ಉಡುಪಿ ಕ್ಲಸ್ಟರ್ ಈಶ ಗ್ರಾಮೋತ್ಸವ: 297 ತಂಡಗಳು ಭಾಗಿ

KannadaprabhaNewsNetwork |  
Published : Jul 29, 2026, 02:45 AM IST
ನಿಟ್ಟೆ ತಂಡ ತ್ರೋಬಾಲ್ ಚಾಂಪಿಯನ್ ಪ್ರಶಸ್ತಿ ಸ್ವೀಕರಿಸಿತು | Kannada Prabha

ಸಾರಾಂಶ

ಈಶ ಔಟ್‌ ರೀಚ್‌ ಆಯೋಜಿಸುವ ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾಹಬ್ಬ-ಈಶ ಗ್ರಾಮೋತ್ಸವದ 18ನೇ ಆವೃತ್ತಿಯ ಉಡುಪಿ ಕ್ಲಸ್ಟರ್ ಪಂದ್ಯಾವಳಿ ಇಲ್ಲಿನ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ಸಂಭ್ರಮದಿಂದ ಸಂಪನ್ನಗೊಂಡಿತು.

ಉಡುಪಿ: ಈಶ ಔಟ್‌ ರೀಚ್‌ ಆಯೋಜಿಸುವ ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾಹಬ್ಬ-ಈಶ ಗ್ರಾಮೋತ್ಸವದ 18ನೇ ಆವೃತ್ತಿಯ ಉಡುಪಿ ಕ್ಲಸ್ಟರ್ ಪಂದ್ಯಾವಳಿ ಇಲ್ಲಿನ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ಸಂಭ್ರಮದಿಂದ ಸಂಪನ್ನಗೊಂಡಿತು.

ಈ ಕ್ರೀಡಾಕೂಟದಲ್ಲಿ ಉಡುಪಿಯ ವಿವಿಧ ಹಳ್ಳಿಗಳಿಂದ ಒಟ್ಟು 297 ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ತಂಡಗಳು ಸ್ಪರ್ಧಿಸಿದವು. ರೋಚಕ ಪಂದ್ಯಗಳ ನಂತರ ಪುರುಷರ ವಾಲಿಬಾಲ್‌ನಲ್ಲಿ ಕುಂದಾಪುರ ಯಡ್ತಾಡಿ ತಂಡ ಪ್ರಥಮ, ಕಾರ್ಕಳ ತಾಲೂಕಿನ ಪಳ್ಳಿ ಫ್ರೆಂಡ್ಸ್ 2ನೇ, ಇನ್ನಾ ಮುದ್ದಾಣು ಮಹಾಲಿಂಗೇಶ್ವರ ತಂಡ 3ನೇ ಮತ್ತು ಉದ್ಯಾವರ ಪಿತ್ರೋಡಿಯ ಯೂಥ್ ಫ್ರೆಂಡ್ಸ್ 4ನೇ ಸ್ಥಾನ ಗೆದ್ದುಕೊಂಡವು. ಇಲ್ಲಿ ವಿಜೇತ ತಂಡಗಳು ಮುಂದೆ ವಿಭಾಗೀಯ ಹಂತದ ಪಂದ್ಯಗಳಲ್ಲಿ ಸ್ಪರ್ಧಿಸಲಿವೆ. ಮಹಿಳೆಯರ ಥ್ರೋಬಾಲ್‌ನಲ್ಲಿ ನಿಟ್ಟೆ ಯುನೈಟೆಡ್ ತಂಡ 1ನೇ, ಕುಂದಾಪುರ ಹಿಲಿಯಾಣ ತಂಡ 2ನೇ, ಶಿರ್ವದ ಕೆ.ಕೆ ಫ್ರೆಂಡ್ಸ್ ತಂಡ 3ನೇ ಮತ್ತು ಕಾಪು ಹೆಜಮಾಡಿ ಬೀಚ್ ಫ್ರೆಂಡ್ಸ್ ತಂಡ 4ನೇ ಸ್ಥಾನ ಪಡೆದುಕೊಂಡವು. ಕ್ರೀಡಾಂಗಣದಲ್ಲಿ ಅತ್ಯುತ್ತಮ ಕ್ರೀಡಾ ಮನೋಭಾವವನ್ನು ತೋರಿದ ಅಶ್ವಿತಾ ಮತ್ತು ಕಾರ್ತಿಕ್ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಉದ್ಯಮಿಗಳಾದ ಹರಿಪ್ರಸಾದ್ ರೈ, ಹರೀಶ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದು, ಸಾಮಾಜಿಕ ಮಾಧ್ಯಮ ಪ್ರಭಾವಿ ತನಿಷಾ ಶೆಟ್ಟಿ ಉಪಸ್ಥಿತರಿದ್ದರು. ಈಶ ಪ್ರತಿನಿಧಿ ಶ್ರೀನಿವಾಸ ಪ್ರಾಸ್ತಾವಿಕ ಮಾತುಗಳಲ್ಲಿ ಈಶ ಗ್ರಾಮೋತ್ಸವದ ವಿವರಗಳನ್ನು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕಿದಿಯೂರು ಕ್ರೆ.ಕೋ.ಆಪ್ ಸೊಸೈಟಿ ಕಿನ್ನಿಮುಲ್ಕಿ ಶಾಖೆ ಶುಭಾರಂಭ
ಹಾಸನ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂಲ್ಕಿಯ ಮಹಿಳೆ ಸಾವು