ಉಡುಪಿ: ಕಳವಾದ 18 ಮೊಬೈಲು ವಾರಸುದಾರರಿಗೆ ಹಸ್ತಾಂತರ

KannadaprabhaNewsNetwork |  
Published : Dec 31, 2024, 01:01 AM IST
30ಮೊಬೈಲ್ | Kannada Prabha

ಸಾರಾಂಶ

ಉಡುಪಿ ನಗರ ವ್ಯಾಪ್ತಿಯಲ್ಲಿ ಕಳೆದೆರಡು ತಿಂಗಳಲ್ಲಿ ಪೊಲೀಸರು ಜಪ್ತು ಮಾಡಿದ, ಕಳವಾದ ಮೊಬೈಲ್‌ಗಳನ್ನು ಸೋಮವಾರ ನಗರ ಠಾಣೆಯಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ನಗರ ವ್ಯಾಪ್ತಿಯಲ್ಲಿ ಕಳೆದೆರಡು ತಿಂಗಳಲ್ಲಿ ಪೊಲೀಸರು ಜಪ್ತು ಮಾಡಿದ, ಕಳವಾದ ಮೊಬೈಲ್‌ಗಳನ್ನು ಸೋಮವಾರ ನಗರ ಠಾಣೆಯಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಡಿವೈಎಸ್ಪಿ ಪ್ರಭು ಡಿ.ಟಿ. ಅವರು ಸುಮಾರು 3,53,400 ರು. ಮೌಲ್ಯದ 18 ಸ್ಮಾರ್ಟ್ ಮೊಬೈಲ್‌ಗಳನ್ನು ಅವುಗಳ ಮಾಲಕರಿಗೆ ಹಸ್ತಾಂತರಿಸಿದರು.

ನಂತರ ಮಾತನಾಡಿದ ಅವರು, ಮೊಬೈಲ್ ಕಳವಾದ ತಕ್ಷಣ ಇ-ಲಾಸ್ಟ್ ಆ್ಯಪ್ ಅಥವಾ ಸಿಇಐಆರ್ ಪೋರ್ಟಲ್‌ಗೆ ಮೊಬೈಲ್‌ ಬಗ್ಗೆ ಸರಿಯಾದ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು, ಅಲ್ಲಿಂದ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಳವಾದ ಮೊಬೈಲ್‌ ಬಗ್ಗೆ ಮಾಹಿತಿ ಹೋಗುತ್ತದೆ, ಅಲ್ಲಿ ತಜ್ಞರು ಕಳವಾದ ಮೊಬೈಲ್‌ಗಳನ್ನು ಟ್ರಾಕ್ ಮಾಡಿ ಪತ್ತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭ ನಗರಠಾಣೆಯ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್, ಎಸೈಗಳಾದ ಪುನೀತ್ ಕುಮಾರ್ ಬಿ.ಇ., ವೀರಣ್ಣ ಶಿರಗುಂಪಿ, ಭರತೇಶ್, ಗೋಪಾಲಕೃಷ್ಣ ಜೋಗಿ ಮತ್ತು ತಾಂತ್ರಿಕ ಸಿಬ್ಬಂದಿ ವಿನಯಕುಮಾರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ