ಫೆಬ್ರವರಿ 18ರಂದು ಉಡು-ತಡಿ ಪುಸ್ತಕ ಬಿಡುಗಡೆ, ನಾಟಕ ಪ್ರದರ್ಶನ: ಲೇಖಕ ಗಣೇಶ್

KannadaprabhaNewsNetwork |  
Published : Feb 18, 2025, 12:34 AM IST
ಪೊಟೋ: 17ಎಸ್‌ಎಂಜಿಕೆಪಿ03ಶಿವಮೊಗ್ಗದ ಪತ್ರಿಕಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಲೇಖಕರು ಹಾಗೂ ರಂಗನಿರ್ದೇಶಕರಾದ ಗಣೇಶ್ ಆರ್.ಕೆಂಚನಾಲ್ ಮಾತನಾಡಿದರು. | Kannada Prabha

ಸಾರಾಂಶ

ಮಲೆನಾಡು ಕಲಾ ತಂಡ ಶಿವಮೊಗ್ಗ, ದಿ. ಎಂ.ಕೆ. ರೇಣುಕಪ್ಪಗೌಡ ಪ್ರತಿಷ್ಠಾನ ಮಸರೂರು ಇವರ ಸಂಯುಕ್ತಾಶ್ರಯದಲ್ಲಿ ಡಾ. ಗಣೇಶ್ ಆರ್ ಕೆಂಚನಾಲ್ ರಚನೆಯ ’ಉಡು -ತಡಿ’ ನಾಟಕದ ಪುಸ್ತಕ ಬಿಡುಗಡೆ ಮತ್ತು ನಾಟಕ ಪ್ರದರ್ಶನವನ್ನು ಫೆ.18 ರಂದು ಸಂಜೆ 6.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಲೇಖಕ, ರಂಗ ನಿರ್ದೇಶಕ ಗಣೇಶ್ ಆರ್. ಕೆಂಚನಾಲ್ ತಿಳಿಸಿದರು.

ಮುರುಘ ಶ್ರೀ ಸಾನ್ನಿಧ್ಯ

ಶಿವಮೊಗ್ಗ: ಮಲೆನಾಡು ಕಲಾ ತಂಡ ಶಿವಮೊಗ್ಗ, ದಿ. ಎಂ.ಕೆ. ರೇಣುಕಪ್ಪಗೌಡ ಪ್ರತಿಷ್ಠಾನ ಮಸರೂರು ಇವರ ಸಂಯುಕ್ತಾಶ್ರಯದಲ್ಲಿ ಡಾ. ಗಣೇಶ್ ಆರ್ ಕೆಂಚನಾಲ್ ರಚನೆಯ ’ಉಡು -ತಡಿ’ ನಾಟಕದ ಪುಸ್ತಕ ಬಿಡುಗಡೆ ಮತ್ತು ನಾಟಕ ಪ್ರದರ್ಶನವನ್ನು ಫೆ.18 ರಂದು ಸಂಜೆ 6.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಲೇಖಕ, ರಂಗ ನಿರ್ದೇಶಕ ಗಣೇಶ್ ಆರ್. ಕೆಂಚನಾಲ್ ತಿಳಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಉಡು-ತಡಿ ನಾಟಕ ಶಿವಮೊಗ್ಗ ಜಿಲ್ಲೆಯ ವಚನಗಾರ್ತಿ ಅಕ್ಕಮಹಾದೇವಿ ಅವರ ಕುರಿತಾಗಿದ್ದು, ಈ ನಾಟಕ ಯಶಸ್ವಿಯಾಗಿ 5ನೇ ಪ್ರದರ್ಶನ ಕಾಣುತ್ತಿದೆ. ಕಾರ್ಯಕ್ರಮಕ್ಕೆ ಶ್ರೀಬೆಕ್ಕಿನಕಲ್ಮಠದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿ ಸಾನಿಧ್ಯ ವಹಿಸಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ವಿಧಾನ ಪರಿಷತ್ ಮಾಜಿ ಶಾಸಕ ಎಸ್. ರುದ್ರೇಗೌಡರು ನೆರವೇರಿಸಲಿದ್ದಾರೆ. ವಿಶ್ರಾಂತ ಪ್ರಾಂಶುಪಾಲ, ರಂಗ ಕಲಾವಿದ ಡಾ.ಎಚ್.ಎಸ್.ನಾಗಭೂಷಣ್ ಪುಸ್ತಕ ಕುರಿತು ಮಾತನಾಡಲಿದ್ದಾರೆ ಎಂದರು.

ರಂಗ ಸನ್ಮಾನವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಂಗನಟಿ ಲಕ್ಷ್ಮೀ ಎಸ್.ಭದ್ರಾವತಿಗೆ ನೀಡಲಾಗುವುದು. ಈ ನಾಟಕವನ್ನು ಮಂಜುಳಾ ಬದಾಮಿ, ವೈಡಿ, ಬದಾಮಿ, ಸಾಣೇಹಳ್ಳಿ ನಿರ್ದೇಶಿಸಿದ್ದಾರೆ. ೧೨ನೇ ಶತಮಾನದ ಶಿವಶರಣೆ ಅಕ್ಕಮಹಾದೇವಿ ಜೀವನ ಅಸಾಮಾನ್ಯವಾದ, ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವ ಪೂರ್ಣವಾದ ನಡೆ-ನುಡಿಗಳೊಂದಾದ ಪರಿಯಲ್ಲಿರುವುದು ಕಂಡು ಬರುತ್ತದೆ. ಶರಣ ಚಳವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ ಆಕೆಯದು. ಅವರ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದೆ. ಸ್ವತಃ ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ, ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದರು.

ಈ ನಾಟಕಕ್ಕೆ ಒಬ್ಬರಿಗೆ 99 ರು. ಪ್ರವೇಶ ಶುಲ್ಕವಿದ್ದು, ನಾಟಕ ವೀಕ್ಷಿಸಲು ಬಂದವರಿಗೆ ಬಿಡುಗಡೆಯಾಗುವ ಕೃತಿಯನ್ನು ಉಚಿತವಾಗಿ ನೀಡಲಾಗುವುದು ಎಂದರು. ಬಸವರಾಜ್ ನೆಲ್ಲಿಸರ, ಶಕುಂತಲಾ, ಕಿರಣ್ ದೇಸಾಯಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ