ನೂತನ ಬಿಷಪರಿಗೆ ಉಡುಪಿ ಕಾಂಗ್ರೆಸ್ ಗೌರವಾರ್ಪಣೆ

KannadaprabhaNewsNetwork |  
Published : May 23, 2026, 02:45 AM IST
21ಬಿಷಪ್ | Kannada Prabha

ಸಾರಾಂಶ

ಉಡುಪಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ‌ ಅಧಿಕಾರ ಸ್ವೀಕರಿಸಿರುವ ವಂ | ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಉಡುಪಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಧರ್ಮಾಧ್ಯಕ್ಷರ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಲಾಯಿತು.

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ‌ ಅಧಿಕಾರ ಸ್ವೀಕರಿಸಿರುವ ವಂ | ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರನ್ನು ಉಡುಪಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಧರ್ಮಾಧ್ಯಕ್ಷರ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಲಾಯಿತು.

ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಬಿಷಪ್‌ ಅವರು, ಎಲ್ಲರ ಮೇಲೆ ದೇವರ ಆಶೀರ್ವಾದ ಇರಲಿ, ಮಾನವೀಯ ಧರ್ಮ ಎಲ್ಲಕ್ಕಿಂತಲೂ ಶ್ರೇಷ್ಠ. ಪರಸ್ಪರ ಶಾಂತಿ ಸೌಹಾರ್ದತೆಯಿಂದ ಬದುಕಿ ಶೋಷಿತರಿಗೆ, ಅಶಕ್ತರಿಗೆ ಸಹಾಯ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳಗಿಸೋಣ ಎಂದರು.ಈ ಸಂದರ್ಭ ಪಕ್ಷದ ಪ್ರಮುಖರಾದ ವಿಜಯ್ ಪೂಜಾರಿ, ಮ್ಯಾಕ್ಸಿಮ್ ಡಿಸೋಜಾ, ಪ್ರಕಾಶ್ ಅಂದ್ರಾದೆ, ಸಂಧ್ಯಾ ತಿಲಕ್‌ರಾಜ್, ಶಶಿರಾಜ್ ಕುಂದರ್, ಸುಕೇಶ್ ಕುಂದರ್, ಹೇಮಲತಾ ಹಿಲಾರಿ ಜತ್ತನ್ನ, ಗಣೇಶ್ ನೆರ್ಗಿ, ಲತಾ ಆನಂದ್ ಶೇರಿಗಾರ್, ಸತೀಶ್ ಕುಮಾರ್ ಮಂಚಿ, ಸತೀಶ್ ಕೊಡವೂರು, ಜಯವೀರ್ ಫೆಡ್ರಿಕ್ಸ್, ವಿಲ್ಸನ್ ಸಿಕ್ವೇರಾ, ವನಿತಾ ಫೆರ್ನಾಂಡಿಸ್, ರಮೇಶ್ ಪಾಲ್, ಪ್ರೇಮಲತಾ ಸೋನ್ಸ್, ಜೋಸೆಫ್ ಪಿಂಟೋ, ಅನಿಲ್ ಗೊನ್ಸಾಲ್ವಿಸ್, ಲ್ಯಾನ್ಸಿ ಡಿಸೋಜಾ, ವಿವಾನ್ ಫೆರ್ನಾಂಡಿಸ್, ಐರಿನ್ ಮೆನೆಜಸ್, ರಿಚಾರ್ಡ್ ಡಿಸಿಲ್ವಾ, ರೋಸ್ಟನ್ ಡಿಸಿಲ್ವಾ, ಪ್ರವೀಣ್ ಮಸ್ಕರೇನಸ್, ಜೇಮ್ಸ್ ಡೇನಿಸ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಟಲಿ ಪ್ರಧಾನಿಗೆ ಚಾಕೋಲೇಟ್ ಕೊಟ್ಟಿದ್ದರಲ್ಲಿ ತಪ್ಪೇನಿದೆ?
ಅನಧಿಕೃತ ಹೋಂ ಸ್ಟೇ ವಿರುದ್ಧ ಕಾನೂನು ಕ್ರಮ