಘವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಬೆಳೆಸೋಣ ಎಂದರು. ಸಭೆಯಲ್ಲಿ ಸಂಘದ ನೂತನ ನಿರ್ದೇಶಕರಾದ ಬಿ.ಬಾಲಚಂದ್ರ ಮೂರ್ತಿ, ಎಸ್.ಮಹೇಶ್, ಸುರೇಶ್, ರತ್ನಮ್ಮ, ಪಾರ್ವತಮ್ಮ, ಸುರೇಶ್, ಎಂ.ಮಹದೇವನಾಯಕ, ಎಂ.ಭಾರತಿ, ಬೆಳ್ಳಶೆಟ್ಟಿ, ಮಹೇಶ್ ಉಪಸ್ಥಿತರಿದ್ದರು.

ಅಭಿನಂದನೆ:

ಉಡಿಗಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಶಿವಕುಮಾರ್, ರಾಜಪ್ಪ ಅವರು ಅವಿರೋಧ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು, ಮುಖಂಡರು ಹಾರ, ಶಾಲು ಹಾಕಿ ಅಭಿನಂದಿಸಿದರು. ಜಿಪಂ ಮಾಜಿ ಸದಸ್ಯ ಸುಬ್ಬನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್, ಉಡಿಗಾಲ ನಂಜಪ್ಪ, ಕೊಂಗಳ್ಳಿ, ಪ್ರಕಾಸ್, ತಮ್ಮಡಹಳ್ಳಿ ಮಹೇಶ್, ಎಸ್. ಬಸವನಾಯಕ, ಲೋಕೇಶ್ ವೀರನಪುರ, ಮಾಜಿ ಚೇರ್‍ಮನ್ ಮಂಜುನಾಥ್, ಮಾಜಿ ಡೇರಿ ಅಧ್ಯಕ್ಷ ಟಿ.ಬಿ.ಸುರೇಶ್, ಗ್ರಾಪಂ ಸದಸ್ಯ ಬಸವಣ್ಣ, ಮೊದಲಾದವರು ಇದ್ದರು.

PREV

Recommended Stories

ಮುಸುಕುಧಾರಿ ಯಾರು ? ಸ್ನೇಹಿತನಿಂದ ವಿವರ ಸಂಗ್ರಹಿಸಿದ ಎಸ್‌ಐಟಿ
ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!