ಚಂದುಳ್ಳ ಚೆಲುವ; ಮಸ್ತ್‌ ಬ್ಯಾಟಿಂಗ್‌ ಮಾಡ್ತಾರ..!

KannadaprabhaNewsNetwork |  
Published : Dec 14, 2025, 03:30 AM IST
ಮಂೆ | Kannada Prabha

ಸಾರಾಂಶ

ಹೊರಟ್ಟಿ ಚಂದುಳ್ಳ ಚೆಲುವ. ಅವರ ಯೌವ್ವನದಲ್ಲಿನ ಭಾವಚಿತ್ರಗಳನ್ನು ನೋಡಿದರೆ ಎಷ್ಟೊಂದು ಹ್ಯಾಂಡಸಂ ಆಗಿದ್ದಾರೆ. ಹೊರಟ್ಟಿ ಅವರ ಬಗ್ಗೆ ಒಂದೇ ಒಂದು ಮಾತು ಹೇಳಬೇಕೆಂದರೆ ಹ್ಯಾಂಡಸಂ ಟೀಚರ್‌, ಇಂಟಲಿಜೆಂಟ್‌ ಪೊಲಿಟಿಷಿಯನ್‌ ಆ್ಯಂಡ್‌ ಸಿನ್ಸಿಯರ್‌ ಫೈಟರ್‌ ಎಂದು ಬೊಮ್ಮಾಯಿ ಬಣ್ಣಿಸಿದರು.

ಚಂದುಳ್ಳ ಚೆಲುವ; ಮಸ್ತ್‌ ಬ್ಯಾಟಿಂಗ್‌ ಮಾಡ್ತಾರೆ..!

ಇದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಹೊಗಳಿದ ಪರಿ.

ಹೊರಟ್ಟಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೊಮ್ಮಾಯಿ, ಹೊರಟ್ಟಿ ಅವರು ಮಣ್ಣಿನ ಮಗ. ನಮಗೆ ಮಾರ್ಗದರ್ಶಕರು ಆಗಿದ್ದಾರೆ. ಅವರನ್ನು ಕಂಡರೆ ಒಂದು ವಿಷಯದಲ್ಲಿ ಅಸೂಯೆ ಉಂಟಾಗುತ್ತದೆ. ಅವರು ಚಂದುಳ್ಳ ಚೆಲುವ. ಅವರ ಯೌವ್ವನದಲ್ಲಿನ ಭಾವಚಿತ್ರಗಳನ್ನು ನೋಡಿದರೆ ಎಷ್ಟೊಂದು ಹ್ಯಾಂಡಸಂ ಆಗಿದ್ದಾರೆ. ಹೊರಟ್ಟಿ ಅವರ ಬಗ್ಗೆ ಒಂದೇ ಒಂದು ಮಾತು ಹೇಳಬೇಕೆಂದರೆ ಹ್ಯಾಂಡಸಂ ಟೀಚರ್‌, ಇಂಟಲಿಜೆಂಟ್‌ ಪೊಲಿಟಿಷಿಯನ್‌ ಆ್ಯಂಡ್‌ ಸಿನ್ಸಿಯರ್‌ ಫೈಟರ್‌ ಎಂದು ಬಣ್ಣಿಸಿದರು. ಅಲ್ಲದೇ, ಹೊರಟ್ಟಿ ಮಾಸ್ತರ್‌ ಮಸ್ತ್‌ ಬ್ಯಾಟಿಂಗ್‌ ಮಾಡ್ತಾರೆ.. ಅವರ ಬ್ಯಾಟಿಂಗ್‌ ಹೀಂಗ್‌ ಮುಂದುವರಿಯಲಿ. ಮುಂದಿನ ಚುನಾವಣೆಯಲ್ಲೂ ಅವರೇ ಗೆಲ್ಲಲಿ ಎಂದು ಬೊಮ್ಮಾಯಿ ತಮ್ಮ ಅಭಿಮಾನದ ನುಡಿಗಳನ್ನು ಹೇಳಿದರು.ಉಸಿರು ನಿಂತರೂ ಹೆಸರು ಉಳಿಬೇಕು..!

ನಮ್ಮ ಕೆಲಸ ಹೇಗಿರಬೇಕೆಂದರೆ ಉಸಿರು ನಿಂತರೂ ನಮ್ಮ ಹೆಸರು ಉಳಿಯಬೇಕು. ಆ ರೀತಿ ಕೆಲಸ ಮಾಡಬೇಕು. ಆ ರೀತಿ ಮಾಡುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿ ಎಲ್ಲರಿಗೂ ಮಾದರಿ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದರು.

ಹೊರಟ್ಟಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೊರಟ್ಟಿ ಅವರ ಕಾರ್ಯವೈಖರಿ ಎಲ್ಲರಿಗೂ ಮಾದರಿ. ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ತಿಳಿಸುತ್ತಾ, ತಪ್ಪಾದಾಗ ತಿದ್ದಿ ಬುದ್ದಿನೂ ಹೇಳಿ ಮಾರ್ಗದರ್ಶನ ಮಾಡುತ್ತಾರೆ. ಉಸಿರು ನಿಂತರೂ ನಮ್ಮ ಹೆಸರು ಅಜಾರಾಮರ ಆಗಿ ಉಳಿಯುವಂತೆ ಕೆಲಸ ಮಾಡುತ್ತಿದ್ದಾರೆ ಹೊರಟ್ಟಿ ಅವರು. ಇಂಥ ಮಹಾನನಾಯಕರನ್ನು ಆದರ್ಶವನ್ನಾಗಿಸಿಕೊಂಡು ಯುವ ಸಮುದಾಯ ಬೆಳೆಯಬೇಕು ಎಂದರು.ಲವ್‌ ಆ್ಯಂಡ್‌ ಹೇಟ್‌ ರಿಲೇಷನ್‌!

ಹೊರಟ್ಟಿ ಅವರದು ಲವ್‌ ಆ್ಯಂಡ್‌ ಹೇಟ್‌ ರಿಲೇಷನ್‌. ಶಿಕ್ಷಕರ ಕೆಲಸವೆಂದರೆ ಬಲು ಪ್ರೀತಿ ಅವರಿಗೆ. ಎಷ್ಟೇ ಕಷ್ಟವಿದ್ದರೂ ಮಾಡಿಕೊಡುತ್ತಿದ್ದರು. ಇದಕ್ಕಾಗಿ ಯಾರನ್ನೇ ಆದರೂ ವಿರೋಧ ಹಾಕಿಕೊಳ್ಳಲು ಹಿಂಜರಿಯುತ್ತಿರಲಿಲ್ಲ. ಹೀಗಾಗಿ ಅವರದು ಲವ್‌ ಆ್ಯಂಡ್‌ ಹೇಟ್‌ ರಿಲೇಷನ್‌. ಹೀಗಾಗಿಯೇ ಅವರು ಪ್ರಬುದ್ಧ, ಪ್ರಜ್ಞಾವಂತ ಮತದಾರ ಇರುವ ಶಿಕ್ಷಕರ ಕ್ಷೇತ್ರದಿಂದ ಎಂಟು ಬಾರಿ ಆಯ್ಕೆಯಾದವರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹೊರಟ್ಟಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕರಾಗಿ ಶಿಕ್ಷಕರ ಸಂಘ ಕಟ್ಟಿ, ಚುನಾವಣೆಗೆ ನಿಂತು ಗೆದ್ದು ಬೀಗುವುದು ಅಷ್ಟೊಂದು ಸುಲಭದ ಮಾತಲ್ಲ. ತಮ್ಮ ಸಿಎಸ್‌ಆರ್‌ ನಿಧಿಯಡಿ ಶಾಲೆಗಳಿಗೆ ಕೆಲಸ ಮಾಡಿಸಿಕೊಡುವಾಗ ಅಧಿಕಾರಿಗಳು ಕಿರಿಕಿರಿಯನ್ನುಂಟು ಮಾಡುತ್ತಿದ್ದರು. ಆಗ ಹೊರಟ್ಟಿ ಅವರ ಗಮನಕ್ಕೆ ಈ ವಿಷಯ ತರುತ್ತಿದ್ದಂತೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಆದೇಶ ಹೊರಡಿಸುವಂತೆ ಮಾಡಿದ್ದರು ಎಂದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಅವರನ್ನು ಕೆಳಕ್ಕಿಳಿಸದಂತೆ ನೋಡಿಕೊಳ್ಳಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಹಾಸ್ಯವಾಗಿಯೇ ಹೇಳಿದರು.

ಪರಿಷತ್‌ ಸದಸ್ಯರಾಗಿ 45 ವರ್ಷಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಮುಂದೆ 50 ವರ್ಷಕ್ಕೂ ಅಭಿನಂದನೆ ಸಲ್ಲಿಸುತ್ತೇವೆ. ಅದಕ್ಕಾಗಿ ಈಗಲೇ ಉಳಿದವರ್‍ಯಾರು ಟಾವಲ್‌ ಹಾಕಬಾರದು ಎಂದರು. ಈ ಮೂಲಕ ಮುಂದಿನ ಚುನಾವಣೆಯಲ್ಲೂ ಅವರೇ ಅಭ್ಯರ್ಥಿ ಎಂದು ಸೂಚ್ಯವಾಗಿ ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ