ಕನ್ನಡಪ್ರಭ ವಾರ್ತೆ ಉಡುಪಿ
ಈ ಕ್ಷೇತ್ರದಲ್ಲಿ ಒಟ್ಟು 1585162 ಮಂದಿ ಅರ್ಹ ಮತದಾರರಿದ್ದು, ಅವರಲ್ಲಿ 768215 ಪುರುಷ ಮತ್ತು 816910 ಮಹಿಳಾ ಮತದಾರರಾಗಿದ್ದಾರೆ. ಅವರಲ್ಲಿ 594565 ಮಂದಿ ಪುರುಷ (ಶೇ.77.39) ಮತ್ತು 628316 (ಶೇ.76.91) ಮಂದಿ ಮಹಿಳಾ ಮತದಾರರು ಸೇರಿ ಒಟ್ಟು 1222888 (ಶೇ.77.15) ಮಂದಿ ಮತದಾನ ಮಾಡಿದ್ದಾರೆ. ಮತದಾರರ ಪಟ್ಟಿಯಲ್ಲಿದ್ದ 37 ತೃತೀಯ ಲಿಂಗಿ ಮತದಾರರಲ್ಲಿ ಕೇವಲ 7 ಮಂದಿ ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದ್ದರೂ, ಮತದಾನದಲ್ಲಿ ಮಾತ್ರ ಪುರುಷ ಮತದಾರರೇ ಮುಂದಿದ್ದಾರೆ. ಶೇ.77.39 ಪುರುಷ ಮತದಾರರು ಮತದಾನ ಮಾಡಿದ್ದರೆ, ಶೇ.76.91 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.ವಿಧಾನಸಭಾ ವಾರು ಕುಂದಾಪುರ ಶೇ.79.12, ಉಡುಪಿ ಶೇ.77.84, ಕಾಪು ಶೇ.79.17, ಕಾರ್ಕಳ ಶೇ.79.66, ಶೃಂಗೇರಿ ಶೇ.80.31, ಮೂಡಿಗೆರೆ ಶೇ.77.47, ಚಿಕ್ಕಮಗಳೂರು ಶೇ.70.73 ಮತ್ತು ತರಿಕೆರೆಯಲ್ಲಿ ಶೇ.74.29ರಷ್ಟು ಮತದಾನವಾಗಿದೆ.