ನರಗುಂದ: ಕಳಸಾ ಬಂಡೂರಿ ಯೋಜನೆ ಕುರಿತು ರಾಜಕಾರಣ ಮಾಡದೇ ಪಕ್ಷಭೇದ ಮರೆತು ಒಗ್ಗಟ್ಟಿನ ಪ್ರದರ್ಶನ ತೋರಬೇಕಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತ್ರತ್ವದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ತಾಲೂಕಿನಲ್ಲಿ 1.44 ಲಕ್ಷ ಹೆಕ್ಟೇರ್ ಗೋವಿನ ಜೋಳ ಬೆಳೆಯಲಾಗಿದೆ. ಎಕರೆಗೆ 25ರಂತೆ 36 ಲಕ್ಷ ಕ್ವಿಂಟಲ್ ಮೆಕ್ಕೆಜೋಳ ಆಗುತ್ತದೆ. ಆದರೆ ರಾಜ್ಯ ಸರ್ಕಾರ ಜಿಲ್ಲೆಗೆ 31 ಸಾವಿರ ಕ್ವಿಂಟಲ್ ಖರೀದಿಗೆ ಅವಕಾಶ ನೀಡಿದೆ. ರೈತರ ಬೆಳೆಯನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಎಲ್ಲದಕ್ಕೂ ಕೇಂದ್ರದ ಕಡೆ ಬೊಟ್ಟು ಮಾಡುತ್ತಾ ರಾಜ್ಯ ಸರ್ಕಾರ ರೈತರ ದಿಕ್ಕನ್ನು ತಪ್ಪಿಸುತ್ತಿದೆ. ರೈತರ ಕಲ್ಯಾಣಕ್ಕಾಗಿ ಇರುವ 300 ಕೋಟಿ ಆವೃತ್ತ ನಿಧಿಯಲ್ಲಿ ರಾಜ್ಯ ಸರ್ಕಾರ ₹85-100 ಕೋಟಿ ಹಣ ಮಾತ್ರ ಬಳಸಿಕೊಂಡಿದೆ. ಇನ್ನುಳಿದ ಹಣ ಎಲ್ಲಿ ಹೋಯಿತು? ಆರ್ಥಿಕ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಎಡವಿದೆ. ಮಂತ್ರಿಗಳು, ಶಾಸಕರು, ಅಧಿಕಾರಿಗಳು ಆಡಳಿತ ನಡೆಸುವಲ್ಲಿ ಎಡವಿದ್ದಾರೆ. ರಾಜ್ಯ ಸರ್ಕಾರ ರೈತಪರ ಆಡಳಿತದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ ಎಂದರು.ಅಜ್ಜಪ್ಪ ಹುಡೇದ, ಬಿ.ಬಿ. ಐನಾಪುರ, ನಾಗನಗೌಡ ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ನಿಂಗಣ್ಣ ಗಾಡಿ, ಶಂಕರಗೌಡ ಯಲ್ಲಪ್ಪಗೌಡ್ರ, ಚಂದ್ರಶೇಖರ ದಂಡಿನ, ಸಂಭಾಜಿ ಕಾಶೀದ, ಎನ್.ಕೆ. ಸೋಮಾಪುರ, ಎನ್.ವಿ. ಮೇಟಿ, ಶಂಕ್ರಣ್ಣ ವಾಳದ, ಅಶೋಕ ಕೊಪ್ಪಳ, ಚಂದ್ರು ದಂಡಿನ, ಮಂಜುನಾಥ ಆನೇಗುಂದಿ, ಜೆ.ವಿ. ಕಂಠಿ, ಈಶ್ವರ ಮಾದಿನೂರ, ಬಸು ಪಾಟೀಲ, ಪವಾಡಪ್ಪ ವಡ್ಡಿಗೇರಿ, ಸಿದ್ದಪ್ಪ ಯಲಿಗಾರ, ಮಹೇಶ ಹಟ್ಟಿ, ನಾಗರಾಜ ನೆಗಳೂರ, ಈರಣ್ಣ ಹೊಂಗಲ, ಕಾರ್ಯದರ್ಶಿ ರಾಘವೇಂದ್ರ ಸಜ್ಜನ ಇದ್ದರು.