ಉಡುಪಿ: ಮೂಡುಬಿದಿರೆಯ ಡಾ. ಮೋಹನ್ ಆಳ್ವ ಅವರು ತಮ್ಮ ಆಳ್ವಾಸ್ ನುಡಿಸಿರಿ ಮೂಲಕ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ, ಆಳ್ವಾಸ್ ವಿರಾಸತ್ ಮೂಲಕ ಭಾರತೀಯ ಸಾಂಸ್ಕೃತಿಕ ಕ್ಷೇತ್ರವನ್ನೇ ಆಳುತ್ತಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಪುತ್ತಿಗೆ ಮಠದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು, ಡಾ. ಮೋಹನ್ ಅಳ್ವ ಅವರು ತಮ್ಮ ನುಡಿಸಿರಿ, ವಿರಾಸತ್ ನಂತಹ ಕಾರ್ಯಕ್ರಮಗಳ ಮೂಲಕ ಭಾರತದ ಸನಾತನ ಸಂಸ್ಕೃತಿಗೆ ಬಹಳ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಎ. ಗಫೂರ್, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ, ಕನ್ನಡ - ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಶೆಟ್ಟಿ, ಸಮಾಜದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಾದ ಉಡುಪಿ ವಿಶ್ವನಾಥ ಶೆಣೈ, ನವೀನ್ ಶೆಟ್ಟಿ ಕುತ್ಯಾರು, ಪ್ರಸಾದ್ ರಾಜ್ ಕಾಂಚನ್, ಗುಜ್ಜಾಡಿ ಪ್ರಭಾಕರ ನಾಯಕ್, ಪ್ರದೀಪ್ ಚಂದ್ರ ಗಾಣಿಗ, ದಿನಕರ ಹೆರೂರು, ಭುವನೇಂದ್ರ ಕಿದಿಯೂರು, ನಾಗೇಶ್ ಹೆಗ್ಡೆ, ಜಯ ಸುವರ್ಣ, ಹರಿಯಪ್ಪ ಕೋಟ್ಯಾನ್, ನಯನಾ ಗಣೇಶ್, ಗೀತಾಂಜಲಿ ಸುವರ್ಣ, ವೀಣಾ ಎಸ್. ಶೆಟ್ಟಿ, ಸಿಎ ದೇವಾನಂದ, ನೀಲಾವರ ಸುರೇಂದ್ರ ಅಡಿಗ, ವಿಜಯ ಕೊಡವೂರು, ಹರಿಪ್ರಸಾದ್ ರೈ, ರವಿರಾಜ ಹೆಗ್ಡೆ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಡಾ. ಕಿರಣ್ ಆಚಾರ್ಯ, ಶ್ರುತಿ ಶೆಣೈ ಮಣಿಪಾಲ, ಟಿ. ಶಂಭು ಶೆಟ್ಟಿ, ರಮೇಶ್ ಬಂಗೇರ, ನಿರೂುಮಾ ಪ್ರಸಾದ್ ಶೆಟ್ಟಿ, ಗೋಪಾಲ ಬಂಗೇರ, ಅಶೋಕ್ ಶೆಟ್ಟಿ, ರಂಜನ್ ಕಲ್ಕೂರ, ನಟರಾಜ ಹೆಗ್ಡೆ, ಡಾ. ಗಣನಾಥ ಎಕ್ಕಾರ್, ಡಾ. ಮಮತ ಮತ್ತಿತರರಿದ್ದರು.ವಿರಾಸತ್ ಉಡುಪಿ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. ಭುವನಪ್ರಸಾದ್ ಹೆಗ್ಡೆ ವಂದಿಸಿದರು.
ಸಾಂಸ್ಕೃತಿಕ, ಸೌಂದರ್ಯ ಪ್ರಜ್ಞೆ ಬೆಳೆಸುವ ಗುರಿಈ ಆಳ್ವಾಸ್ ಸಾಂಸ್ಕೃತಿಕ ವೈಭವವನ್ನು ರಾಜ್ಯದ 50 ಕಡೆಗಳಲ್ಲಿ ಪ್ರದರ್ಶಿಸಬೇಕು ಎಂಬ ಗುರಿ ಇಟ್ಟುಕೊಂಡಿದ್ದೇವೆ. ಇದು ಕೇವಲ ಮನೋರಂಜನೆಗಾಗಿ ನಡೆಯುವ ಕಾರ್ಯಕ್ರಮ ಅಲ್ಲ, ಈ ಮೂಲಕ ಜನರಲ್ಲಿ ಸಾಂಸ್ಕೃತಿಕ ಮತ್ತು ಸೌಂದರ್ಯ ಪ್ರಜ್ಞೆಯನ್ನು ಬೆಳೆಸುವುದು ಹಾಗೂ ಶಾಸ್ತ್ರೀಯ ಮತ್ತು ಜನಪದ ಕಲೆಗಳು ಹೇಗೆ ನಮ್ಮ ನಾಗರಿಕತೆಯನ್ನು ಬೆಳೆಸಿದೆ ಎಂಬುದನ್ನು ಜನರಿಗೆ ತೋರಿಸುವುದು ಉದ್ದೇಶವಾಗಿದೆ ಎಂದು ಈ ಕಾರ್ಯಕ್ರಮದ ರೂವಾರಿ ಡಾ. ಎಂ. ಮೋಹನ್ ಆಳ್ವ ಹೇಳಿದರು. ಜನಮನ ರಂಜಿಸಿದ ಭರ್ಜರಿ ಪ್ರದರ್ಶನಗಳು...
ಅತ್ಯಾಕರ್ಷಕ ಯೋಗದೀಪಿಕಾ ಪ್ರದರ್ಶನದೊಂದಿಗೆ ಆರಂಭವಾದ ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ಅಷ್ಟಲಕ್ಷ್ಮೀ ಶಾಸ್ತ್ರೀಯ ನೃತ್ಯ, ಬಡಗುತಿಟ್ಟು ಶಂಕರಾರ್ಧ ಶರೀರಿಣಿ ಮತ್ತು ತೆಂಕುತಿಟ್ಟಿನ ಹಿರಣಾಕ್ಷ ವಧೆ ಯಕ್ಷಗಾನ, ಗುಜರಾತಿನ ದಾಂಡಿಯಾ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ರೋಪ್ ಕಸರತ್ತು, ಡೊಳ್ಳು ಕುಣಿತ, ವರ್ಷಧಾರೆ ಕಥಕ್ ನೃತ್ಯ, ಪುರುಲಿಯ - ಸಿಂಹ ನೃತ್ಯ, ಬೊಂಬೆ ವಿನೋದಾವಳಿಗಳು ಮತ್ತು ಸಿಂಗಾರಿ ಮೇಳ ಫ್ಯೂಷನ್ ಕಾರ್ಯಕ್ರಮಗಳು ಭರ್ಜರಿಯಾಗಿ ಜನಮನ ರಂಜಿಸಿದವು. ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮ ವೀಕ್ಷಿಸಿದರು.