ಉಡುಪಿ ಕನ್ನಡ ಸಾಹಿತ್ಯ ಪರಿಷತ್‌: ‘ಮನೆಯೇ ಗ್ರಂಥಾಲಯ’ ಅಭಿಯಾನ

KannadaprabhaNewsNetwork |  
Published : Jul 04, 2025, 11:50 PM ISTUpdated : Jul 04, 2025, 11:51 PM IST
04ಮನೆ | Kannada Prabha

ಸಾರಾಂಶ

ಮಣಿಪಾಲ ಮಂಚಿಕೆರೆ ಬಳಿಯ ಗ್ರೀನ್ ವ್ಯಾಲಿ ಪ್ಯಾರಡೈಸ್ ಫಾರ್ ಸೀನಿಯರ್ ಸಿಟಿಜನ್ ನಲ್ಲಿ ಗುರುವಾರ ‘ಮನೆಯೇ ಗ್ರಂಥಾಲಯ ಅಭಿಯಾನ’ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ವತಿಯಿಂದ ಮಣಿಪಾಲ ಮಂಚಿಕೆರೆ ಬಳಿಯ ಗ್ರೀನ್ ವ್ಯಾಲಿ ಪ್ಯಾರಡೈಸ್ ಫಾರ್ ಸೀನಿಯರ್ ಸಿಟಿಜನ್ ನಲ್ಲಿ ಗುರುವಾರ ‘ಮನೆಯೇ ಗ್ರಂಥಾಲಯ ಅಭಿಯಾನ’ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಸಂಸ್ಥೆಯ ಪ್ರಮುಖರಾದ ಡಾ. ಇಂದಿರಾ ಶಾನುಭಾಗ್ ಮತ್ತು ಡಾ.ವೆಂಕಟೇಶ್ ಶಾನುಭಾಗ್ ಅವರನ್ನು ಗೌರವಿಸಲಾಯಿತು. ‘ನಮ್ಮ ಮನೆ, ನಮ್ಮ ಮರ’ ತಂಡದ ವತಿಯಿಂದ ವಿವಿಧ ಗಿಡಗಳನ್ನು ಸಂಸ್ಥೆಯ ಆವರಣದಲ್ಲಿ ನೆಡಲಾಯಿತು.

ಉದ್ದೇಶಿಸಿ ಮಾತನಾಡಿದ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಕಸಾಪ ಉಡುಪಿ ತಾಲೂಕು ಘಟಕ ತನ್ನ ವೈವಿಧ್ಯಪೂರ್ಣವಾದ ಕಾರ್ಯಕ್ರಮಗಳಿಂದ ರಾಜ್ಯದಲ್ಲಿ ಹೆಸರು ಪಡೆದಿದೆ. ಈ ಅಭಿಯಾನಗಳು ನಿರಂತರವಾಗಿ ನಡೆಯುತ್ತಿದ್ದು, ಸಾಹಿತ್ಯಪ್ರಿಯರ ಮನಸ್ಸುಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದರು.ಉರಗತಜ್ಞ ಗುರುರಾಜ ಸನಿಲ್ ಮಾತನಾಡಿ, ಬದುಕಿನ ವಿವಿಧ ಹಂತಗಳಲ್ಲಿ ಅನುಭವ ಪಡೆದು ಇದೀಗ ನಿವೃತ್ತಿ ಜೀವನ ನಡೆಸುತ್ತಿರುವ ಎಲ್ಲ ಹಿರಿಯ ನಾಗರಿಕರು ನಮಗೆಲ್ಲ ಆದರ್ಶರು. ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಬಹಳ ಹತ್ತಿರದ್ದಾಗಿದೆ ಪ್ರಕೃತಿಯನ್ನು ಬೆಳೆಸುವಲ್ಲಿ ನಾವೆಲ್ಲರೂ ಕೂಡ ನಮ್ಮಿಂದಾದ ಕೊಡುಗೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಡಾ.ವಿಶ್ವನಾಥ ಶಾನುಭಾಗ್, ಡಾ.ತಾರಾ ಶಾನುಭಾಗ್ ಭಾಗವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜನಿ ವಸಂತ್, ನಿರೂಪಕ ಅವಿನಾಶ್ ಕಾಮತ್, ದೀಪಾ ಚಂದ್ರಕಾಂತ್, ವಸಂತ್ ಮುಂತಾದವರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ