ಉಡುಪಿ: ಉಡುಪಿಯಲ್ಲಿ ಶಿಕ್ಷಕರೊಬ್ಬರ ಬರ್ಬರ ಕೊಲೆ ಮಾಡಿ, ದುಬೈಯಲ್ಲಿ ತಲೆಮರೆಸಿಕೊಂಡಿದ್ದ ರಾಜೇಶ ಕೇಶವ ಆಚಾರ್ಯ ಎಂಬಾತನನ್ನು ಇಂಟರ್‌ಪೋಲ್ ಸಹಾಯದಿಂದ ಬಂಧಿಸಿ ಭಾರತಕ್ಕೆ ತರಲಾಗಿದ್ದು, ಉಡುಪಿಗೆ ಕರೆತರಲಾಗುತ್ತಿದೆ.
ನಂತರ ಆತ ಯುಎಇನ ಅಬುದಾಬಿಯಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ಪಡೆದ ಉಡುಪಿ ಪೊಲೀಸರು ಇಂಟರ್‌ಪೋಲ್ ಮೂಲಕ ಈತನ ವಿರುದ್ಧ ರೆಡ್ ನೋಟಿಸ್ ಹೊರಡಿಸುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಯುಎಇಯ ಪೊಲೀಸರು ತಮ್ಮಲ್ಲಿ ಆತನ ಇರುವಿಕೆಯನ್ನು ಪತ್ತೆಹಚ್ಚಿ ಬಂಧಿಸಿ, ಆತನ ಪಾಸ್ ಪೋರ್ಟ್ ರದ್ದುಪಡಿಸಿದ್ದಾರೆ. ಇದೀಗ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿದ ಯುಎಇ ಪೊಲೀಸರು ಆತನನ್ನು ಭಾರತಕ್ಕೆ ಗಡಿಪಾರು ಮಾಡಿದ್ದಾರೆ. ಅಲ್ಲಿಂದ ಮುಂಬೈಗೆ ಆಗಮಿಸಿದ ಈತನನ್ನು ಮಂಗಳೂರು ಹಾಗೂ ಉಡುಪಿ ಪೊಲೀಸ್ ತಂಡದವರು ಜಂಟಿಯಾಗಿ ವಶಕ್ಕೆ ತೆಗೆದುಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿ, ಉಡುಪಿಗೆ ಕರೆ ತರುತಿದ್ದಾರೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.