ರಾಜ್ಯದ ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಅದರಂತೆ ಉಡುಪಿ ಜಿಲ್ಲೆಯ 7 ತಾಲೂಕು ಪಂಚಾಯತುಗಳ ಒಟ್ಟು 95 ಸದಸ್ಯ ಸ್ಥಾನಗಳಲ್ಲಿ 49 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಉಡುಪಿ ; ರಾಜ್ಯದ ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಅದರಂತೆ ಉಡುಪಿ ಜಿಲ್ಲೆಯ 7 ತಾಲೂಕು ಪಂಚಾಯತುಗಳ ಒಟ್ಟು 95 ಸದಸ್ಯ ಸ್ಥಾನಗಳಲ್ಲಿ 49 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.ಅನುಸೂಚಿತ ಜಾತಿಯ 8 ಸ್ಥಾನಗಳಲ್ಲಿ 7 ಮಹಿಳೆಯರಿಗೆ, ಅನುಸೂಚಿತ ಪಂಗಡದ 7 ಸ್ಥಾನಗಳಲ್ಲಿ ಎಲ್ಲಾ 7 ಮಹಿಳೆಯರಿಗೆ, ಹಿಂದುಳಿದ ವರ್ಗ (ಅ)ದ 23 ಸ್ಥಾನಗಳಲ್ಲಿ 3 ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗ (ಬಿ)ದ 6 ಸ್ಥಾನಗಳಲ್ಲಿ 4 ಮಹಿಳೆಯರಿಗೆ ಹಾಗೂ ಸಾಮಾನ್ಯ ವರ್ಗದ 51 ಸ್ಥಾನಗಳಲ್ಲಿ 28 ಮಹಿಳೆಯರಿಗೆ ಮೀಸಲಿಡಲಾಗಿದೆ.
ಹೆಬ್ರಿ ತಾಪಂ : ಒಟ್ಟು ಸ್ಥಾನಗಳು 7(4), ಅನುಸೂಚಿತ ಜಾತಿಗೆ 1(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 1(1), ಹಿಂದುಳಿದ ವರ್ಗ (ಬಿ)ಕ್ಕೆ 0(0) ಹಾಗೂ ಸಾಮಾನ್ಯ ವರ್ಗಕ್ಕೆ 4(1) ಸ್ಥಾನಗಳನ್ನು ಮೀಸಲಿಡಲಾಗಿದೆ.ಬೈಂದೂರು ತಾಪಂ : ಒಟ್ಟು ಸ್ಥಾನಗಳು 11(6), ಅನುಸೂಚಿತ ಜಾತಿಗೆ 1(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 2(1), ಹಿಂದುಳಿದ ವರ್ಗ (ಬಿ)ಕ್ಕೆ 1(1) ಹಾಗೂ ಸಾಮಾನ್ಯ ವರ್ಗಕ್ಕೆ 6(2) ಸ್ಥಾನಗಳನ್ನು ಮೀಸಲಿಡಲಾಗಿದೆ.
ಕಾಪು ತಾಪಂ : ಒಟ್ಟು ಸ್ಥಾನಗಳು 12(6), ಅನುಸೂಚಿತ ಜಾತಿಗೆ 1(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 3(2), ಹಿಂದುಳಿದ ವರ್ಗ (ಬಿ)ಕ್ಕೆ 1(0) ಹಾಗೂ ಸಾಮಾನ್ಯ ವರ್ಗಕ್ಕೆ 6(2) ಸ್ಥಾನಗಳನ್ನು ಮೀಸಲಿಡಲಾಗಿದೆ.
ಉಡುಪಿ ತಾಪಂ : ಒಟ್ಟು ಸ್ಥಾನಗಳು 13(7), ಅನುಸೂಚಿತ ಜಾತಿಗೆ 1(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 3(2), ಹಿಂದುಳಿದ ವರ್ಗ (ಬಿ)ಕ್ಕೆ 1(0) ಹಾಗೂ ಸಾಮಾನ್ಯ ವರ್ಗಕ್ಕೆ 7(3) ಸ್ಥಾನಗಳನ್ನು ಮೀಸಲಿಡಲಾಗಿದೆ.
ಕಾರ್ಕಳ ತಾಪಂ : ಒಟ್ಟು ಸ್ಥಾನಗಳು 16(8), ಅನುಸೂಚಿತ ಜಾತಿಗೆ 2(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 4(2), ಹಿಂದುಳಿದ ವರ್ಗ (ಬಿ)ಕ್ಕೆ 1(1) ಹಾಗೂ ಸಾಮಾನ್ಯ ವರ್ಗಕ್ಕೆ 8(3) ಸ್ಥಾನಗಳನ್ನು ಮೀಸಲಿಡಲಾಗಿದೆ.
ಬ್ರಹ್ಮಾವರ ತಾಪಂ : ಒಟ್ಟು ಸ್ಥಾನಗಳು 16(8), ಅನುಸೂಚಿತ ಜಾತಿಗೆ 1(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 4(2), ಹಿಂದುಳಿದ ವರ್ಗ (ಬಿ)ಕ್ಕೆ 1(1) ಹಾಗೂ ಸಾಮಾನ್ಯ ವರ್ಗಕ್ಕೆ 9(3) ಸ್ಥಾನಗಳನ್ನು ಮೀಸಲಿಡಲಾಗಿದೆ.ಕುಂದಾಪುರ ತಾಪಂ : ಒಟ್ಟು ಸ್ಥಾನಗಳು 20(10), ಅನುಸೂಚಿತ ಜಾತಿಗೆ 1(1), ಅನುಸೂಚಿತ ಪಂಗಡಕ್ಕೆ 1(1), ಹಿಂದುಳಿದ ವರ್ಗ (ಅ)ಕ್ಕೆ 6(3), ಹಿಂದುಳಿದ ವರ್ಗ (ಬಿ)ಕ್ಕೆ 1(1) ಹಾಗೂ ಸಾಮಾನ್ಯ ವರ್ಗಕ್ಕೆ 11(4) ಸ್ಥಾನಗಳನ್ನು ಮೀಸಲಿಡಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.