ಇಲ್ಲಿನ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠದಲ್ಲಿ ಆಷಾಢ ಮಾಸದ ಕೃಷ್ಣ ಪಕ್ಷದ ಪಂಚಮಿಯ ಪ್ರಯುಕ್ತ ಸೋಮವಾರ ಶ್ರೀಮದ್ ಜಯತೀರ್ಥರ ಆರಾಧನೆ ಜರುಗಿತು.
ಉಡುಪಿ: ಇಲ್ಲಿನ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠದಲ್ಲಿ ಆಷಾಢ ಮಾಸದ ಕೃಷ್ಣ ಪಕ್ಷದ ಪಂಚಮಿಯ ಪ್ರಯುಕ್ತ ಸೋಮವಾರ ಶ್ರೀಮದ್ ಜಯತೀರ್ಥರ ಆರಾಧನೆ ಜರುಗಿತು.
ಬೆಳಿಗ್ಗೆ ವಿದ್ವಾಂಸರಿಂದ ಜಯತೀರ್ಥರ ಕೃತಿಯಾದ ಶ್ರೀಮನ್ ನ್ಯಾಯ ಸುಧಾ ಗ್ರಂಥದ ಪಾರಾಯಣ ಹಾಗೂ ಸಂಜೆ ಐದು ಗಂಟೆಗೆ ಪರ್ಯಾಯ ಶ್ರೀಪಾದರ ನೇತೃತ್ವದಲ್ಲಿ ಶ್ರೀಮದ್ ಜಯತೀರ್ಥರ ಪ್ರತಿಮೆ ಹಾಗೂ ಗ್ರಂಥಗಳ ಮೆರವಣಿಗೆ ರಥಬೀದಿಯಲ್ಲಿ ನಡೆಯಿತು.ನಂತರ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಅನುಗ್ರಹ ಸಂದೇಶ ಹಾಗೂ ಡಾ. ಪ್ರತೋಷ ಆಚಾರ್ಯ ಮತ್ತು ಡಾ. ಆನಂದತೀರ್ಥ ಸಗ್ರಿ ಅವರಿಂದ ಜಯತೀರ್ಥರ ಸಾರ್ವಭೌಮ ವ್ಯಕ್ತಿತ್ವ ಎಂಬ ವಿಷಯದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಉಪಸ್ಥಿತರಿದ್ದ ಎಲ್ಲ ವಿದ್ವಾಂಸರನ್ನು ಗೌರವಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.